ಬಳ್ಳಾರಿ: ವಿಶ್ವ ಶ್ರವಣ ದಿನದ ಅಂಗವಾಗಿ ಬುಧವಾರ ನಗರದಲ್ಲಿ ಶ್ರವಣ ದೋಷಗಳ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಲು ಜಾಗೃತಿ ಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು.
ನಗರದ ಶ್ರವಣ ಇನ್ಸಿಟ್ಯೂಟ್ ಆಫ್ ಸ್ಪೀಚ್ ಅಂಡ್ ಹೀಯರಿಂಗ್ ಕಾಲೇಜಿನ ವತಿಯಿಂದ ನಡೆದ ಜಾಗೃತಿ ಜಾಥಾಕ್ಕೆ ವಿಮ್ಸ್ ನಿರ್ದೇಶಕ ಡಾ.ಗಂಗಾಧರಗೌಡ ಅವರು ಚಾಲನೆನೀಡೊದರು.
ಮಕ್ಕಳ ತಜ್ಞ ಡಾ.ರವಿಶಂಕರ್, ಕಿವಿ,ಮೂಗು,ಗಂಟಲು ತಜ್ಞ ಡಾ.ಎನ್.ಮಂಜುನಾಥ್, ಡಾ.ಕಮಲೇಶ್ ಬಾಗ್ರೀಚಾ, ಬಳ್ಳಾರಿಯ ನ್ಯಾಯವಾದಿ ಗಳಾದ ವೈ.ರಂಗನಾಥರಾವ್, ಶ್ರವಣ ಇನ್ಸ್ಟಿಟ್ಯೂಟ್ ಚೇರಮನ್ ರಾಘವೇಂದ್ರ ಪ್ರಸಾದ್, ಟಿ.ಚಂದ್ರಿಕಾ, ಸಿವಾಂತೋಷ ಇಂಡಿಯಾ ಪ್ರವೇಟ್ ಲಿಮಿಟೆಡ್ ಬೆಂಗಳೂರಿನ ಉಜೇರ್ ಅಹಮದ್ , ಡಾ.ಸುನೀಲ್ ಕುಮಾರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಜಾಥಾ ಕಾಲೇಜಿನಿಂದ ಶುರುವಾಗಿ ಸುದಾ ವೃತ್ತ, ಎಸ್ ಪಿ ವೃತ್ತ, ದುರ್ಗಮ್ಮ ದೇವಸ್ಥಾನ,ಗಡಿಗಿಚನ್ನಪ್ಪ ವೃತ್ತ, ಹೆಚ್ ಆರ್ ಜಿ ವೃತ್ತದ ಬಳಿ ಕೊನೆಗೊಂಡಿತು.
ಜಾಥಾ ಮೂಲಕ ಜನರಿಗೆ ಕಿವಿ ಹಾಗೂ ಅದರ ಸಮಸ್ಯೆಗಳನ್ನು ಹಾಗೂ ಪರಿಹಾರಗಳನ್ನೊಳಗೊಂಡ ಕರ ಪತ್ರಿಕೆಗಳನ್ನು ಹಂಚಲಾಯಿತು. ಧ್ವನಿವರ್ಧಕದ ಮೂಲಕ ಜನರಿಗೆ ಅರಿವು ಮೂಡಿಸಲಾಯಿತು.