ಬಳ್ಳಾರಿ: ಪ್ರಸಕ್ತ (2020-21 ನೇ) ಸಾಲಿನ ಮುಂಗಾರು ಋತುವಿನಲ್ಲಿ ಬೆಳೆದ ಭತ್ತವನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರೈತರಿಂದ ನೇರವಾಗಿ ಖರೀದಿಸಲು ತೀರ್ಮಾನಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಅವರು ಸರ್ಕಾರದ ಆದೇಶದಂತೆ ಬೆಂಬಲ ಬೆಲೆ ಯೋಜನೆಯಡಿ ಭತ್ತವನ್ನು ಮಾರಾಟ ಮಾಡಲು ರೈತರು ಮೊದಲು ಕೃಷಿ ಇಲಾಖೆಯಲ್ಲಿ ಪ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿ ಮಾಡಿಕೊಳ್ಳಬೇಕು. ತದ ನಂತರ ಆಯಾ ತಾಲ್ಲೂಕುಗಳ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ತೆರೆದಿರುವ ಖರೀದಿ ಕೇಂದ್ರಗಳಲ್ಲಿ ಭತ್ತ ಮಾರಾಟ ಮಾಡಲು ನೋಂದಾಯಿಸಿಕೊಳ್ಳಬೇಕು. ಈ ರೀತಿ ಕೃಷಿ ಇಲಾಖೆ ಮತ್ತು ಖರೀದಿ ಕೇಂದ್ರಗಳಲ್ಲಿ ನೋಂದಾಯಿಸಿಕೊಂಡ ರೈತರು ಭತ್ತವನ್ನು ನಿಗಧಿಪಡಿಸಿರುವ ಅಕ್ಕಿ ಗಿರಣಿಗಳಿಗೆ/ಖರೀದಿ ಕೇಂದ್ರಗಳಿಗೆ ನೇರವಾಗಿ ಸರಬರಾಜು ಮಾಡಬೇಕು ಎಂದು ಅವರು ವಿವರಿಸಿದ್ದಾರೆ.
ಸಾಮಾನ್ಯ ಭತ್ತಕ್ಕೆ ಕ್ವಿಂಟಾಲ್ಗೆ ರೂ.1868, ಗ್ರೇಡ್ ಎ ಭತ್ತಕ್ಕೆ 1888 ರೂ.ಗಳನ್ನು ಸರಕಾರ ನಿಗದಿಪಡಿಸಿದೆ. ಬಳ್ಳಾರಿ ಜಿಲ್ಲೆಯಲ್ಲಿ ಕರ್ನಾಟಕ ಆಹಾರ ನಾಗರಿಕ ಸರಬರಾಜು ನಿಗಮವು ಖರೀದಿ ಏಜೆನ್ಸಿಯಾಗಿದೆ. ರೈತರು ನ.30ರಿಂದ ಡಿ.30ರವರೆಗೆ ಭತ್ತ ಮಾರಾಟ ಮಾಡಲು ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು. ಡಿ.20ರಿಂದ 2021 ಮಾರ್ಚ್ 30ರವರೆಗೆ ಭತ್ತ ಖರೀದಿಸಲಾಗುತ್ತದೆ.
ಜಿಲ್ಲೆಯಲ್ಲಿ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಭತ್ತ ಖರೀದಿಸಲು ಮತ್ತು ರೈತರು ನೊಂದಾವಣೆ ಮಾಡಿಕೊಳ್ಳಲು ಬಳ್ಳಾರಿ/ಕುರುಗೋಡು,ಸಿರಗುಪ್ಪ,ಸಂಡೂರು,ಕೂಡ್ಲಿಗಿ/ಕೊಟ್ಟೂರು,ಹೊಸಪೇಟೆ,ಕಂಪ್ಲಿ, ಎಚ್.ಬಿ.ಹಳ್ಳಿ,ಹಡಗಲಿ ಮತ್ತು ಹರಪನಳ್ಳಿ ಎಪಿಎಂಸಿ ಯಾರ್ಡ್ಗಳನ್ನು ಕೇಂದ್ರಗಳಾಗಿ ಗುರುತಿಸಲಾಗಿದೆ. ರೈತರಿಂದ ನೇರವಾಗಿ ಖರೀದಿಸುವ ಭತ್ತ ಸರಾಸರಿ ಉತ್ತಮ ಗುಣಮಟ್ಟದ್ದು (ಈಂಕಿ) ಆಗಿರಬೇಕು. ಅದಕ್ಕಾಗಿ ಗುಣಮಟ್ಟ ನಿಗಧಿಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಕುಲ್ ವಿವರಿಸಿದ್ದಾರೆ.
