ಬಳ್ಳಾರಿ:ಸಂಭ್ರಮದಿಂದ ಶಾಲಾ ಕಾಲೇಜು ಪುನರಾರಂಭ, ಕೆ.ಪಿ.ಎಸ್ ಬಾಲಕಿಯರ ಶಾಲಾ ಕಾರ್ಯಕ್ರಮದಲ್ಲಿ ಶಾಸಕರು ಭಾಗಿ

ಬಳ್ಳಾರಿ: ‘ಕೊರೊನಾ ಓಡಿಸೋಣ….ಮಕ್ಕಳನ್ನು ಸುರಕ್ಷಿತವಾಗಿ ಓದಿಸೋಣ’ ಎಂಬ ಧ್ಯೇಯದೊಂದಿಗೆ ಹೊಸ ವರ್ಷದ ಮೊದಲ ದಿನವಾದ ಇಂದು ಶಾಲಾ ಕಾಲೇಜುಗಳು ಆರಂಭಗೊಂಡವು.
6ರಿಂದ 9 ನೇ ತರಗತಿಯ ವಿದ್ಯಾಗಮ-2 ಹಾಗೂ 10 ನೇ ತರಗತಿ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ನಗರದ ಕೆ.ಪಿ.ಎಸ್.ಬಾಲಕಿಯರ ಶಾಲೆಯಲ್ಲಿ ಶಾಸಕ ಜಿ.ಸೋಮಶೇಖರ್ ರೆಡ್ಡಿ ಅವರು ವಿದ್ಯುಕ್ತವಾಗಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ತಂದೆ ತಾಯಿ ಮತ್ತು ಗುರುಗಳ ಆಶೀರ್ವಾದ ಇದ್ದರೆ ಸಾಧನೆಗೆ ಪ್ರೇರಣೆಯಾಗುತ್ತದೆ ಎಂದು ಹೇಳಿದರು.
ಕೋವಿಡ್ -19 ಕರೋನ ಮುನ್ನೆಚ್ಚರಿಕೆ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಲು ಪೂರ್ವ ವಲಯದ ಬಿ.ಇ.ಓ. ಟಿ.ಎಂ.ಸಿದ್ಧಲಿಂಗ ಮೂರ್ತಿ ಅವರು ಸೂಚನೆಗಳನ್ನು ನೀಡಿದರು.
ಎಸ್.ಎಸ್.ಎಲ್.ಸಿ.ಫಲಿತಾಂಶದಲ್ಲಿ ಉತ್ತಮವಾಗಿ ಅಂಕಗಳನ್ನು ಗಳಿಸಬೇಕು ಎಂದು ಉತ್ತೇಜಿಸಿದ ಬಿಇಓ ಅವರು ಹೆಚ್ಚು ಅಂಕಗಳಿಸಲು ಕೆಲವು ಟಿಪ್ಸ್ ನೀಡಿದರು.
ಇದೇ ಸಂದರ್ಭದಲ್ಲಿ ನಗರದ ಅಭಯ ಫೌಂಡೇಶನ್ ಸಂಸ್ಥೆಯ ಮುಖ್ಯಸ್ಥರು,ಪದಾಧಿಕಾರಿಗಳು ಉಚಿತವಾಗಿ ಎಲ್ಲಾ ವಿದ್ಯಾರ್ಥಿಗಳಿಗೆ ಮಾಸ್ಕ್ ವಿತರಿಸಿದರು
ಕಾರ್ಯಕ್ರಮದಲ್ಲಿ ಕೆ.ಎಂ.ಎಫ್.ನಿರ್ದೇಶಕ ವೀರಶೇಖರ ರೆಡ್ಡಿ, ಬಳ್ಳಾರಿ ಮಹಾನಗರ ಪಾಲಿಕೆ ಸದಸ್ಯ ಮಲ್ಲನಗೌಡ್ರು, ಕೆ.ಪಿ.ಎಸ್.ಪ್ರಾಚಾರ್ಯ ಮಹಾಲಿಂಗನಗೌಡ್ರು, ಬಿ.ಆರ್.ಸಿ.ಮಲ್ಲಪ್ಪ. ಶಿಕ್ಷಣ ಸಂಯೋಜಕ(ಪ್ರೌಢಶಾಲಾ ವಿಭಾಗ) ಗೂಳೆಪ್ಪ ಬೆಳ್ಳೇಕಟ್ಟೆ, ಸನ್ಮಾರ್ಗಗೆಳೆಯರ ಬಳಗದ ಚಂದ್ರಶೇಖರ್ ಆಚಾರ್, ಮುಖ್ಯ ಗುರು ಕೇಶವಣ್ಣ, ಅಭಯಾಂಜನೇಯ ಫೌಂಡೇಷನ್ ಅಧ್ಯಕ್ಷರು,ಕಾರ್ಯದರ್ಶಿ ಪದಾಧಿಕಾರಿಗಳು, ಶಾಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು.