ಬಳ್ಳಾರಿ,ಜ.11: ಬಳ್ಳಾರಿ ಜಿಲ್ಲೆಯ ನೂತನ ಜಿಲ್ಲಾಧಿಕಾರಿಗಳಾಗಿ ಪವನಕುಮಾರ್ ಮಾಲಪಾಟಿ ಅವರು ಸೋಮವಾರ ಅಧಿಕಾರ ಸ್ವೀಕರಿಸಿದರು.
ಕೇಂದ್ರ ಹಣಕಾಸು ಸಚಿವರ ಆಪ್ತ ಕಾರ್ಯದರ್ಶಿಗಳಾಗಿ ನಿಯೋಜಿತರಾಗಿರುವ ನಿರ್ಗಮಿತ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ನೂತನ ಜಿಲ್ಲಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಿದರು.
ಪವನಕುಮಾರ್ ಮಾಲಪಾಟಿ ಅವರು 2012ನೇ ಬ್ಯಾಚ್ ನ ಐಎಎಸ್ ಅಧಿಕಾರಿಗಳಾಗಿದ್ದು,ವಾಣಿಜ್ಯ ತೆರಿಗೆಗಳ(ಜಾರಿ)ಹೆಚ್ಚುವರಿ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಮಾಲಪಾಟಿ ಅವರು ಈ ಹಿಂದೆ ಹೊಸಪೇಟೆ ಸಹಾಯಕ ಆಯುಕ್ತರಾಗಿಯೂ ಕೆಲಸ ನಿರ್ವಹಿಸಿದ್ದರು.
ಈ ಹಿನ್ನಲೆಯಲ್ಲಿ ನೂತನ ಜಿಲ್ಲಾಧಿಕಾರಿಗಳಿಗೆ ಬಳ್ಳಾರಿ ಜಿಲ್ಲೆಯ ಪರಿಚಯವಿದೆ.
ಅಭಿನಂದನೆಗಳು ಸರ್ ತಮ್ಮ ಅಗಮನದಿಂದ ದೀನಾ ದಲಿತ ಬಡವರ ಬಾಳಿಗೇ ಆಶಾದಿಪಾವಾಗಿರಿ ಮತ್ತು ಬುದ್ದ ಬಸವ ಅಂಬೇಡ್ಕರ್ ಅವರಾ ಆಶೀರ್ವಾದ ವು ಸದಾ ನಿಮ್ಮವಮೆಲಿರಲಿ ಮನೊಜ್ ಕುಮರ್ ಸಿ ಎ ಹಿರೇಕುಂಬಳಗುಂಟೆ ಭಾರತಿಯ ಮಾನವ ಹಕ್ಕುಗಳ ಹಿತರಕ್ಷಣಾ ಸಮೀತಿ ಅದ್ಯಕ್ಷರು ಕೂಡ್ಲಿಗಿ ತಾಲೂಕು ಘಟಕದ ವತಿಯಿಂದ
ಅಭಿನಂದನೆಗಳು ಸರ್ ತಾವು ಬೀದರ್ ಜಿಲ್ಲಾ ಪಂಚಾಯತ್ ಸಿಇಒ ಕೆಲಸ ಮಾಡಿರುವುದು ನಮ್ಮಗೆ ಹೆಮ್ಮೆಯ ವಿಷಯವಾಗಿದೆ, ತಾವುವೀವಾಗ ಬಳ್ಳಾರಿ ಜಿಲ್ಲೆಯ ಜಿಲ್ಲಾಧಿಕಾರಿ ಆಗಿ ನೇಮಕ ಆಗಿರುವುದು ತುಂಬಾ ಖುಷಿ ತಂದಿರುತ್ತದೆ ಧನ್ಯವಾದಗಳು