ಮರಿಯಮ್ಮನಹಳ್ಳಿ: ಕನ್ನಡ ನಾಡಿನ ಸಾಹಿತ್ಯ, ಸಂಸ್ಕೃತಿ,ನಾಡು-ನುಡಿ ಹಾಗು ನೆಲಜಲದ ಕನ್ನಡದ ಪರಿಚಾರಕನಾಗಿ ಕನ್ನಡ ಸೇವೆ ಸಲ್ಲಿಸುತ್ತೇನೆ ಎಂದು ನಾಡೋಜ ಡಾ.ಮಹೇಶಜೋಷಿ ಹೇಳಿದರು.
ಅವರು ಪಟ್ಟಣದ ಸಚ್ಚಿದಾನಂದ ಶೆಟ್ಟಿ ರವರ ನಿವಾಸದಲ್ಲಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಜೀವ ಸದಸ್ಯರ ಸಭೆಯಲ್ಲಿ ಪಾಲ್ಗೊಂಡು,ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿ ಮತಯಾಚನೆ ಮಾಡಿ ಮಾತನಾಡಿದರು. ಕನ್ನಡದ ಪರಿಚಾರಕನಾಗಿ ನಾನು ರಾಜ್ಯದ ಕ.ಸಾ.ಪ.ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಯಾಗಿ ಸ್ಪರ್ಧಿಸುತ್ತಿದ್ದೇನೆ.ಕನ್ನಡ ನೆಲ-ಜಲ,ಸಂಸ್ಕೃತಿ ಪರ ಹೋರಾಟಗಳಿಗೆ,ಮೊದಲಿಗನಾಗಿ ಹೋರಾಟಕ್ಕಿಳಿಯುತ್ತೇನೆ.ಅಲ್ಲದೇ ಕನ್ನಡ ನಾಡಿನ ಎಲ್ಲಾ ವೈವಿಧ್ಯದವರೊಂದಿಗೆ ಸಂಘಟಿಸಿ,ಕನ್ನಡ ಸಾಹಿತ್ಯ ಪರಿಷತ್ತನ್ನು, ಜನಸಾಮಾನ್ಯರ ಜನರ ಪರಿಷತ್ತನ್ನಾಗಿ ಪರಿವರ್ತಿಸುವೆ ಎಂದರು. ಕ.ಸಾ.ಪ.ದಲ್ಲಿ ಮಹಿಳೆಯರಿಗೆ ಆದ್ಯತೆ ನೀಡಿ,ಮಹಿಳೆಯರು ಕನ್ನಡ ಪರ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಅವಕಾಶವನ್ನು ನೀಡುತ್ತೇನೆ.
ಕನ್ನಡ ಅ್ಯಪ್ ತಯಾರಿಸಿ ಆ ಮೂಲಕ ಅಮೂಲಾಗ್ರ ಬದಲಾವಣೆ ತರಲು ಮುಂದಾಗುತ್ತೇನೆಂದರು.ರಾಜ್ಯ ಮಟ್ಟದ ಅಧ್ಯಕ್ಷ ಸ್ಥಾನದಂತೆ ಜಿಲ್ಲಾ, ತಾಲ್ಲೂಕು, ಹೋಬಳಿ ಘಟಕಗಳಿಗೂ ಸೂಕ್ತ ವ್ಯಕ್ತಿಗಳನ್ನು ನೇಮಿಸಿ ಕನ್ನಡ ನಾಡಿನ ಸಮಗ್ರ ಅಭಿವೃದ್ಧಿ, ಪ್ರತಿ ಹಳ್ಳಿಗೂ ಮುಟ್ಟಿಸುವ ಭಗೀರಥ ಪ್ರಯತ್ನ ಮಾಡಲು ಕ.ಸಾ.ಪ.ಸದಸ್ಯರು ಬೆಂಬಲಿಸಬೇಕೆಂದು ಮನವಿಮಾಡಿದರು.
ಈ ಸಂಧರ್ಭದಲ್ಲಿ ಉಪನ್ಯಾಸಕ ಹೆಚ್.ಎಸ್.ಗುರುಪ್ರಸಾದ,ಡಿ.ರಾಘಶೆಟ್ಟಿ ಮಾತನಾಡಿದರು. ಸಚ್ಚಿದಾನಂದ ಶೆಟ್ಟಿ, ಬಿ.ಎಂ.ಎಸ್.ಮೃತ್ಯುಂಜಯ,ಕೀರ್ತಿರಾಜಜೈನ್, ಚಿದ್ರಿಸತೀಶ,ಜಿ.ಸತ್ಯನಾರಾಯಣ ಶೆಟ್ಟಿ,ಪ್ರಸಾದಜೋಷಿ,ಬದ್ರಿನಾಥಶೆಟ್ಟಿ, ಹುರುಕೊಳ್ಳಿ ಮಂಜುನಾಥ, ಕುಬೇರಾಚಾರಿ, ಪತ್ರಕರ್ತ ಸಿ. ಪ್ರಕಾಶ, ಕೃಷ್ಣ ಬಾಕಳೆ ಇತರರಿದ್ದರು.
ಬಳಿಕ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಮಾತ ಮಂಜಮ್ಮಜೋಗತಿ ಅವರ ನಿವಾಸಕ್ಕೆ ಭೇಟಿ ನೀಡಿ ಗೌರವಿಸಿದರು. ಉಪನ್ಯಾಸಕ ಸೊಮೇಶ ಉಪ್ಪಾರ ನಿರ್ವಹಿಸಿದರು.