ಅನುದಿನ ಕವನ-೫೯ (ಕವಯತ್ರಿ: ಸರೋಜಾ ಬ್ಯಾತನಾಳ)

ಕವಯತ್ರಿ ಸರೋಜಾ ಬ್ಯಾತನಾಳ ಪರಿಚಯ:
ಹಾವೇರಿ ಜಿಲ್ಲೆ ಹಾನಗಲ್ಲ ತಾಲೂಕಿನ ಹನುಮಂತ ರಾವ್
ಮತ್ತು ಸುಧಾಬಾಯಿ ಅವರ ಪುತ್ರಿ ಸರೋಜಾ ಬ್ಯಾತನಾಳ ಅವರು ವೃತ್ತಿಯಲ್ಲಿ ಹಿಂದಿ ಶಿಕ್ಷಕರಾಗಿದ್ದರೂ ಮಕ್ಕಳ ಸಾಹಿತಿ, ಆಶು ಕವಯತ್ರಿ ಎಂದು ಜನಪ್ರಿಯರಾಗಿದ್ದಾರೆ.
ಬಳ್ಳಾರಿಯ ವೀರಶೈವ ವಿದ್ಯಾವರ್ಧಕ ಸಂಘದ ವಿ ಎಮ್ ಎಚ್ ಪಿ ಎಸ್ ಶಾಲೆಯಲ್ಲಿ ಹಿಂದಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಇವರು, ಮಕ್ಕಳ ಸಾಹಿತ್ಯಕ್ಕೆ ಸಂಬಂಧಿಸಿದ 10 ಪುಸ್ತಕಗಳು ಹಾಗೂ 3 ಧರ್ಮಗ್ರಂಥಗಳನ್ನು ಪ್ರಕಟಿಸಿದ್ದಾರೆ.
ರಾಜ್ಯ, ರಾಷ್ಟ್ರ ಮಟ್ಟದ ಹಲವು ಕವಿಗೋಷ್ಠಿಯಲ್ಲಿ ತಮ್ಮ ಕವನಗಳನ್ನು ವಾಚನ ಮಾಡಿದ್ದಾರೆ.
‘ಬಾಲ್ಯವಿವಾಹ ಬೇಡ ಬಾ ಬಾಲೆ ಮರಳಿ ಶಾಲೆಗೆ’ ಮತ್ತು ವೈ ನಾಗೇಶ ಶಾಸ್ತ್ರಿಗಳ ಚರಿತ್ರೇ ಆಧಾರಿತ ನಾಟಕವನ್ನು ರಚಿಸಿದ್ದಾರೆ.
ಡಾ.ಸುಭಾಷ್ ಭರಣಿ ಸಾಂಸ್ಕೃತಿಕ ವೇದಿಕೆಯ ಡಾ.‌ಎಚ್ ಎನ್ ಪ್ರಶಸ್ತಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಜಿಲ್ಲಾ, ರಾಜ್ಯ ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ. ಭಾರತ್ ಸ್ಕೌಟ್ ಮತ್ತು ಗೈಡ್ ಸಂಸ್ಥೆಯಲ್ಲಿ ವೃಕ್ಷ ಮಣಿ ತರಬೇತಿ ಹೊಂದಿ ಗೈಡ್ ಕ್ಯಾಪ್ಟನ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜ್ಯಪಾಲರಾದ ಶ್ರೀ ವಾಜುಬಾಯಿ ವಾಲಾ ಅವರಿಂದ ಬೆಸ್ಟ್ ಗೈಡ್ ಕ್ಯಾಪ್ಟನ್ ಪ್ರಶಸ್ತಿ ಪಡೆದಿದ್ದಾರೆ.
ಇಂದಿನ ಅನುದಿನ ಕವನಕ್ಕೆ ಸರೋಜಾ ಬ್ಯಾತನಾಳ‌ ಅವರ ಗುರು ನುಡಿ ಕವಿತೆ ಪಾತ್ರವಾಗಿದೆ.👇
*****
ಗುರು ನುಡಿ

ಬುದ್ಧಿಯ ಮಾತನು ಹೇಳುವೆ ಮಕ್ಕಳೇ ಗುದ್ದಾಡುವಿರೇಕೆ
ಮುದ್ದು ಮಾತಿನಲ್ಲಿ ಕಲಿಯುವ ನೀವೇ ಗದ್ದಲ ಮಾಡುವಿರೇಕೆ (೧)

ದ್ವೇಷ ಅಸೂಯೆ ಭೇದಭಾವವೂ ಸಲ್ಲದು ಮಕ್ಕಳೇ ನಿಮಗೆ
ಪ್ರೀತಿ ಪ್ರೇಮ ಮಮತೆ ಭಾವವು ನೆಲೆಸಲಿ ಎಲ್ಲೆಡೆ ಜನಹಿತಕೆ (೨)

ನಮ್ಮಯ ನಡೆ-ನುಡಿ ಹೂಗಳು ನೀವು ಭವ್ಯ ಬಾಳಿನ ಗಿಡಮರಕೆ
ಸುಂದರ ನನ್ನ ಆಶಾಗೋಪುರ ಮಗುವೆ ನಿನ್ನ ಸಜ್ಜನಿಕೆ (೩)

ನಾಳಿನ ನಾಡಿನ ನಾಗರಿಕರು ನೀವು ಕಲೆಯಿರಿ ಜಾತಿ-ಮತದೆಹೇಳಿಕೆ
ಬೆಳೆಯಲಿ ನಿಮ್ಮೊಳು ಪ್ರೇಮ ಭಾವವು ತುಂಬಲಿ ಸಂತಸದ ಹರಕೆ (೪)

ಒಂದೇ ಗೂಡಿನ ಹಕ್ಕಿಗಳಾ ಗಿ ಬಾಳಿರಿ ಎಂಬ ಹೆಬ್ಬಯಕೆ ಓದುವ ಬರೆಯುವ ಹಾಡಿ ನಲಿಯುವ ಬಾಳುವ ಭಾವನೆ ನನ್ನೀ ಮನಕೆ(೫)

ಗುರುನುಡಿ ಎನ್ನಾಲಿಸಿ ಕಲಿಯಿರಿ ಈ ಸುಂದರ
ಸಂಸಾರಕೆ
ಬದುಕುವ ಬಗೆಯನು
ತಿಳಿಸುವೆ ನಿಮಗೆ ಕೀರ್ತಿ ಹೊಂದಿರಿಈ ಭಾರತ ದೇಶದ ಹಿತಕೆ(೬)

-ಸರೋಜಾ ಬ್ಯಾತನಾಳ
ಬಳ್ಳಾರಿ
*****