ಅನುದಿನ ಕವನ-೨೦

ಗದಗಿನಲ್ಲಿ ಖಜಾನೆ ಇಲಾಖೆಯ ಉಪನಿರ್ದೇಶಕರಾಗಿರುವ ಶ್ರೀ ಹರಿನಾಥ ಬಾಬು ಸೂಕ್ಷ್ಮ ಸಂವೇದನೆಯ ಕವಿ. ತಮ್ಮ ಕವಿತೆ, ಹಾಯ್ಕುಗಳ ಮೂಲಕ ಕಾವ್ಯಪ್ರಿಯರ ಮನಗೆದ್ದಿರುವ ಇವರು ಮೂಲತಃ ಬಳ್ಳಾರಿ ಜಿಲ್ಲೆಯ ಸಿರುಗುಪ್ಪದವರು.
ಹಲವು ಕವನ ಸಂಕಲನ ಪ್ರಕಟವಾಗಿವೆ.
*****
ಇಂದಿನ ‘ಅನುದಿನ ಕವನ’ದ ಗೌರವಕ್ಕೆ ಜನಕವಿ ಹರಿನಾಥಬಾಬು ಅವರ ಹಾಯ್ಕುಗಳು ಪಾತ್ರವಾಗಿವೆ.
(ಸಂಪಾದಕರು:ಕರ್ನಾಟಕ ಕಹಳೆ ಡಾಟ್ ಕಾಮ್)👇

—-

ಹಾಯ್ಕುಗಳು

***
ಸೇರಿಕೊಂಡವು
ಎರಡು ರಸ್ತೆಗಳು
ಜೋಡಿ ಜೀವವು
*
ಉದ್ದನೆ ಕೋಲು
ಬೆಳಕು ಹರಿಯಿತು
ತೆರೆ ಮನವ
*
ಜೀವವೇ ನೀನು
ಗಾಳಿ ಸುಳಿದಾಡಿತು
ಗೆಳತಿಯಿಲ್ಲ
*
ಬೆಳ್ಳಕ್ಕಿ ಹಿಂಡು
ಆಗಸವ ತುಂಬಿದೆ
ಚಂದಿರನೆಲ್ಲೋ
*
ಬಾನು ಕನ್ನಡಿ
ಮೋಡದ ಸುಳಿವಿಲ್ಲ
ಕಣ್ಣು ಕುರುಡು
*
ಹೂಗಳ ನೋಡಿ
ಅವಳೆಡೆಗೆ ಬಾಗಿದೆ
ಕೆನ್ನೆ ತುಂಬಾ ಮಕರಂದ
*
ಚಂದನೆಯ ಹೂ
ದಾರಿಯೆಲ್ಲಾ ವಾಸನೆ
ಇಲ್ಲೆಲ್ಲೋ ಅವಳ ಮನೆ
*
ನಿನ್ನೆ ಸಿಕ್ಕಳು
ಇಂದು ಅವಳ ಮದುವೆ
ಪಾರಿಜಾತವೇ
*
ಹೂ ಅರಳಿತು
ದುಂಬಿ ನೃತ್ಯಗೈಯಿತು
ಮುಗಿದ ದಿನ
*
ಇಂದು ಹೇಳಿದೆ
ನಾಳೆ ಬರುವುದಿಲ್ಲ
ಗೋರಿ ಮೇಲೆ ಹೂ
*
ಬಾಡಿದ ಹೂವು
ಮತ್ತೆ ಅರಳುವುದೆ?
ಮೂಡಣ ಕೆಂಪು
*
ನಿನ್ನೊಳಗೆ ನಾ
ಕಡಲೊಳು ಹರಿದ
ನದಿಯ ನಡೆ
*

ವಿ.ಹರಿನಾಥ ಬಾಬು ಸಿರುಗುಪ್ಪ
9480041312