ಬಳ್ಳಾರಿಯಲ್ಲಿ ಜ.14ರಂದು ‘ಭಾರತದ ಸಂವಿಧಾನ’ ಕುರಿತು ವಿಚಾರ ಸಂಕಿರಣ

ಬಳ್ಳಾರಿ: ನಾಳೆ(ಜ.೧೪)ಭಾರತದ ಸಂವಿಧಾನದ
ಕುರಿತು ವಿಚಾರ ಸಂಕಿರಣವನ್ನು ನಗರದ ಎಸ್ಪಿ ಕಚೇರಿಯ ಸಭಾಂಗಣದಲ್ಲಿ ಜ.14ರಂದು ಗುರುವಾರ ಬೆ. 10ಗಂಟೆಗೆ ಆಯೋಜಿಸಲಾಗಿದೆ.
ವಿಚಾರ ಸಂಕಿರಣದಲ್ಲಿ ಬಳ್ಳಾರಿ ವಲಯದ ಪೊಲೀಸ್ ಮಹಾನಿರೀಕ್ಷಕರಾದ ಶ್ರೀ ಎಂ. ನಂಜುಂಡಸ್ವಾಮಿ ಅವರು ಪಾಲ್ಗೊಳ್ಳಲಿದ್ದಾರೆ.
ನಗರದ ಅಧ್ಯಾಪಕರು, ಸಾಹಿತಿಗಳು, ಚಿತ್ರ ಕಲಾವಿದರು, ವಿವಿಧ ಸಂಘ ಸಂಸ್ಥೆಗಳ ಮುಖಂಡರು ವಿಚಾರ ಸಂಕಿರಣದಲ್ಲಿ ಪಾಲ್ಗೊಳ್ಳುವರು.
ಇದೇ ಸಂದರ್ಭದಲ್ಲಿ ಸಂಗೀತ ಕಾರ್ಯಕ್ರಮವನ್ನೂ ಏರ್ಪಡಿಸಲಾಗಿದೆ.