ಅನುದಿನ ಕವನ-೧೫

ಕಾವ್ಯ ಕನ್ನಿಕೆ

ನನ್ನಕಾವ್ಯ ಕನ್ನಿಕೆ ಕಾವ್ಯ ಕನ್ನಿಕೆಯ ನಾನೇಗೆ ಬಣ್ಣಿಸಲಿ
ನನ್ನ ಕಾವ್ಯ ಕನ್ನಿಕೆಯ ಬೇಸಾಯವನ್ನೇಷ್ಟು ಬಣ್ಣಿಸಲಿ?

ಈ ನನ್ನ ಫಲವತ್ತಾದ ಮನದಲ್ಲಿ ಮೂಡುವ ಕವನಗಳು
ಅವಳು ಮದುರ ಭಾವದಿ ನನ್ನ ಕಾವ್ಯದ ಎದೆಯೊಳು
ಬಿತ್ತುವ ನವಿರಾದ ಗಟ್ಟಿ ಬಂಧದ ಕಾಳ ಬೀಜಗಳು
ಟಿಸಿಲೊಡೆದು ಬೆಳೆದು ಮನದಂಗಳಕ್ಕೆಲ್ಲಾ ಹರಡಲು
ಬೆಳೆಯುತ್ತಿರುವ ಬಯಕೆಗಳ ಒಲವಿನ ಮೊಳಕೆಗಳು.

ನನ್ನ ಕಾವ್ಯ ಕನ್ನಿಕೆಯ ನಾನೇಗೆ ಬಣ್ಣಿಸಲಿ
ನನ್ನ ಕಾವ್ಯ ಕನ್ನಿಕೆಯ ಬೇಸಾಯವನ್ನೇಷ್ಟು ಬಣ್ಣಿಸಲಿ?

ನನ್ನ ಬಳಿಗೆ ಸಾರಿ ಬಂದ ಅವಳು ಬಾಳಬದುವಿಗೆ ಎಂದೂ
ಹೋಗದಂತೆ ಮನದಮಾಳದಲ್ಲಿ ಒಲವ ಗೇಯ್ಮೆಯ
ಗೇಯುತ್ತಾ ಸದಾಗೆಲುವಾಗಿ ಉಳಿಯುವ ಪ್ರೀತಿ ಬಿತ್ತುವವಳು
ಪ್ರೀತಿ ಬೆಳೆಯುವ ಈ ಪದಗಾರನ ಪ್ರೀತಿಯ ಬೆಳೆಗಾರಳು
ಪದಗಾರನ ಪದಮಾಳದೊಳು ಪದಗಳ ಬೆಳೆಸುಯುವವಳು

ನನ್ನ ಕಾವ್ಯ ಕನ್ನಿಕೆಯ ನಾನೇಗೆ ಬಣ್ಣಿಸಲಿ
ನನ್ನ ಕಾವ್ಯ ಕನ್ನಿಕೆಯ ಬೇಸಾಯವನ್ನೇಷ್ಟು ಬಣ್ಣಿಸಲಿ?

ಕಾವ್ಯಮಾಳದಲ್ಲಿ ಸುಳಿದರೊಂದು ಕವನವ ಕಿಳುವವಳು
ಕವನದ ಹೊಲದಲ್ಲೊಂದು ಸುತ್ತು ಸುತ್ತಿದರೊಂದು
ರಾಶಿ ರಾಶಿ ಒಲವ ಕವಿತೆಗಳ ಕೂಯ್ಲು ಮಾಡುವಳು
ಲೋಕದಲ್ಲಿನ್ನಾರೂ ಬೆಳೆಯದಷ್ಟು ದಾಖಲಾತಿಯ
ಕಾವ್ಯದ ಕಟ್ಟುಗಳ ಮೂಟೆಗಳ ಜಗಕ್ಕೆ ಹಂಚುವವಳು

ನನ್ನ ಕಾವ್ಯ ಕನ್ನಿಕೆಯ ನಾನೇಗೆ ಬಣ್ಣಿಸಲಿ
ನನ್ನ ಕಾವ್ಯ ಕನ್ನಿಕೆಯ ಬೇಸಾಯವನ್ನೇಷ್ಟು ಬಣ್ಣಿಸಲಿ?

ಬಯಸಿ ಬಯಸಿ ಈ ಪದಗಳ ಬೇಸಾಯಗಾರನ ಕಟ್ಟಿಕೊಂಡವಳು
ಬಾಳಲ್ಲಿ ಬದುಕಲ್ಲಿ ಅವನ ಮನದಮಾಳದಲ್ಲಿ ಅಡಗಿದ ಜೀವನವ
ಕಂಡುಕೊಂಡು ಗಟ್ಟಿಗಿತ್ತಿಯಾಗಿ ತನ್ನ ಬಣ್ಣ ಬಿಣ್ಣಾಣಗಳನ್ನೆ ಬುತ್ತಿಮಾಡಿ
ಪದಗಾರನಿಗೆ ಊಣ ಬಡಿಸಿ ಆತನ ಕಾವ್ಯದ ಕೈಯನ್ನು ಬಲಪಡಿಸುತ್ತಾ
ತನ್ನ ಬಳಲಿಕೆ ತೊಳಲಿಕೆಗಳ ತೊಲಗಿಸುತ್ತಾ ಕಾವ್ಯಕೃಷಿಗೆ ನೆರವಾದವಳು.

ನನ್ನ ಕಾವ್ಯ ಕನ್ನಿಕೆಯ ನಾನೇಗೆ ಬಣ್ಣಿಸಲಿ
ನನ್ನ ಕಾವ್ಯ ಕನ್ನಿಕೆಯ ಬೇಸಾಯವನ್ನೇಷ್ಟು ಬಣ್ಣಿಸಲಿ?

ಬಣ್ಣಿಸದೆ ಹೇಗೆ ಇರಲಿ ಪದಗಳ ಬೇಸಾಯಗಾರನ ಮನದವಳು
ನನ್ನ ಕಾವ್ಯ ಮಾಳದಲ್ಲಿ ಸದಾ ಗೆಲುವಾಗಿ ಹರಿದಾಡುವವಳು
ಒಲವ ಕವನಗಳ ಬೆಳಸಿಗೆ ಚೈತನ್ಯದ ಚಿಲುಮೆಯ ಸಿಂಚನಳು
ಮಾತಿಗೊಂದು ಮೌನಕ್ಕೊಂದು ಕುಂತಾಗೊಂದು ನಿಂತಾಗೊಂದು
ತನ್ನ ಉಸಿರಿಂದ ಬೆವರಿಂದ ಇರುವಿಕೆಯಿಂದ ಕಾವ್ಯವಾಗುವವಳು.

ನನ್ನ ಕಾವ್ಯ ಕನ್ನಿಕೆಯ ನಾನೇಗೆ ಬಣ್ಣಿಸಲಿ
ನನ್ನ ಕಾವ್ಯ ಕನ್ನಿಕೆಯ ಬೇಸಾಯವನ್ನೇಷ್ಟು ಬಣ್ಣಿಸಲಿ?
ನನ್ನ ಕಾವ್ಯ ಕನ್ನಿಕೆಯ ನಾನೇಗೆ ಬಣ್ಣಿಸಲಿ
ನನ್ನ ಕಾವ್ಯ ಕನ್ನಿಕೆಯ ಬೇಸಾಯವನ್ನೇಷ್ಟು ಬಣ್ಣಿಸಲಿ?
– ಮನಂ