ಕಪ್ಪಗಲ್ಲು ಗ್ರಾಪಂ ಚುನಾವಣೆಯಲ್ಲಿ ಪಾರ್ವತಿ ಓಂಕಾರಪ್ಪ ಪ್ರಚಂಡ ಗೆಲುವು

ಬಳ್ಳಾರಿ: ಮೂರು ದಶಕಗಳ ಬಳಿಕ ನಡೆದ ತಾಲೂಕಿನ ಕಪ್ಪಗಲ್ಲು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಒಂದನೇ ವಾರ್ಡಿನ ಮಹಿಳಾ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿದ್ದ ಶ್ರೀಮತಿ ಪಾರ್ವತಿ ಓಂಕಾರಪ್ಪ ಅವರು ಪ್ರಚಂಡ ಗೆಲವು ಸಾಧಿಸಿದ್ದಾರೆ.
ತಮ್ಮ ಸಮೀಪದ ಪ್ರತಿ ಸ್ಪರ್ಧಿ ಅಂಜಮ್ಮ ಅವರನ್ನು 258 ಭಾರಿ ಮತಗಳ ಅಂತರದಿಂದ ಪರಾಜಯಗೊಳಿಸುವ ಮೊದಲ ಬಾರಿಗೆ ಗ್ರಾಮ ಪಂಚಾಯಿತಿ ಪ್ರವೇಶಿಸಿದ್ದಾರೆ.
ಪಾರ್ವತಿ ಓಂಕಾರಪ್ಪ ಅವರು 440 ಮತಗಳನ್ನು ಪಡೆದರೆ, ಅಂಜಮ್ಮ ಅವರು ಕೇವಲ 182 ಮತಗಳನ್ನು ಗಳಿಸಿದ್ದಾರೆ. ಕಣದಲ್ಲಿದ್ದ ಹುಲಿಗೆಮ್ಮ 156, ವರಲಕ್ಷ್ಮಿ 76 ಹಾಗೂ ರೇಣುಕಾ 15 ಮತಗಳನ್ನು ಪಡೆದಿದ್ದಾರೆ.
ಕಳೆದ ಮೂರು ದಶಕಗಳಿಂದ ಕಪ್ಪಗಲ್ಲು ಗ್ರಾಪಂ ಚುನಾವಣೆ ನಡೆಯದೇ ಎಲ್ಲಾ ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡುವ ಪರಿಪಾಠವಿತ್ತು. ಚುನಾವಣೆ ನಡೆದರೆ ಗ್ರಾಮದ ಜನರಲ್ಲಿ ಮನಸ್ತಾಪ ಉಂಟಾಗುತ್ತದೆ. ಸಾಮರಸ್ಯ ಹಾಳಾಗುತ್ತದೆ ಎನ್ನುವ ಕಾರಣಕ್ಕೆ ಗ್ರಾಮದ ಹಿರಿಯರು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗ್ರಾಪಂ ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡುತ್ತಿದ್ದರು‌ ಎಂದು ಗ್ರಾಮಸ್ಥರು ಹೇಳುತ್ತಾರೆ.