ಜಿಲ್ಲೆಯಲ್ಲಿ ಗುರುತಿಸಲಾಗಿರುವ 9 ಖರೀದಿ ಮತ್ತು ರೈತರು ನೋಂದಣಿ ಮಾಡಿಕೊಳ್ಳುವ ಕೇಂದ್ರಗಳಿಗೆ ಖರೀದಿ ಅಧಿಕಾರಿಗಳನ್ನು ಹಾಗೂ ಗ್ರೇಡರ್ಗಳನ್ನು ಈಗಾಗಲೇ ನೇಮಕ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
*ರೈತರು ನೋಂದಣಿಯನ್ನು ಆನ್ಲೈನ್ ಕೇಂದ್ರದಲ್ಲಿಯೇ ಮಾಡಿ: ರೈತರ ನೊಂದಣಿಯನ್ನು ಖರೀದಿ ಕೇಂದ್ರಗಳಲ್ಲಿ ಆನ್ಲೈನ್ ಮುಖಾಂತರ ಮಾಡಬೇಕು. ಖರೀದಿ ಕೇಂದ್ರಕ್ಕೆ ರೈತರು ಕೃಷಿ ಇಲಾಖೆಯಿಂದ ಪಡೆದಿರುವ ಅವರ ಫ್ರೂಟ್ಸ್ ಐ.ಡಿ. (ರೈತರ ನೊಂದಣಿ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆ(ಈಚಿಡಿmeಡಿ ಖegisಣಡಿಚಿಣioಟಿ ಚಿಟಿಜ Uಟಿiಜಿieಜ ಃeಟಿeಜಿiಛಿiಚಿಡಿಥಿ Iಟಿಜಿoಡಿmಚಿಣioಟಿ Sಥಿsಣem- ಈಖUIಖಿS ) ಮತ್ತು ಆಧಾರ್ನೊಂದಿಗೆ ನೊಂದಣಿ ಕೇಂದ್ರಕ್ಕೆ ಬರಬೇಕು. ಬೆಂಬಲ ಬೆಲೆಗಾಗಿ ರೈತರನ್ನು ಪ್ರತ್ಯೇಕವಾಗಿ ನೊಂದಾಯಿಸದೆ ಕೇವಲ ಅವರ ಫ್ರೂಟ್ಸ್ ಐ,ಡಿ.ಯ ಮೂಲಕ ಖರೀದಿಗೆ ನೋಂದಾಯಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ.
