ಬಳ್ಳಾರಿ: ಜಿಲ್ಲೆಯ ಸಂಡೂರು ಬಳಿಯ ಕುಮಾರಸ್ವಾಮಿ ದೇವಸ್ಥಾನದ ರಸ್ತೆಯ ದುರವಸ್ಥೆ ಕಂಡು ಹಿರಿಯ ಪತ್ರಕರ್ತರೂ, ಸಾಹಿತಿಗಳೂ ಆದ ಚಂದ್ರಕಾಂತ ವಡ್ಡು ಅವರು ಆಕ್ರೋಶ ವ್ಯಕ್ಯಪಡಿಸಿದ್ದಾರೆ.
ಸಂಡೂರಿನಲ್ಲಿ ಗಣಿಗಾರಿಕೆ ಹಾವಳಿ ಕಡಿಮೆಯಾಗಿದೆ ಅಥವಾ ನಿಂತಿದೆ ಅಂತ ಯಾರಾದರೂ ಭಾವಿಸಿದರೆ ಅದು ಮೂರ್ಖತನವಾದೀತು ಎಂದು ಟೀಕಿಸಿದ್ದಾರೆ.
ಈಚೆಗೆ ಕುಟುಂಬ ಸಮೇತ ಕುಮಾರಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ್ದ ವಡ್ಡು ಅವರು ಹಾಳಾದ, ಧೂಳು ತುಂಬಿದ ರಸ್ತೆಯಲ್ಲಿ ಜೀವವನ್ನು ಕೈಯಲ್ಲಿ ಹಿಡಿದುಕೊಂಡೆ ಸಂಚರಿಸಬೇಕು ಬೇಕು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಪ್ರತಿದಿನವೂ ಕುಮಾರಸ್ವಾಮಿ ದೇವಸ್ಥಾನಕ್ಕೆ ನೂರಾರು ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಾರೆ. ಅಷ್ಟೇ ಸಂಖ್ಯೆಯಲ್ಲಿ ನಾಡಿನ ಪ್ರವಾಸಿಗರು ಸಂಡೂರಿನ ಹಸಿರನ್ನು ನೋಡಲು ಬರುತ್ತಾರೆ.
ಹರಿಶಂಕರ ಸುತ್ತಲಿನ ಗಣಿಗಳಿಂದ ಜಿಂದಲ್ ಕಂಪನಿಗೆ ಅದಿರು ಸಾಗಿಸುವ ಈ ಲಾರಿಗಳ ಆರ್ಭಟದಲ್ಲಿ ಇಲ್ಲಿನ ಪರಿಸರ ಉಳಿದೀತು ಹೇಗೆ ಉಳಿದೀತು? ಈ ಭಾಗದಿಂದ ಜಿಂದಾಲ್ ಕಂಪನಿಗೆ ಅದಿರು ಸಾಗಿಸುವ ಸಾವಿರಾರು ಲಾರಿಗಳು ರಸ್ತೆ ತಮ್ಮದೇ ಎಂಬಂತೆ ಆಕ್ರಮಿಸಿಕೊಂಡು ಓಡಾಡುತ್ತಿವೆ.
ಜಿಲ್ಲೆಯ ಪೊಲೀಸ್, ಗಣಿ, ಅರಣ್ಯ, ಸಾರಿಗೆ, ಪರಿಸರ ಇಲಾಖೆಗಳು, ಜಿಲ್ಲಾಡಳಿತ ಏನು ಮಾಡುತ್ತಿವೆ ಎಂದು ವಡ್ಡು ಅವರು ಪ್ರಶ್ನಿಸಿದ್ದಾರೆ.
ಜಿಲ್ಲಾ ಉಸ್ತುವಾರಿಯನ್ನು ಹೊತ್ತಿರುವ ಅರಣ್ಯ ಮತ್ತು ಪರಿಸರ ಮಂತ್ರಿ ಆನಂದ್ ಸಿಂಗ್ ಅವರು ಇದೇ ಜಿಲ್ಲೆಯವರು ಎಂದು ವ್ಯಂಗವಾಡಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಡಳಿತ ಸಂಡೂರಿನತ್ತ ಗಮನ ಹರಿಸಬೇಕಾದ ತುರ್ತಿದೆ