ಅನುದಿನ ಕವನ-೫೨ (ಕವಯತ್ರಿ: ಐ.ಜಯಮ್ಮ ಮತ್ತಿಹಳ್ಳಿ)

  1. ಕವಯತ್ರಿ ಐ. ಜಯಮ್ಮ ಮತ್ತಿಹಳ್ಳಿ ಅವರ ಕಿರು ಪರಿಚಯ👇
    ವೃತ್ತಿಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿನಿಲಯದ ನಿಲಯದ ಮೇಲ್ವಿಚಾರಕಿಯಾಗಿರುವ ಜಯಮ್ಮ ಅವರು ಪ್ರವೃತ್ತಿಯಲ್ಲಿ ಸಾಹಿತಿ. ಎಂ. ಎ. ಬಿ. ಎಡ್ ಪದವೀಧರರು.
    ಕವನ, ಹನಿಗವನಗಳು, ಕಥೆಗಳು, ಆಧುನಿಕ ವಚನಗಳು, ರುಬಾಯಿಗಳು, ಟಂಕಾ, ಹಾಯ್ಕುಗಳನ್ನು ಬರೆಯುತ್ತಾರೆ ಮಾತ್ರವಲ್ಲ ವಚನಗಳನ್ನು ಮಧುರವಾಗಿ ಹಾಡುತ್ತಾರೆ.
    ಪ್ರಶಸ್ತಿಗಳು : ಇವರ ಸಾಹಿತ್ಯ ಸೇವೆಗೆ ಹಲವು ಪ್ರಶಸ್ತಿಗಳು ಲಭಿಸಿವೆ. ಚಳ್ಳಕೆರೆಯ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಇವರ ಸಾಹಿತ್ಯ ಸೇವೆಯನ್ನು ಗುರುತಿಸಿ ತ.ಸು. ಶಾಮರಾವ್ ಪ್ರಶಸ್ತಿ ನೀಡಿ ಗೌರವಿಸಿದೆ. ಹೂವಿನ ಹಡಗಲಿಯ ರಾಜ್ಯ ಬರಹಗಾರರ ಬಳಗ ಕಾವ್ಯ ಚೇತನಪ್ರಶಸ್ತಿ ಲಭಿಸಿದೆ. ದಾವಣಗೆರೆಯ ಕವಿ ಕಾವ್ಯ ದೀವಿಗೆ ರಾಜ್ಯಘಟಕ ಆಯೋಜಿಸುವ ವಾರದ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಥಮ, ದ್ವಿತೀಯ, ತೃತೀಯ,ಸ್ಥಾನ ಪಡೆದು ಸಹೃದಯ ವಿಮರ್ಶಕರು ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.
    ಕಸಾಪಬಸೇರಿದಂತೆ ಹಲವು ಸಂಸ್ಥೆಗಳು ಅಭಿನಂದನಾ ಪತ್ರಗಳನ್ನು ನೀಡಿ ಪ್ರೋತ್ಸಾಹಿಸಿವೆ.
    ಕರ್ನಾಟಕ ಕಹಳೆ ಡಾಟ್ ಕಾಮ್ ನ ಇಂದಿನ ಅನುದಿನ ಕವನದ ಗೌರವಕ್ಕೆ ಜಯಮ್ಮ ಅವರ ‘ಧರಣಿ’ ಕವಿತೆ ಪಾತ್ರವಾಗಿದೆ.👇

ಧರಣಿ
———
ಸಕಲ ಸಂಪತ್ತಿನ ಒಡತಿ ನೀನು
ಸಕಲಜೀವಕೋಟಿಗೂ ಆಧಾರ ನೀನು
ಸಕಲಜೀವಕ್ಕೂ ಆಹಾರವಿಟ್ಟು
ಹೊತ್ತು ಸಲಹುವೇ ಮಹಾಮಾತೆ ನೀನು

ಕ್ಷಮಾಯ ಧರಿತ್ರಿ ಕಾಮಧೇನು ನೀನು
ಮಾನವನ ದುರಾಸೆಗಳಿಗೆ ಬಲಿಯಾಗಿ
ನಿನ್ನ ಸಂಪತ್ತು ದೋಚುತಿಹನು
ನೀನೆ ಸರ್ವಜೀವಗಳಿಗೆ ಆಧಾರ ನೀನು

ಸಸ್ಯ ಸಂಪತ್ತು ಹೊತ್ತು ನಿಂತೆ
ಔಷದಿ ಗಿಡಮೂಲಿಕೆಕೊಟ್ಟು
ಸೌಂದರ್ಯರಾಶಿಯ ಸ್ವರ್ಗವಾಗಿ
ನಿನ್ನ ಧಾರಳತನಕ್ಕೆ ಸರಿಸಾಟಿ ಯಾರು ಇಲ್ಲ

ನಿನ್ನ ಪ್ರೀತಿಯ ಒಡಲಲ್ಲಿ
ಬದುಕಿಹೆವು ಸಕಲಜೀವರಾಶಿಯು
ನಿಸ್ವಾರ್ಥದಿ ಕಾಪಾಡುವೆ ನಮ್ಮೆಲ್ಲರನ್ನು
ನಿನ್ನ ಸೇವೆಗೆ ಸದಾಚಿರಋಣಿಯಾಗಿರಬೇಕು ನಾವೆಲ್ಲರೂ

-ಐ. ಜಯಮ್ಮ , ಮತ್ತಿಹಳ್ಳಿ

One thought on “ಅನುದಿನ ಕವನ-೫೨ (ಕವಯತ್ರಿ: ಐ.ಜಯಮ್ಮ ಮತ್ತಿಹಳ್ಳಿ)

Comments are closed.