ಸೇಡಂ ಜಿಲ್ಲೆಗಾಗಿ ಮಹತ್ವದ ಸಭೆ

ಸೇಡಂ : ಈಗಾಗಲೇ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕನ್ನು ಜಿಲ್ಲೆ ಮಾಡುವ ಕೂಗು ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾದ ಕೂಡಲೆ, ಸೇಡಂ ನಗರದ ಹಿರಿಯರು, ಕಿರಿಯರು, ಸ್ವಾಮಿಗಳು, ಲೇಖಕರು, ಪತ್ರಕರ್ತರು ನಾನ ಕ್ಷೇತ್ರದ ಗಣ್ಯರು ಸಮಾನ ಮನಸ್ಕದಿಂದ ಮಹತ್ವದ ಸಭೆ ಸೇರಿ ಮಾತುಕತೆ ನಡಿದ್ದಾರೆ.
ಇಂದು ಸೇಡಂನ ಶ್ರೀ ಕೊತ್ತಲ ಬಸವೇಶ್ವರ ದೇವಾಲಯದಲ್ಲಿ ಸೇಡಂ ಜಿಲ್ಲಾ ರಚನೆಯ ಹೋರಾಟದ ಸಮಿತಿಯ ಮಹತ್ವದ ಸಭೆಯನ್ನು ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಶ್ರೀ ಕೊತ್ತಲ ಬಸವೇಶ್ವರ ದೇವಾಲಯದ ಸ್ವಾಮಿಗಳಾದ ಶ್ರೀ ಸದಾಶಿವ ಸ್ವಾಮಿಗಳು , ಶಿವಶಂಕರ ಸ್ವಾಮಿಗಳಿ ಹಾಗೂ ಹಾಲಪ್ಪಯ್ಯ ಶ್ರೀಗಳು ಇದ್ದರು .
ಮತ್ತು ಮಾಜಿ ಉಪಸಭಾಪತಿಗಳಾದ ಚಂದ್ರಶೇಖರರೆಡ್ಡಿ ದೇಶಮುಖ, ಮಾಜಿ ಶಾಸಕರಾದ ಡಾ.ನಾಗರೆಡ್ಡಿ ಪಾಟೀಲ, ಜಿಪಂ ಮಾಜಿ ಸದಸ್ಯರಾದ ಮುಕ್ರಂಖಾನ್ ಅವರು ಹಾಗೂ ಸೇಡಂ ನಗರದ ಮುಖಂಡರು, ರಾಜಕೀಯ ನಾಯಕರುಗಳು, ಉದ್ಯಮಿಗಳು ಹಾಗೂ ಸಾರ್ವಜನಿಕರು ಈ ಸಭೆಯಲ್ಲಿ ಭಾಗಿಯಾಗಿದ್ದರು.
ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಪತ್ರಕರ್ತ, ಲೇಖಕ ಮಹಿಪಾಲರೆಡ್ಡಿ ಮುನ್ನೂರು ಅವರ ಈ ಮಹತ್ವದ ಸಭೆಯ ಕುರಿತು ಮತ್ತು ಸೇಡಂ ಬಗೆಗಿನ ಹಾಗೂ ಹೋರಾಟದ ಮಗ್ಗಲುಗಳನ್ನ ತಿಳಿಸಿದರು.
ಉದಯವಾಣಿ ವರದಿಗಾರರಾದ ಶಿವಕುಮಾರ ನಿಡುಗುಂದ ಹಾಗೂ ವಿಜಯವಾಣಿ ವರದಿಗಾರರಾದ ಶರಣು ಮಹಾಗಾಂವ್ ಸಭೆಯಲ್ಲಿ ಇದ್ದರು.