ಚಿಂತಕ ಪ್ರೊ.ಭಗವಾನ್ ಮುಖಕ್ಕೆ ಮಸಿ ಘಟನೆ ಖಂಡಿಸಿ ಬಳ್ಳಾರಿಯಲ್ಲಿ ಡಿಎಸ್ ಎಸ್ ಪ್ರತಿಭಟನೆ

ಬಳ್ಳಾರಿ: ಪ್ರಗತಿಪರ ಚಿಂತಕ ಪ್ರೊ.ಭಗವಾನ್ ಅವರು ಗುರುವಾರ ಬೆಂಗಳೂರಿನ 2ನೇ ಎಸಿ.ಎಂ.ಎಂ. ನ್ಯಾಯಲಯಕ್ಕೆ ಪ್ರಕರಣ ಒಂದರಲ್ಲಿ ಜಾಮೀನು ಪಡೆಯಲು ಹೊರ ಬಂದಾಗ ಅವರ ಮುಖಕ್ಕೆ ಮಹಿಳಾ ನ್ಯಾಯವಾದಿ ಮಸಿ ಬಳಿದ ಘಟನೆಯನ್ನು ಖಂಡಿಸಿ‌ ಡಿ.ಜಿ.ಸಾಗರ್ ಬಣದ ದಲಿತ ಸಂಘರ್ಷ ಸಮಿತಿ ಮುಖಂಡರು, ಕಾರ್ಯಕರ್ತರು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಮಹಿಳಾ ನ್ಯಾಯವಾದಿಯೊಬ್ಬರು ನ್ಯಾಯಾಲದ ಆವರಣದಲ್ಲಿಯೇ ಹಿರಿಯರ ಮುಖಕ್ಕೆ ಮಸಿ ಬಳಿದಿದ್ದು ದುರದೃಷ್ಟಕರ ಎಂದು ಟೀಕಿಸಿರುವ ಪ್ರತಿಭಟನಾಕಾರರು ಕೂಡಲೇ ಆ ಮಹಿಳೆಯನ್ನು ಬಂಧಿಸಬೇಕು ಹಾಗೂ ಅವರ ವಕೀಲ ವೃತ್ತಿಯ ನೊಂದಣಿಯನ್ನು ರದ್ದು ಪಡಿಸಬೇಕು ಅಲ್ಲದೆ ಕಾನೂನಿನ ಪ್ರಕಾರ ಅವರನ್ನು ಶಿಕ್ಷೆಗೆ ಗುರಿಪಡಿಸಬೇಕೆಂದು ಆಗ್ರಹಿಸಿದರು.
ಭಗವಾನ್‌ರವರು ನಾಡಿನ ದಲಿತಪರ, ರೈತಪರ, ಕಾರ್ಮಿಕ ಪರ ಮುಂಚೂಣಿಯ ಹೊರಾಟಗಾರರು. ಮುಂದಿನ ದಿನಗಳಗಳಲ್ಲಿ ಇಂತಹ ಘಟನೆಗಳು ಮರುಕಳಿಸಬಾರದು ಅವರಿಗೆ ಕರ್ನಾಟಕ ಸರ್ಕಾರ ಸಂಪೂರ್ಣ ರಕ್ಷಣೆಯ ಹೊಣೆಯನ್ನು ನೀಡಬೇಕೆಂದು ಅಗ್ರಹಿಸಲಾಯಿತು.
ಪ್ರತಿಭಟನೆಯ ಬಳಿಕ ಮುಖ್ಯ ಮಂತ್ರಿಗಳಿಗೆ ಬರೆದ ಮನವಿ‌ಪತ್ರವನ್ನು‌ ಜಿಲ್ಲಾಧಿಕಾರಿಗಳ ಮೂಲಕ ಸಂಘಟನೆಯ ರಾಜ್ಯ ಸಂಘಟನಾ ಸಂಚಾಲಕ ಎ.ಮಾನಯ್ಯ, ಜಿಲ್ಲಾ ಸಂಚಾಲಕ ಹೆಚ್.ಸಿದ್ದೇಶ್ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘಟನಾ ಸಂಚಾಲಕ ಹೆಚ್.ಆಂಜನೇಯ, ಖಜಾಂಜಿ ಜಿ.ಗಾದಿಲಿಂಗ, ಜಿಲ್ಲಾ ವಿದ್ಯಾರ್ಥಿ ಒಕ್ಕೂಟದ ಸಂಚಾಲಕ ಬಿ. ರಮೇಶ್, ಸಂಘಟನಾ ಸಂಚಾಲಕ ಟಿ.ಎಂ. ಎರ್ರಿಸ್ವಾಮಿ, ಪ್ರಗತಿಪರ ಸಂಘ ಸಂಸ್ಥೆಗಳ ಮುಖಂಡರಾದ ಉಪನ್ಯಾಸಕ ಡಾ.ದುರುಗಪ್ಪ ಟಿ, ಹುಲುಗಪ್ಪ ಬೆಳಗಲ್, ಮೇಘನಾಥ್. ಹೆಚ್. ರಂಗಪ್ಪ, ಗಂಗಾಧರ, ಭೀಮಶಂಕರ, ಹೊನ್ನೂರಪ್ಪ, ಶಶಿಕುಮಾರ್ ಬೂದಿಹಾಳ್, ಮಹೇಶ್ ಭತ್ರಿ, ಪ್ರಭು, ಸಿದ್ದಮ್ಮನಹಳ್ಳಿ, ಹಾಲೇಶ್, ರೆಹಮತ್, ಶ್ರೀನಿವಾಸ ಅಸುಂಡಿ, ಹೊನ್ನಾಳಿ ಹುಲುಗಪ್ಪ, ನಿಂಗಪ್ಪ ಮೊದಲಾದವರು ಇದ್ದರು.
*****