ರೈತರ ಫ್ರೂಟ್ಸ್ ಐ.ಡಿ ಯನ್ನು (ಉದಾ: ಎಫ್.ಐಡಿ 2205000013125) ಈ ಸಾಲಿನಲ್ಲಿ ರೈತರಿಂದ ಫ್ರೂಟ್ಸ್ ಐ.ಡಿ ಪಡೆಯುವುದು ಕಡ್ಡಾಯ. ರೈತರ ಬಳಿ ಫ್ರೂಟ್ಸ್ ಐ.ಡಿ ಇಲ್ಲದಿದ್ದಲ್ಲಿ ಅಥವಾ ಅವರ ಫ್ರೂಟ್ಸ್ ಐ.ಡಿ ಮಾಹಿತಿ ಪರಿಷ್ಕರಿಸಲು ಕೃಷಿ ಇಲಾಖೆಯನ್ನು ಸಂಪರ್ಕಿಸಿ ಸರಿಪಡಿಸಿಕೊಳ್ಳಬೇಕು ಎಂದು ತಿಳಿಸಿರುವ ಡಿಸಿ ನಕುಲ್ ಅವರು ಪ್ರತಿಯೊಬ್ಬ ರೈತರ ಫ್ರೂಟ್ಸ್ ಐ.ಡಿ. ನಮೂದಿಸಿದ ನಂತರ ಫ್ರೂಟ್ಸ್ ದತ್ತಾಂಶದಿಂದ ರೈತರ ಅಗತ್ಯ ಮಾಹಿತಿ ಲಭ್ಯವಾಗಲಿದೆ. ಮಾಹಿತಿಯಲ್ಲಿ ರೈತರ ಹೆಸರು, ವಿಳಾಸ, ಜಾತಿ, ವಯಸ್ಸು, ಮೊಬೈಲ್ ಸಂಖ್ಯೆ, ಜಮೀನು ಮತ್ತು ಬೆಳೆದಿರುವ ಬೆಳೆಯ ವಿವರಗಳು ಹಾಗೂ ರೈತರ ಬ್ಯಾಂಕ್ ಖಾತೆಯ ವಿವರಗಳು ಲಭ್ಯವಿರುತ್ತವೆÉ. ಹಾಗಾಗಿ ಪ್ರತ್ಯೇಕವಾಗಿ ಬೇರಾವುದೇ ದಾಖಲೆ ನೀಡುವ ಅವಶ್ಯಕತೆ ಇಲ್ಲ ಎಂದು ಅವರು ವಿವರಿಸಿದ್ದಾರೆ.
ಫ್ರೂಟ್ಸ್ ದತ್ತಾಂಶದನ್ವಯ ರೈತರ ಬೆಳೆ ಸಮೀಕ್ಷೆ ವಿವರದಂತೆ ಬೆಳೆ ವಿಸ್ತೀರ್ಣಕ್ಕನುಗುಣವಾಗಿ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಬಹುದಾದ ಗರಿಷ್ಠ ಪ್ರಮಾಣವನ್ನು ತೋರಿಸಲಾಗುವುದು. ಖರೀದಿ ಕೇಂದ್ರಗಳಲ್ಲಿ ನೋಂದಣಿ ಮಾಡಿದಾಗ ರೈತರಿಗೆ ತಮ್ಮ ಜಮೀನು ಮತ್ತು ಬೆಳೆ ವಿವರ ನೋಡಲು ಅವಕಾಶವಿದೆ. ರೈತರು ಖರೀದಿ ವಿವರಗಳನ್ನು ಒಪ್ಪಿ ನಮೂದಿಸಿದ ನಂತರ ಸ್ವೀಕೃತಿಯನ್ನು ಮುದ್ರಿಸಿ ರೈತರರಿಗೆ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ರೈತರ ಫ್ರೂಟ್ಸ್ ದತ್ತಾಂಶದಿಂದ ತೋರ್ಪಡಿಸುವ ಮಾಹಿತಿಯನ್ನು ರೈತರು ಒಪ್ಪದಿದ್ದಲ್ಲಿ ರೈತರಿಂದ ಗುರುತಿಸಿ ಫ್ರೂಟ್ಸ್ ದತ್ತಾಂಶದಲ್ಲಿ ಹೊಂದಾಣಿಕೆಯಾಗದ ಮಾಹಿತಿಯನ್ನು ರೈತರಿಗೆ ನೀಡಲಾಗುತ್ತದೆ. ಈ ಮಾಹಿತಿಯೊಂದಿಗೆ ರೈತರು ಸಂಬಂಧಪಟ್ಟ ಕೃಷಿ ಇಲಾಖೆಯವರನ್ನು ಸಂಪರ್ಕಿಸಿ ಅಗತ್ಯ ಮಾಹಿತಿಯನ್ನು ಸರಿಪಡಿಸಿ, ಫ್ರೂಟ್ಸ್ ದತ್ತಾಂಶದಲ್ಲಿ ಪರಿಷ್ಕರಿಸಿಕೊಳ್ಳಬಹುದು. ಈ ರೀತಿ ಪರಿಷ್ಕರಣೆಯ ನಂತರವೇ ರೈತರು ಮತ್ತೊಮ್ಮೆ ಖರೀದಿ ಕೇಂದ್ರಕ್ಕೆ ಬಂದು ಖರೀದಿ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು ಎಂದು ಅವರು ವಿವರಿಸಿದ್ದಾರೆ.
