ಇಂದು ಬಳ್ಳಾರಿಯಲ್ಲಿ ಡಾ. ವೆಂಕಟಯ್ಯ ಅಪ್ಪಗೆರೆ ಅವರ “ದಣಿವರಿಯದ ಪಯಣ” ಅನುಭವ ಕಥನ ಬಿಡುಗಡೆ

ಬಳ್ಳಾರಿ: ಸಂಸ್ಕೃತಿ ಪ್ರಕಾಶನದ 26 ನೇ ಕೃತಿ ಕರ್ನಾಟಕ ಬ್ಯಾಂಕಿನ ನಿವೃತ್ತ ರಿಜಿನಲ್ ಮ್ಯಾನೇಜರ್, ಹಿರಿಯ ಸಾಹಿತಿ, ವಿಚಾರವಾದಿ ಡಾ. ವೆಂಕಟಯ್ಯ ಅಪ್ಪಗೆರೆ ಅವರ ‘ದಣಿವರಿಯದ ಪಯಣ’ ಅನುಭವ ಕಥನದ ಲೋಕಾರ್ಪಣೆ ಕಾರ್ಯಕ್ರಮ ಇಂದು (ಜ.೨೪) ಲೋಕಾರ್ಪಣೆಗೊಳ್ಳಲಿದೆ.
ನಗರದ ಕೌಲ್ ಬಜಾರ್ ಮುಖ್ಯ ರಸ್ತೆಯ ರೇಯ್ಸ್ ಆಸ್ಪತ್ರೆಯ ಸಭಾಂಗಣದಲ್ಲಿ ಭಾನುವಾರ ಬೆ. 10-30ಗಂಟೆಗೆ ಬಳ್ಳಾರಿ ವಲಯದ ಪೊಲೀಸ್ ಮಹಾನಿರೀಕ್ಷಕರೂ ಆಗಿರುವ ಸಾಹಿತಿ, ಸಂಶೋಧಕ ಎಂ. ನಂಜುಂಡಸ್ವಾಮಿ* ಅವರು ಕೃತಿ ಬಿಡುಗಡೆ ಮಾಡಲಿದ್ದಾರೆ.
ಕರ್ನಾಟಕ ಗ್ರಾಮೀಣ ಬ್ಯಾಂಕಿನ ಅಧ್ಯಕ್ಷ ಶ್ರೀನಾಥ್ ಜೋಷಿ ಅವರು*ಸಮಾರಂಭದ ಅಧ್ಯಕ್ಷತೆ ವಹಿಸುವರು.
ಕೃತಿಯನ್ನು *ಪ್ರಜಾವಾಣಿ ಮುಖ್ಯ ವರದಿಗಾರ, ಸಾಹಿತಿ ಕೆ.‌ನರಸಿಂಹಮೂರ್ತಿ ಅವರು* ಪರಿಚಯಿಸುವರು.
ಮುಖ್ಯ ಅತಿಥಿಯಾಗಿ ಸಹಾಯಕ ಪ್ರಾಧ್ಯಾಪಕ ಡಾ. ಪಲ್ಲವ ವೆಂಕಟೇಶ್ ಅವರು ಪಾಲ್ಗೊಳ್ಳುವರು.
ರೇಯ್ಸ್ ಆಸ್ಪತ್ರೆಯ ಸಹಯೋಗದಲ್ಲಿ ನಡೆಯುವ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಸಹೃದಯ ಸಾಹಿತ್ಯ ಮನಸುಗಳಿಗೆ ಪ್ರೀತಿಯ ಸ್ವಾಗತ ವನ್ನು ಸಂಸ್ಕೃತಿ ಪ್ರಕಾಶನದ ಸಿ.ಮಂಜುನಾಥ್, ಕೃತಿಕಾರ ಡಾ. ವೆಂಕಟಯ್ಯ ಅಪ್ಪಗೆರೆ ಹಾಗೂ ರೇಯ್ಸ್ ಆಸ್ಪತ್ರೆಯ ಮುಖ್ಯಸ್ಥ ಟಿ ಆರ್

ಕೃಷ್ಣಮೂರ್ತಿ ಅವರು ಕೋರಿದ್ದಾರೆ.