ಮತ್ತೆ ಬಾ ವಿದ್ಯಾಗಮ
ಸಾಂಪ್ರದಾಯಿಕ ಕಲಿಕಾ ಪ್ರಕ್ರಿಯೆಗೆ
ಪರ್ಯಾಯ ವ್ಯವಸ್ಥೆಯೇ
ವಿದ್ಯಾಗಮ.
ಕಳಚಿಕೊಂಡ ಗುರು-ಶಿಷ್ಯರ ಕೊಂಡಿಯನ್ನು
ಹೊಸ ಬೆಸುಗೆಯಲಿ ಬೆಸೆದ ವಿದ್ಯಾಗಮ.
ರಾಜ್ಯಾದ್ಯಂತ ಯಶಸ್ಸು ಕಂಡ
ಕಾರ್ಯಕ್ರಮ ವಿದ್ಯಾಗಮ
ಅವರಿವರ ದೃಷ್ಟಿ ತಾಗಿ ನಿಂತೇ ಹೋಯಿತು ವಿದ್ಯಾಗಮ.
ಸರ್ವ ಮತದ ಸಮುದಾಯ
ಒಪ್ಪಿಕೊಂಡ ಯೋಜನೆ
ವಿದ್ಯಾರ್ಥಿ-ಶಿಕ್ಷಕ ಮನಸಾರೆ ಅಪ್ಪಿಕೊಂಡ ಯೋಜನೆ.
ಯಾರು ಹೇಳಬೇಕು ಮನೆಯಲಿ ಮಕ್ಕಳಿಗೆ ಪಾಠ
ಕೂಲಿಗಾಗಿ ಪ್ರತಿದಿನ
ಹೊಲದ ಕಡೆ ಓಟ.
ನಿಂತು ಹೋದ ವಿದ್ಯಾಗಮ
ಮತ್ತೆ ಪ್ರಾರಂಭ ಮಾಡಿ
ಮಕ್ಕಳ ಕಲಿಕಾ ಪ್ರಗತಿ
ನೀವೇ ನಿಂತು ನೋಡಿ.
– ರವೀಂದ್ರ ವೀ. ಕಮ್ಮಾರ,
ಮುಖ್ಯ ಗುರುಗಳು,
ಸ.ಹಿ.ಪ್ರಾ.ಶಾಲೆ,. ಅಂಕಲಿ,
ಹೂವಿನ ಹಡಗಲಿ ತಾ. ಬಳ್ಳಾರಿ ಜಿಲ್ಲೆ