ಅನುದಿನ ಕವನ-೬೨ (ಕವಿ: ನಾಗೇಂದ್ರ ಬಂಜಗೆರೆ, ಕವನದ ಶೀರ್ಷಿಕೆ: ಅಪ್ಪನ ಒಲವು)

ಅಪ್ಪನ ಒಲವು

ನನ್ನ ಕೈಬೆರಳ ಹಿಡಿದು ನಡಿಗೆ ಕಲಿಸಿದ ಅಪ್ಪ
ನನ್ನ ಎತ್ತಿ ಆಡಿಸಿದ ಮುದ್ದು ಮಾಡಿದ ಮೊಗವು ನೀನು
ಬಿದ್ದಾಗ ಕೈ ಹಿಡಿದು ಮೇಲೆತ್ತಿ ಹಾಯಿ ಆಯಿತಾ ಕಂದಾ ಎಂದ ಕರಣಾಮಯಿ ನೀನು ನನ್ನಪ್ಪ.

ನನ್ನ ನಗುವಿಗೆ ಕಾರಣ ನೀನಪ್ಪ.
ನಿನ್ನ ಹೆಗಲ ಮೇಲೆ ಕೂತು ಜಗವ ನೋಡುವಾಗ ಗಗನವ ಮುಟ್ಟಲು ಗೇಣೇ ಬಾಕಿ ಅಪ್ಪ..

ನನ್ನ ಆಟ ಅಡಿಸಿದ ಆಟದವಸ್ತು ನೀನು
ಆಟವ ಕಲಿಸಿ ನಲಿಸಿ ನಗಿಸಿ ಪಾಠವ ಕಲಿಸಿದ ಗುರುವೂ ನೀನು..

ನಾ ಓದಲಿಲ್ಲ ನೀ ಓದಬೇಕೆಂದರು..
ಕೂಲಿ ಮಾಡಿ ಕೊಡಿಸಿದರು ಪುಸ್ತಕ ಬಟ್ಟೆ
ಲೇಟ್ ಆಗತ್ತೆ ಸ್ಕೂಲಿಗೆ ಚೆನ್ನಾಗಿ ಓದಬೇಕೆಂದರು ಚಾಕೋಲೇಟ್ ಕೈಗಿಟ್ಟು.

ಮಕ್ಕಳು ಸುಖವಾಗಿರಲಿ ಎಂದು ಹಗಲಿರುಳು ದುಡಿದೆ
ಮಕ್ಕಳಿದ್ದಾರೆ ಮನೆಯಲೆಂದು ದಿನವೂ ತಿಂಡಿ ಪೊಟ್ಟಣ ಹಿಡಿದು ಬಂದೆ
ನಿಮ್ಮ ನೋವು ಮರೆತು ನಮ್ಮ ನಲಿವು ನೋಡಿ ಹೊಟ್ಟೆ ತುಂಬಿಸಿಕೊಂಡವರು ನೀವು..

ಅಮ್ಮನ ಪ್ರೀತಿಯ ಯಜಮಾನ ಅತ್ತೆ ಚಿಕ್ಕಪ್ಪಗೆ     ಪ್ರೀತಿಯ ಅಣ್ಣನನ್ನ ಪ್ರೀತಿಯ ಅಪ್ಪ ನೀ ನನ್ನ ಜಗದ ಅಂಬರ..

ಅಪ್ಪನಿಗೆ ಕಷ್ಟ ಎಂದು
ನಾ ಕೇಳದೇ ಇದ್ದರೂ ಎಲ್ಲವೂ ಕೊಡಿಸಿದೆ ನನಗಾಗಿ ನೀ ಸಾಲವಾಗಿ ತಂದರೂ ಕೊಟ್ಟೆ ನೀ ನನಗೆ ಕೊಡುಗೆಯಾಗಿ*
ನೀನು ನನ್ನ ಜೀವನದ ಯಾರು ಕೊಡದಿರಲಾಗದ ಕೊಡುಗೆ ಅಪ್ಪಾ.

ಅಪ್ಪನ ಪ್ರೀತಿಯ ಅಪ್ಪುಗೆ ಬದುಕುವ ಭರವಸೆಯ ಮಾತುಕೇಳಿ ಮಗಳಿಗೆ ಅನಿಸಿದ್ದು ಸಿಕ್ಕರೆ ಸಿಗಬೇಕು ಅಪ್ಪನಂತಹ ಗಂಡು..

ನನ್ನ ಬಾಳ ಹಾದಿಯ ದೀಪ ನೀನು
ಎಂದೂ ಮುಳುಗದ ನನ್ನ ಜಗದ ಸೂರ್ಯ ನೀನು
ನೀ ಕಲಿಸಿದ್ದೂ ಮರೆತಿಲ್ಲ ನೆನಪುಂಟೂ ಮರೆಯಲಾರೆ ನನ್ನಪ್ಪನ ನಾ ಕೊನೆಯುಸಿರ ತನಕ..

✍️ ನಾಗೇಂದ್ರ ಬಂಜಗೆರೆ.