ಬಳ್ಳಾರಿ: ಬಳ್ಳಾರಿ ವಲಯದ ಪೊಲೀಸ್ ಮಹಾ ನಿರೀಕ್ಷಕರಾದ (ಐಜಿಪಿ) ಎಂ. ನಂಜುಂಡಸ್ವಾಮಿ ಅವರು ಬುಧವಾರ ಕೊವಿಡ್ ಲಸಿಕೆ ಪಡೆದು ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಸಾರ್ವಜನಿಕರಲ್ಲಿ ಸ್ಫೂರ್ತಿ ತುಂಬಿದರು.
ಪೊಲೀಸ್ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳ ಜತೆ ನಗರದ ಸರಕಾರಿ ಆಸ್ಪತ್ರೆಗೆ ತೆರಳಿ ಕೊವಿಡ್ ಲಸಿಕೆ ಪಡೆದರು. ಬಳಿಕ ಈ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಕೊವಿಡ್ ಲಸಿಕೆ ಪಡೆಯುತ್ತಿರುವ ಚಿತ್ರ ಮತ್ತು ಮಾಹಿತಿ ಹಾಕಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.
ತಕ್ಷಣ ಇವರ ಸ್ಟೇಟಸ್ ಗೆ ಹಲವು ಜನರು ಮೆಚ್ಚುಗೆ ವ್ಯಕ್ತಪಡಿಸಿ, ಅಭಿನಂದಿಸಿದ್ದಾರೆ.
ಕರ್ನಾಟಕ ಕಹಳೆ ಡಾಟ್ ಕಾಮ್ ಜತೆ ಮಾತನಾಡಿದ ಐಜಿ ಮನಂ ಅವರು ಕೊವಿಡ್ ಲಸಿಕೆ ಹಾಕಿಸಿಕೊಳ್ಳುವುದರಿಂದ ಯಾವುದೇ ಅಡ್ಡ ಪರಿಣಾಮಗಳು ಉಂಟಾಗುವುದಿಲ್ಲ. ಭಯ ಮತ್ತು ಆತಂಕವನ್ನು ಬಿಟ್ಟು ಎಲ್ಲರೂ ತಪ್ಪದೇ ಲಸಿಕೆ ಹಾಕಿಸಿಕೊಳ್ಳಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಫೇಸ್ ಬುಕ್, ವ್ಯಾಟ್ಸಪ್ ಲ್ಲಿ ಹಾಕಿರುವ ಐಜಿ ಅವರ ಸ್ಟೇಟಸ್ ಗಮನ ಸೆಳೆದಿದೆ. 👇
‘ನಾನು ಇವತ್ತು ನಮ್ಮ ಪೋಲಿಸ್ ಸಿಬ್ಬಂದಿಗಳ ಮತ್ತು ಅಧಿಕಾರಗಳ ಕೂಟಾಗ ಬಳ್ಳಾ ಜಿಲ್ಲಾ ಸರಕಾರಿ ದವಾಖಾನಿಗೆ ಹೋಗಿ ವ್ಯಾಕ್ಸಿನ್ ಹಾಕಿಸಿಕೊಂಡೆ. ನೀವು ಸತಿಗೆ ವ್ಯಾಕ್ಸಿನ್ ಹಾಕಿಸಿಕೊಳ್ಳಾಕ ಮರೀಬ್ಯಾಡ್ರಿ, ವ್ಯಾಕ್ಸಿನ್ ಹಾಕಿಸಿಕೊಳ್ಳಾಕ ಅರೆತೋಳಿನ ಅಂಗಿ ಅಥವಾ ಟಿ- ಶರ್ಟ್ ಹಾಕಿಕೊಂಡಿದ್ರೆ ಒಳ್ಳೆಯದು, ವ್ಯಾಕ್ಸಿನ್ ಹಾಕಿಸಿಕೊಂಡ ಮೇಲೆ ಅರ್ಧ ಗಂಟೆ ಅಲ್ಲೇ ಇದ್ದು ಎನೂ ತೊಂದರೆ ಇರದಿದ್ದರೆ ಮನೆಗೆ ತೆರಳಿ ಅರಾಮ್ ತಗ್ರೊಳ್ಳಿ’
– ಮನಂ
*****