ಬಳ್ಳಾರಿ: ವಿವಿಧ ರೀತಿಯ ಆಚಾರ-ವಿಚಾರ, ಸಂಸ್ಕಾರ-ಸಂಸ್ಕøತಿಗಳನ್ನು ಹೊಂದಿದ ದೇಶದ ಸಾಂಸ್ಕøತಿಕ ಪರಂಪರೆ ಜಗತ್ತಿನಲ್ಲಿಯೇ ವೈವಿಧ್ಯಮಯವಾದುದೂ, ವೈಶಿಷ್ಟ್ಯ ಪೂರ್ಣವಾದುದೂ ಎಂದು ಇತಿಹಾಸ ಪ್ರಾಧ್ಯಾಪಕಿ ಆರ್.ಎಂ.ಶ್ರೀದೇವಿ ತಿಳಿಸಿದರು.
ನಗರದ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್(ಸ್ವಾಯತ್ತ)ನಲ್ಲಿ ‘ರಾಷ್ಟ್ರೀಯ ಐಕ್ಯತಾ ಸಪ್ತಾಹ’ದ ‘ಸಾಂಸ್ಕøತಿಕ ಐಕ್ಯತಾ ದಿನ’ದ ಅಂಗವಾಗಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಶದಲ್ಲಿ ಬೇರೆ ಬೇರೆ ಆಚರಣೆಗಳನ್ನು ಹೊಂದಿದ ವಿಶಿಷ್ಟ ಸಂಸ್ಕøತಿಗಳಿದ್ದು ಅವುಗಳ ಮೂಲಕ ಐಕ್ಯತೆಯನ್ನು ಸಾಧಿಸಬೇಕಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ||ಎ.ಹೇಮಣ್ಣ ಅವರು ಮಾತನಾಡಿ, ಸಂಸ್ಕøತಿ ಮತ್ತು ನಾಗರಿಕತೆಗಳನ್ನು ಏಕರೂಪವಾಗಿ ನೋಡುತ್ತೇವೆ. ವೇಷ, ಭಾಷೆ, ಪ್ರಾದೇಶಿಕತೆ ಮೊದಲಾದವುಗಳ ಒಟ್ಟು ಸಾರವೇ ಸಂಸ್ಸøತಿಯಾಗಿದೆ ಎಂದರು.
ಸಂಸ್ಕøತಿಯೂ ವಿಭಿನ್ನವಾಗಿರುತ್ತದೆ. ಇಂತಹ ಭಿನ್ನತೆಯ ಸಂಸ್ಕøತಿಗಳಲ್ಲಿ ಏಕತೆಯನ್ನು ಸಾಧಿಸುವುದು ‘ಸಾಂಸ್ಕøತಿಕ ಏಕತಾ ದಿನ’ದ ಉದ್ದೇಶವಾಗಿದೆ ಎಂದು ತಿಳಿಸಿದರು. ಸಾಂಸ್ಕøತಿಕ ಭಿನ್ನತೆಯಿದ್ದರೂ ಸಾವಿರಾರು ವರ್ಷಗಳಿಂದ ಪ್ರಪಂಚಕ್ಕೆ ಮಹತ್ವದ ಕಾಣಿಕೆಯನ್ನು ಭಾರತವು ನೀಡಿದ್ದು, ದೇಶದ ವಿವಿಧ ಸಂಸ್ಕøತಿಗಳಿಗೆ ಪ್ರತಿಯೊಬ್ಬರೂ ಮನ್ನಣೆ ನೀಡಿ ಸಾಂಸ್ಕøತಿಕ ಐಕ್ಯತೆಯನ್ನು ಸಾಧಿಸಲು ನೆರವಾಗಬೇಕು ಎಂದು ಹೇಳಿದರು.
ಪ್ರಾಧ್ಯಾಪಕ ಎಂ.ಎಂ.ಈಶ್ವರ್ ಮಾತನಾಡಿ, ನಮ್ಮ ದೇಶದಲ್ಲಿರುವ ಕಲೆ, ವಾಸ್ತುಶಿಲ್ಪ, ಚಿತ್ರಕಲೆ, ಸಂಗೀತ ಮೊದಲಾದವುಗಳ ಪ್ರತಿಬಿಂಬವೇ ಸಂಸ್ಕøತಿಯಾಗಿದೆ ಎಂದು ತಿಳಿಸಿದರು. ವೇದಿಕೆಯಲ್ಲಿ ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥ ನಾಗರಾಜ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಧ್ಯಾಪಕ ವೃಂದ ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪ್ರಾಧ್ಯಾಪಕರಾದ ಡಾ||ಶಶಿಕಾಂತ ನಿರೂಪಿಸಿದರು. ಡಾ||ತಿಪ್ಪೇರುದ್ರ ಸಂಡೂರು ಸ್ವಾಗತಿಸಿದರು. ಡಾ||ಟಿ.ವೀರಭದ್ರಪ್ಪ ವಂದಿಸಿದರು.