ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ -ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ವಸಂತಕುಮಾರ್

ಬಳ್ಳಾರಿ: ಎಬಿವಿಪಿಯ ಭಾಗವಾದ ಸ್ಟುಡೆಂಟ್ ಫಾರ್ ಡೆವಲಪ್ ಮೆಂಟ್ (ಎಸ್.ಎಫ್.ಡಿ) ವತಿಯಿಂದ ನಗರದ ದುರ್ಗಮ್ಮ ಗುಡಿ ಹಿಂಭಾಗದಲ್ಲಿರುವ ಸರಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ಸ್ವಚ್ಛತೆ ಮತ್ತು ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ ವಿ ವಸಂತಕುಮಾರ ಅವರು ಮಾತನಾಡಿ ಪ್ರಸ್ತುತ ದಿನಮಾನಗಳಲ್ಲಿ ದೇಶ ವಾಯುಮಾಲಿನ್ಯದಿಂದ ತತ್ತರಿಸುತ್ತಿದೆ. ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ. ವಾಯುಮಾಲಿನ್ಯ ತಡೆಯಲು ಜಾಗೃತಿ ಅತ್ಯಗತ್ಯ ಎಂದು ಹೇಳಿದರು. ಮತ್ತೋರ್ವ ಮುಖ್ಯ ಅತಿಥಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಎ. ಹೇಮಣ್ಣ ಅವರು ಮಾತನಾಡಿ ಎಸ್.ಎಫ್.ಡಿ ಪದಾಧಿಕಾರಿಗಳು ಉತ್ತಮ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಒಳ್ಳೆಯ ಬೆಳವಣಿಗೆ. ಸರ್ಕಾರಿ ಶಾಲೆಗಳ ಅಭಿವೃದ್ಧಿಯಲ್ಲಿ ಯುವಕರ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು.
ಶಾಲೆಯ ಮುಖ್ಯೋಪಾಧ್ಯಾಯ ನಾಗರಾಜ, ಜಿಲ್ಲಾ ಎಸ್.ಎಫ್.ಡಿ ಪ್ರಮುಖರಾದ ರುದ್ರೇಶ್, ಗೋವಿಂದರಾಜ್, ಕಾರ್ಯಕರ್ತರಾದ ಹರ್ಷ, ಚೆಲ್ಲಾ ಕೌಶಿಕ್, ಶ್ರೀನಿವಾಸ್, ಶ್ರೀಧರ್, ಶರಣ, ಸುರೇಶ್, ನವೀನ್, ಭೀಮ, ವೀರೇಶ್,

ಶಿವು, ತಿಮ್ಮಯ್ಯ, ಗಣೇಶ್ ಮತ್ತಿತರರಿದ್ದರು.