ಇಂದಿನಿಂದ(ಫೆ. 27) ಅಂಕಸಮುದ್ರ ಹಕ್ಕಿ ಹಬ್ಬ: ಸಚಿವ ಆನಂದ್ ಸಿಂಗ್ ಚಾಲನೆ

ಹಗರಿಬೊಮ್ಮನಹಳ್ಳಿ: ಅರಣ್ಯ ಇಲಾಖೆ, ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಹಾಗೂ ಗ್ರೀನ್ ಹೆಚ್.ಬಿ.ಹೆಚ್ ಸಂಯುಕ್ತಾಶ್ರಯದಲ್ಲಿ ಫೆ.27,28ರಂದು ಎರಡು ದಿನಗಳ ಕಾಲ ತಾಲೂಕಿನ ಅಂಕಸಮುದ್ರದ ಪಕ್ಷಿ ಸಂರಕ್ಷಿತ ಮೀಸಲು ಪ್ರದೇಶದಲ್ಲಿ ‘ಅಂಕಸಮುದ್ರ ಹಕ್ಕಿ ಹಬ್ಬ’ ನಡೆಯಲಿದೆ.
ಶನಿವಾರ ಹಕ್ಕಿಹಬ್ಬಕ್ಕೆ ಮೂಲಸೌಲಭ್ಯ ಅಭಿವೃದ್ಧಿ, ಹಜ್ ಮತ್ತು ವಕ್ಫ್ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಅನಂದ್ ಸಿಂಗ್ ಅವರು ಚಾಲನೆ ನೀಡಲಿದ್ದಾರೆ. ಅರಣ್ಯ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವ ಅರವಿಂದ ಲಿಂಬಾವಳಿ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.
.ಶಾಸಕ ಭೀಮನಾಯ್ಕ್ ಅಧ್ಯಕ್ಷತೆ ವಹಿಸಲಿದ್ದಾರೆ.
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸಿ.ಭಾರತಿ ತಿಮ್ಮರೆಡ್ಡಿ, ಸಂಸದ ವೈ.ದೇವೇಂದ್ರಪ್ಪ, ತಂಬ್ರಹಳ್ಳಿ ಜಿ.ಪಂ. ಸದಸ್ಯ ಆರ್.ಶಾರದಮ್ಮ ಶೇಖರಪ್ಪ, ಹಗರಿಬೊಮ್ಮನಹಳ್ಳಿಯ ತಾ.ಪಂ ಅಧ್ಯಕ್ಷ ನಾಗಮ್ಮ ಗೋಣೆಬಸಪ್ಪ, ಬಾಚಿಗೊಂಡನಹಳ್ಳಿ ತಾ.ಪಂ. ಸದಸ್ಯ ಬಿ.ಮಲ್ಲಿಕಾರ್ಜುನ, ಗ್ರಾ.ಪಂ ಅಧ್ಯಕ್ಷೆ ಜಯಶ್ರೀ.ವೈ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಹಾಗೂ ವನ್ಯಜೀವಿ ಪರಿಪಾಲಕರಾದ ವಿಜಯ್ ಕುಮಾರ್ ಗೋಗಿ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಎಸ್ ಲಿಂಗರಾಜು, ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್, ಹಗರಿಬೊಮ್ಮನಹಳ್ಳಿ ತಹಶೀಲ್ದಾರರಾದ ಶರಣಮ್ಮ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಹಾಲಸಿದ್ದಪ್ಪ ಪೂಜೇರಿ ವಿಶೇಷ ಆಹ್ವಾನಿತರಾಗಿ ಆಗಮಿಸಲಿದ್ದಾರೆ.
ಬಳ್ಳಾರಿ ಪ್ರಾದೇಶಿಕ ವಿಭಾಗದ ಉಪರಣ್ಯ ಸಂರಕ್ಷಣಾಧಿಕಾರಿ ಸಿದ್ರಾಮಪ್ಪ ಚಳಕಾಪುರೆ,ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಡಿ.ಮೋಹನ್, ವಲಯ ಅರಣ್ಯಾಧಿಕಾರಿ ಕಿರಣಕುಮಾರ್ ಕಲ್ಲಮ್ಮನವರ್ ಉಪಸ್ಥಿತರಿರಲಿದ್ದಾರೆ.
ಅಂಕಸಮುದ್ರ ನಡೆದು ಬಂದ ದಾರಿ, ಕರ್ನಾಟಕದಲ್ಲಿನ ಗ್ರೇಟ್ ಇಂಡಿಯನ್ ಬಸ್ಟರ್ಡ್ ಸಂರಕ್ಷಣೆ,ಕಾರಖಾನೆಯಲ್ಲಿ ಕಲರವ, ಪಕ್ಷಿಗಳ(ಹಕ್ಕಿಗಳ) ಸಂರಕ್ಷಣೆಯ ಮೌಲ್ಯಗಳು, ಅಂಕಸಮುದ್ರದಲ್ಲಿನ ಹಕ್ಕಿಗಳು, ಫೋಟೊಗ್ರಫಿ, ಪಕ್ಷಿಗಳಿಂದ(ಹಕ್ಕಿಗಳು) ಆರೋಗ್ಯ ಉಪಯೋಗಗಳು, ಹಕ್ಕಿಗಳ ಸಂಬಂಧಿತ ಛಾಯಾಗ್ರಾಹಕರು ಯಾವ ರೀತಿಯ ಛಾಯಾಗ್ರಾಹಣ ಮಾಡಬೇಕು..?, ಹಕ್ಕಿಗಳು ಮತ್ತು ಸ್ಥಳೀಯ ಉದ್ಯಮ ಸೇರಿದಂತೆ ವಿವಿಧ ವಿಷಯಗಳ ಕುರಿತು ಸಂಪನ್ಮೂಲ ವ್ಯಕ್ತಿಗಳು ವಿಷಯ ಮಂಡಿಸಲಿದ್ದಾರೆ.
*-*–*