ಸಮರಸವಾಗಲಿ ಸಂಕ್ರಾಂತಿ
-ಎ.ಎಂ.ಪಿ. ವೀರೇಶಸ್ವಾಮಿ, ಹೊಳಗುಂದಿ,
ಭಾವ ಬಂಧಗಳ ಬೆಸುಗೆ
ಈ ಸಂಕ್ರಾಂತಿ
ಮೈ ಮನಗಳ ಒಸಗೆ
ಈ ಸಂಕ್ರಾಂತಿ-ಪ
ಮರವು ಚಿಗುರಲಿ
ಬರವು ನೀಗಲಿ
ಶಾಂತಿ ಬೆಳಗಲಿ
ಕ್ರಾಂತಿ ನೆಲೆಸಲಿ
ಹೂವು ಅರಳಲಿ
ನೋವು ಕರಗಲಿ
ಸಮತೆ ಸಾರಲಿ ಸಂಕ್ರಾತಿ-1
ಮಳೆಯು ಸುರಿಯಲಿ
ಇಳೆಯು ತಣಿಯಲಿ
ಹೊಳೆಯು ತುಂಬಲಿ
ಹೊಲವು ಬೆಳೆಯಲಿ
ಬೆಲೆಯು ದೊರೆಯಲಿ ರೈತಗೆ
ನೆಲೆಯು ಲಭಿಸಲಿ ಸಮೃದ್ಧಿ ತರಲಿ ಸಂಕ್ರಾತಿ-2
ಜಾತಿ ಕೊಳೆಯಲಿ
ನೀತಿ ಹೊಳೆಯಲಿ
ಪ್ರೀತಿ ತೊಳಗಲಿ
ದ್ವೇಷ ತೊಲಗಲಿ
ಸತ್ಯ ಉಳಿಯಲಿ
ಮಿಥ್ಯ ಅಳಿಯಲಿ
ನಿತ್ಯ ನೂತನವಾಗಲಿ ಸಂಕ್ರಾತಿ-3
ಸಂಗೀತ ತುಂಗೆಯಾಗಲಿ
ಸಾಹಿತ್ಯ ಭದ್ರೆಯಾಗಲಿ
ಜ್ಞಾನ ಕಲೆ ಸಿದ್ಧಿಸಲಿ
ವಿಜ್ಞಾನ ವೃದ್ಧಿಸಲಿ
ನೋವೇ ಬರಲಿ ನಲಿವೇ ಇರಲಿ ಸಮರಸವಾಗಲಿ ಸಂಕ್ರಾತಿ-4
(ಕವಿ ಎ.ಎಂ.ಪಿ. ವೀರೇಶಸ್ವಾಮಿ, ಹೊಳಗುಂದಿ ಅವರು ಬಳ್ಳಾರಿಯ ವೀರಶೈವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ)