ಕರ್ನಾಟಕ ಕಹಳೆ*
___________________
ಕರ್ನಾಟಕದ ಕಹಳೆ
ಮೊಳಗುತ್ತಿದೆ ಬಾನಿನೆಡೆ
ಧ್ವನಿಸುತ್ತಿದೆ ಎಲ್ಲೆಡೆ !
ಹೊಸ – ಹೊಸ ಅವಿಷ್ಕಾರವ
ತನ್ನೊಡಲಿನಿಂದ ಹೊರ ಚಿಮ್ಮುತ್ತಿದೆ
ಕರುನಾಡ ಕಂಪನು
ಸುತ್ತಲೂ ಪಸರಿಸುತ್ತಿದೆ !
ವ್ಯಕ್ತಿಯ ಪರಿಚಯ
ಪ್ರಬುದ್ಧ ಲೇಖನ
ದಿನ ನಿತ್ಯ ನಡೆಯುವ
ಚಿತ್ರಣ
ಎಲ್ಲವೂ ನಿನ್ನಲ್ಲಡಗಿದೆ
ಸಮೃದ್ಧಿಯ ಹೂರಣ !
‘ಅನುದಿನ ‘ಕವನ , ಹನಿಗವನಗಳ ಮೂಲಕ ಕವಿ, ಕವಿಯತ್ರಿಯರನ್ನು ಪರಿಚಯಿಸುವ ಪರಿ ಎನಿತು ಬಣ್ಣಿಸಲಿ ನಿನ್ನ ವೈಖರಿ
ಹೆಂಗಳೆಯರ ಮನೆಯಂಗಳದ
ಚಿತ್ತಾರದ ರಂಗವಲ್ಲಿ
ಕಹಳೆಯಲ್ಲಿ ಮಿನುಗುತಿರಲಿ
ನಗು ಬೀರುತಿರಲಿ !
ಕಹಳೆಯನ್ನು ಕೈ ಹಿಡಿದು
ನಡೆಸುವ ನಾವಿಕ
” ಸಂಸ್ಕೃತಿ ಪ್ರಕಾಶನ ” ದ
ಪ್ರಕಾಶಕ
ನಿತ್ಯ – ನಿರಂತರ
ಬೆಳಗಲಿ – ಮೊಳಗಲಿ
ಈ ಕಹಳೆ
ಇದು ‘ಕರ್ನಾಟಕದ ಕಹಳೆ’.
-ಶೋಭಾ ಮಲ್ಕಿ ಒಡೆಯರ್
ಹೂವಿನ ಹಡಗಲಿ