ಬಳ್ಳಾರಿ: ಸಮೀಪದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಚಿಪ್ಪಗಿರಿಯ ಶ್ರೀ ವಿಜಯದಾಸರ ಸನ್ನಿಧಾನದಲ್ಲಿ 265ನೇ ವರ್ಷದ ವಿಜಯದಾಸರ ಆರಾಧನಾ ಮಹೋತ್ಸವ ಮಂಗಳವಾರ ವಿಜೃಂಭಣೆಯಿಂದ ನಡೆಯಿತು.
ಮಧ್ಯಾರಾಧನಾ ಹಿನ್ನೆಲೆಯಲ್ಲಿ ಶ್ರೀಕ್ಷೇತ್ರದಲ್ಲಿ ಬೆಳಿಗ್ಗೆ ಹರಿಕಥಾಮೃತಸಾರ ಪಾರಾಯಣ, ಸುಲಾದಿ ಪಾರಾಯಣ, ಶ್ರೀವಿಜಯರಾಯರಿಗೆ ಪಂಚಾಮೃತಾಭಿಷೇಕ, ವಿಶೇಷ ಅಲಂಕಾರ, ನೈವಿದ್ಯ, ಮಹಾಮಂಗಳಾರತಿ ಸೇರಿದಂತೆ ವಿವಿಧ ಪೂಜೆಗಳು ವಿಜೃಂಭಣೆಯಿಂದ ನಡೆದವು.
ಸ್ಥಳೀಯ ಸೇರಿದಂತೆ ನಾನಾ ಕಡೆಯಿಂದ ಆಗಮಿಸಿದ ಭಜನಾ ಮಂಡಳಿ ಸದಸ್ಯರಿಂದ ಸಾಮೋಹಿಕ ಭಜನೆ ನಡೆಯಿತು. ಇದಕ್ಕೂ ಮುನ್ನ ಬೆಂಗಳೂರಿನ ಗುರುರಾಜ ದಾಸ್ ಹಾಗೂ ಹೈದ್ರಾಬಾದ್ನ ರಾಘವೇಂದ್ರಾಚಾರ್ ಅವರಿಂದ ಉಪನ್ಯಾಸ ನಡೆಯಿತು.
ವೆಂಕೋಬ ದಾಸ್ ಅವರ ನೇತೃತ್ವದಲ್ಲಿ ವಿವಿಧ ಪೂಜೆಗಳು ನಡೆದವು. ಶ್ರೀ ವಿಜಯದಾಸರ ವಂಶಸ್ಥರಾದ ಶ್ರೀಪಾದ್ ದಾಸ್ ಚಿಪ್ಪಗಿರಿ, ಮೋಹನ್ ದಾಸ್ ಸೇರಿದಂತೆ ಇತರರು ಆರಾಧನೆ ನೇತೃತ್ವ ವಹಿಸಿದ್ದರು. ನಗರ ಸೇರಿದಂತೆ ನಾನಾ ಕಡೆಯಿಂದ ಆಗಮಿಸಿದ ಭಕ್ತರಿಗೆ ವಿಜಯದಾಸ ಸೇವಾ ಟ್ರಸ್ಟ್ನ ಪದಾಧಿಕಾರಿಗಳು, ಭಕ್ತರು ತೀರ್ಥ ಪ್ರಸಾದ ವ್ಯವಸ್ಥೆ ಕಲ್ಪಿಸಿದ್ದರು.