ಮಾದಾರ ಧೂಳಯ್ಯ ವಚನ
*****
ನಡೆವಾತನ ಕಾಲ ತರಿದು
ಕೊಡುವಾತನ ಕೈಯ ಮುರಿದು
ನುಡಿವಾತನ ನಾಲಗೆಯ ಕಿತ್ತು
ನೋಡುವಾತನ ಕಣ್ಣ ಕಳೆದು
ಅರಿದೆಹೆನೆಂಬ ಸೂತಕವ ಮುನ್ನವೆ ಮರೆದು
ಅರಿದ ಮತ್ತೆ ತರುವಿನ ಶಾಖೆಯಲ್ಲಿ ತೋರುವ ಅರಗಿನ ಉರಿಯ ಯೋಗದಂತೆ
ತನುವಿನ ಮೇಲಣ ಕುರುಹು
ಮನದ ಮೇಲಣ ಸೂತಕ
ನೆನಹು ನಿಷ್ಪತ್ತಿಯಾದಲ್ಲಿ
ಕಾಮಧೂಮ ಧೂಳೇಶ್ವರ ಏನೂ ಎನಲಿಲ್ಲ.
—-
ಶರೀರದ ಮಧ್ಯದಲಿೢ ನಿರವಯವಪ್ಪ ಆತ್ಮ .
ಸುಖ:ದುಖ;ಗಳಲಿೢ ಅನುಭವಿಸಿವುದು
ಅರಿವೊ ? ಆತ್ಮನೋ ? ಬೇರಿಪ್ಪುದೊಂದು
ಕುರುಹೋ ?
ಅರಿದಡೆ ಕುರುಹೆಂಬುದೊಂದು ತೆರನಿಲೣ.
ಶಿಲೆಯಿಂದ ಹಲವು ರೂಪ ಮಾಡಿ.
ತಮ್ಮ ತಮ್ಮ ಒಲವರಕ್ಕೆ ಬಲುಹೆಂಬುದು
ಶಿಲೆಯೋ ? ಮನವೋ ?
ಈ ಹೊಲಬನರಿತಲಿೣ, ವಿಶ್ವರೂಪಂಗೆ
ನೆಲೆ ಹೊಲೆ ಕುಲ ಛಲ ಭಾವ ಭ್ರಮೆ
ಮತ್ತೇನೂ ಇಲೣ
ಕಾಮಧೂಳ ಧೂಳೇಶ್ವರ.
—–
ಪಂಚೇಂದ್ರಿಯಂಗಳಲ್ಲಿ ಒಂದರ ಗುಣವ ಒಂದರಿಯದಿರೆ,
ಹಿಂಗಿ ಲಿಂಗಕ್ಕರ್ಪಿತವಾದ ಮುಖವಿನ್ನೆಂತೊ ?
ತದ್ಭಾವಂಗಳ ತದ್ಭಾವದಿಂದಲ್ಲದೆ ಅರಿಯಬಾರದು.
ಕೊಡುವ ಅಂಗಭೇದ ಹಲವಲ್ಲದೆ ಅರಿವಾತ್ಮ ಒಂದೆ ಭೇದ.
ತಾ ತನ್ನ ಮರೆದಲ್ಲಿ ಮರಣ, ತಾ ತನ್ನನರಿದಲ್ಲಿ ಜನನ.
ನಾ ನೀನೆಂಬ ಭಾವದ ಭ್ರಮೆ ಹರಿದಲ್ಲಿ,
ತಟ್ಟುವ ಮುಟ್ಟುವ ಕೃತ್ಯದ ಸೂತಕ ಇತ್ತಲೆ ಉಳಿಯಿತ್ತು.
ಕಾಮಧೂಮ ಧೂಳೇಶ್ವರನತ್ತಲೈದಾನೆ.
—–
ಅರಿದು ಕಂಡೆಹೆನೆಂಬನ್ನಬರ,
ಅರಿವಿಂಗೆ ಮುನ್ನವೆ ಪರಿಪೂರ್ಣವಸ್ತು.
ಬೇರೊಂದ ಕುರುಹಿನಿಂದ ಅರಿದೆಹೆನೆಂದಡೆ,
ಆ ಅರಿವಿನಿಂದ ಕುರುಹಿನ ಕುಲ ಹರಿಯಬೇಕು.
ಉತ್ತರ ಪೂರ್ವವೆಂಬ ಉಭಯದ
ರಕ್ಷೆಯ ಸೂತಕ ಹರಿದು, ನಿಶ್ಚಯವಾದ
ಪರಿಪೂರ್ಣಂಗೆ ಹೆಚ್ಚು ಕುಂದೆಂಬುದಿಲ್ಲ,
ಕಾಮಧೂಮ ಧೂಳೇಶ್ವರ.
——
ಅಟ್ಟೆಯ ಚುಚ್ಚುವ ಉಳಿಯ ಮೊನೆಯಲ್ಲಿ,
ಪ್ರತ್ಯಕ್ಷವಾದ ಪರಮೇಶ್ವರನ ಕಂಡು,
ಇತ್ತಲೇಕಯ್ಯಾ, ಕಾಯದ ತಿತ್ತಿಯ ಹೊತ್ತಾಡುವನ ಮುಂದೆ ?
ನಿನ್ನ ಭಕ್ತರ ಠಾವಿನಲ್ಲಿಗೆ ಹೋಗಿ ಮುಕ್ತಿಯ ಮಾಡು.
ನೀ ಹೊತ್ತ ಬಹುರೂಪದಿ ತಪ್ಪದೆ
ರಜತಬೆಟ್ಟದ ಮೇಲಕ್ಕೆ ಹೋಗು,
ನಿನ್ನ ಭಕ್ತರ ಮುಕ್ತಿಯ ಮಾಡು.
ಕಾಮಧೂಮ ಧೂಳೇಶ್ವರನ ಕರುಣದಿಂದ ನೀನೆ ಬದುಕು.
-ಮಾದಾರ ಧೂಳಯ್ಯ
(ಸಂಗ್ರಹ: ಡಾ. ವಡ್ಡಗೆರೆ ನಾಗರಾಜಯ್ಯ
ಚಿಂತಕರು, ಸಂಶೋಧಕರು, ಬೆಂಗಳೂರು)