ಕರ್ನಾಟಕ ಕಹಳೆ ಡಾಟ್ ಕಾಮ್ ನ್ಯೂಸ್ ಪೋರ್ಟಲ್ ಇಂದಿನಿಂದ(ಜ.1) ಪ್ರತಿದಿನವೂ ಓರ್ವ ಕವಿಯೊಬ್ಬರ ಕವಿತೆಯನ್ನು ಪ್ರಕಟಿಸುತ್ತದೆ ಎಂದು ತಿಳಿಸಲು ಹರ್ಷಿಸುತ್ತೇವೆ.
ಕವಿತೆ ‘ಸಾಹಿತ್ಯ ಸಂಸ್ಕೃತಿ’ CATEGORYಯಲ್ಲಿ ‘ಅನುದಿನ ಕವನ’ ಹೆಸರಿನಲ್ಲಿ ದಿನವೂ ಪ್ರಕಟವಾಗುವುದು.
ಇಂದು ಹಿರಿಯ ಕವಿ ಬಳ್ಳಾರಿಯ ಟಿ ಕೆ ಗಂಗಾಧರ ಪತ್ತಾರ ಅವರ ‘ಹೊಸ ವರ್ಷದ ಹಾಡು’ ಕವನವನ್ನು ಅತ್ಯಂತ ಪ್ರೀತಿಯಿಂದ ಪಬ್ಲೀಷ್ ಮಾಡುತ್ತಿದ್ದೇವೆ.
ಹೊಸವರ್ಷದ ಹಾಡು
*******
ಮಾರ್ಗಶಿರದ
ಚಳಿಯ ನಡುವೆ
ಬಂತು ವರ್ಷ ನೂತನಾ
“ನಿನ್ನೆ” ಉಂಡ
ಬಾಳ ನಂಜು
“ಇಂದು” ಇರುವ ಯಾತನಾ
ಎಲ್ಲ ಮರೆಸಿ
ತರಲಿ “ನಾಳೆ”
ಸೊಗದ ಹರ್ಷ ಚೇತನಾ
ಮಾನವತೆಯ
ಕಿರಣ ಬೆಳಗಿ
ನಗಲಿ ವಿಶ್ವ ಕೇತನಾ
-ಟಿ.ಕೆ.ಗಂಗಾಧರ ಪತ್ತಾರ.