ತುಮಕೂರು: ಹಾವೇರಿಯಲ್ಲಿ ಮುಂದಿನ ತಿಂಗಳು ಫೆ.26ರಿಂದ ನಡೆಯಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಪ್ರೊ.ದೊಡ್ಡ ರಂಗೇ ಗೌಡರನ್ನು ಆಯ್ಕೆ ಮಾಡಲಾಗಿದೆ.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್ ಅವರು ಈ ವಿಷಯ ತಿಳಿಸಿದ್ದಾರೆ. ಅಧ್ಯಕ್ಷರ ಆಯ್ಕೆಗೆ ಅಂತಿಮ ಪಟ್ಟಿಯಲ್ಲಿ ನಾಲ್ಕೈದು ಜನ ಹಿರಿಯ ಸಾಹಿತಿಗಳ ಹೆಸರು ಗಳಿದ್ದವು. ಅಂತಿಮವಾಗಿ ದೊಡ್ಡ ರಂಗೇಗೌಡರನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.
ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಕುರುಬಹಳ್ಳಿಯ ಗೌಡರ ಆಯ್ಕೆಯನ್ನು ಜಿಲ್ಲೆಯ ಸಾಂಸ್ಕೃತಿಕ ಲೋಕ ಸ್ವಾಗತಿಸಿದೆ.