*ಭತ್ತ ಸರಬರಾಜು: ಖರೀದಿ ಕೇಂದ್ರಗಳಲ್ಲಿ ನೊಂದಾಯಿಸಿಕೊಂಡ ರೈತರಿಗೆ ಖರೀದಿ ಅಧಿಕಾರಿ ಭತ್ತ ಸರಬರಾಜು ಮಾಡಬೇಕಾದ ಅಕ್ಕಿ ಗಿರಣಿ ವಿವರ ನೀಡುವರು. ಅದರಂತೆ ರೈತರು ಭತ್ತವನ್ನು ತಮಗೆ ನಿಯೋಜಿಸಿರುವ ಅಕ್ಕಿ ಗಿರಣಿಗಳಿಗೆ ನೇರವಾಗಿ ಸರಬರಾಜು ಮಾಡಬೇಕು.ರೈತರು ಭತ್ತ ಸರಬರಾಜು ಮಾಡಬೇಕಾದ ದಿನಾಂಕವನ್ನು ಸಂಬಂಧಿಸಿದ ಅಕ್ಕಿ ಗಿರಣಿಯವರು ನೀಡಲಿದ್ದಾರೆ ಎಚಿದು ನಕುಲ್ ಅವರು ವಿವರಿಸಿದ್ದಾರೆ.
ಅಕ್ಕಿ ಗಿರಣಿಗೆ ರೈತರು ಭತ್ತ ಸರಬರಾಜು ಮಾಡುವಾಗ ಎಫ್.ಎ.ಕ್ಯೂ ಗುಣಮಟ್ಟ ಪರಿಶೀಲಿಸಿ ಭತ್ತ ಖರೀದಿಸಲಾಗುವುದು.ಖರೀದಿಸಿದ ಭತ್ತಕ್ಕೆ ಅಕ್ಕಿ ಗಿರಣಿ ಮಾಲೀಕರು ಖರೀದಿ ರಸೀದಿ ನೀಡುವರು ಎಂದು ಅವರು ತಿಳಿಸಿದ್ದಾರೆ.
*ಖರೀದಿ ಕೇಂದ್ರಗಳಿಗೆ ದಲ್ಲಾಳಿಗಳು ಭತ್ತ ತಂದಲ್ಲಿ ಕ್ರಿಮಿನಲ್ ಕೇಸ್ : ಮಧ್ಯವರ್ತಿಗಳು/ ಏಜೆಂಟರ್ಗಳು ಖರೀದಿ ಕೇಂದ್ರಗಳಿಗೆ ಭತ್ತವನ್ನು ತಂದಲ್ಲಿ ಅಂತಹವರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಬೆಂಬಲ ಬೆಲೆ ಯೋಜನೆಯಡಿ ಭತ್ತ ಸರಬರಾಜು ಮಾಡಿದ ರೈತರಿಗೆ ಅವರು ಕೃಷಿ ಇಲಾಖೆಯಲ್ಲಿ ನೊಂದಾಯಿಸಿಕೊಂಡಿರುವ
ಬ್ಯಾಂಕ್ ಖಾತೆಗೆ ಆರ್.ಟಿ.ಜಿ.ಎಸ್ ಮೂಲಕ ಹಣ ಪಾವತಿಸಲಾಗುವುದು ಎಂದು ತಿಳಿಸಿರುವ ಅವರು ಬೆಂಬಲ ಬೆಲೆ
ಯೋಜನೆ ಬಗ್ಗೆ ರೈತರಿಗೆ ಯಾವುದೇ ಸಮಸ್ಯೆಗಳಿದ್ದರೆ ತಾಲ್ಲೂಕಿನ ತಹಶೀಲ್ದಾರ್/ಕೃಷಿ ಅಧಿಕಾರಿ/ಎ.ಪಿ.ಎಂ.ಸಿ
ಕಾರ್ಯದರ್ಶಿ/ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಬಹುದು ಎಂದು ನಕುಲ್ ಅವರು ತಿಳಿಸಿದ್ದಾರೆ.
*****