ಅಮುಭಾವಜೀವಿ ಅವರ ಕಿರುಪರಿಚಯ
=======
ಹೆಸರು : ಅಪ್ಪಾಜಿ ಎ ಮುಸ್ಟೂರು
ಕಾವ್ಯನಾಮ : ಅಮುಭಾವಜೀವಿ
ಜನ್ಮದಿನಾಂಕ: ೦೧:೦೬:೧೯೭೮
ತಂದೆ : ಅಡಿವಪ್ಪ ಎನ್
ತಾಯಿ : ಜಯಮ್ಮ ಹೆಚ್ ಕೆ
ಜನ್ಮಸ್ಥಳ : ಮುಸ್ಟೂರು, ಜಗಳೂರು ತಾಲ್ಲೂಕು, ದಾವಣಗೆರೆ ಜಿಲ್ಲೆ .
ವೃತ್ತಿ : ಪ್ರಾಥಮಿಕ ಶಾಲಾ ಶಿಕ್ಷಕ
ಪ್ರವೃತ್ತಿ : ಕಥೆ, ಕವನ ರಚನೆ,ಓದುವುದು,ಮೊಬೈಲ್ ಫೋಟೋಗ್ರಫಿ, ಕಡಿಮೆ ಖರ್ಚಿನಲ್ಲಿ ಪಾಠೋಪಕರಣ ತಯಾರಿಕೆ. ಕೃಷಿ ಚಟುವಟಿಕೆಗಳಲ್ಲಿ ಭಾಗವಹಿಸುವುದು.
ಬೆಂಗಳೂರು, ಮೈಸೂರು, ನಾಗಮಂಗಲ, ಮಧುಗಿರಿ, ವಿಜಯಪುರ, ಗದಗ, ರಾಮದುರ್ಗ(ಬೆಳಗಾವಿ) ,ಹಾಸನ, ಹುಣಸೂರು(ಮೈಸೂರು)ಕಡೂರು (ಚಿಕ್ಕ ಮಂಗಳೂರು)ತುಮಕೂರು, ಕೋಡೂರು(ಶಿವಮೊಗ್ಗ),ಜಗಳೂರು, ದಾವಣಗೆರೆ,ಹರಿಹರ,ಸೋಗಿ(ಬಳ್ಳಾರಿ),ರಾಯಚೂರು,ಖಾನಾಹೊಸಹಳ್ಳಿ(ಕೂಡ್ಲಿಗಿ)ಯಲ್ಲಿ ನಡೆದ ಜಿಲ್ಲೆ, ರಾಜ್ಯಮಟ್ಟದ ಕವಿಗೋಷ್ಠಿಗಳಲ್ಲಿ ಭಾಗವಹಿಸಿ ಅಭಿನಂದನೆಗೆ ಪಾತ್ರರಾಗಿದ್ದಾರೆ.
ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್, ವಾಟ್ಸಪ್ ಗುಂಪುಗಳಲ್ಲಿ ಪ್ರತಿದಿವೂ ರಚಿಸುದ ಕವನಗಳನ್ನು ಪ್ರಕಟಿಸುವುದು ಇವರಿಗೆ ಅತ್ಯಂತ ಪ್ರಿಯವಾದ ಹವ್ಯಾಸ.
ಅಂತರ್ಜಾಲ ಪತ್ರಿಕೆಗಳಾದ ಪ್ರತಿಲಿಪಿ, ಅವಧಿ, ಸುರಹೊನ್ನೆ, ಪಂಜು ಮತ್ತು ಜನಮಿಡಿತ ಪತ್ರಿಕೆಗಳಲ್ಲಿ ಅಮು ಅವರ ಕವಿತೆಗಳು ಪ್ರಕಟಗೊಂಡಿವೆ.
ಈವರೆಗೆ ಸುಮಾರು ಐದು ಸಾವಿರಕ್ಕೂ ಕವಿತೆಗಳನ್ನು ಅಮು ಅವರು ರಚಿಸಿದ್ದು, ಇವರ ಚೊಚ್ಚಲ
“ಒಡಲಿಗ್ಹತ್ತಿದ ಕಿಚ್ಚು” ಕವನ ಸಂಕಲನವನ್ನು ಬೆಂಗಳೂರಿನ ಅದಿತಿ ಪ್ರಕಾಶನ ಪ್ರಕಟಿಸಿದೆ.
ಇಂದಿನ ‘ಅನುದಿನ ಕವನ’ ದ ಗೌರವಕ್ಕೆ ಅಮು ಭಾವಜೀವಿ ಅವರ ‘ಅರಿಯಬೇಕೆಲ್ಲರೂ’ ಕವಿತೆ ಪ್ರಕಟವಾಗಿದೆ….👇
*****
ಅರಿಯಬೇಕೆಲ್ಲರೂ…..
ಮನೆಯೊಡತಿಗೂ ಮನವಿದೆ
ಅರಿಯಬೇಕು ಎಲ್ಲರೂ
ಸಂಬಳವಿಲ್ಲದ ನೌಕರಿ ಅವಳದು
ಸಂಬಂಧ ಬೆಸೆವ ಕೊಂಡಿಯವಳು
ಎಲ್ಲರಿಗಿಂತ ಮುಂಚೆ ಎದ್ದು
ಕೆಲಸಕ್ಕೆ ಹಾಜರಾಗುವಳು
ತಾನು ಹಸಿದುಕೊಂಡಿದ್ದರೂ
ಎಲ್ಲರ ಹಸಿವ ನೀಗುವವಳು
ಎಷ್ಟೇ ಒತ್ತಡವಿದ್ದರೂ
ಕೆಲಸ ತೊರೆಯಳು
ಎಲ್ಲರ ಖುಷಿಯಲ್ಲಿ ನಿತ್ಯ
ತನ್ನ ದಣಿವ ಮರೆವಳು
ಪತಿ ಮಾತನು ಪಾಲಿಸುತ್ತ
ಮುದ್ದು ಮಕ್ಕಳ ಪೋಷಿಸುತ್ತಾ
ಮನೆ ಹಿರಿಯರ ಪಾಲಿಸುವ
ಕ್ಷಮಯಾಧರಿತ್ರಿ ಈ ಗೃಹಿಣಿ
ಹೊರ ಒಳಗೂ ದುಡಿದು
ಮನೆಮನಗಳ ಶುಚಿಯಾಗಿರಿಸಿ
ಬಂಧುಬಳಗವ ಸತ್ಕರಿಸಿ
ಬೆಲೆ ನೀಡದಿದ್ದರೂ ನಗುತ ಬಾಳುವಳು
ಎಲ್ಲರೂ ನಿದ್ರೆಗೆ ಜಾರಿದ ಮೇಲೂ
ಎಲ್ಲರ ಕ್ಷೇಮವನೊಮ್ಮೆ ವೀಕ್ಷಿಸಿ
ಹಾಸಿಗೆ ಮೇಲೆ ಮಲಗಿದರೆ
ತಡ ಮಾಡದೆ ಆವರಿಸುವಳು ನಿದಿರಾ ದೇವಿ
ಪ್ರತಿ ಕ್ಷಣವೂ ಮನೆಗಾಗಿ ಶ್ರಮಿಸುವ
ಪ್ರತಿಯೊಬ್ಬರ ಪಾಲಿನ ತಾಯಿ ಜೀವ
ಮನೆಯೊಡತಿಯ ಬಗಗೆ ಇರಲಿ ಕಾಳಜಿ
ಅವಳು ಸಂಸಾರವ ಒಂದಾಗಿಸುವ ಸೂಜಿ
-ಅಮುಭಾವಜೀವಿ, ಮುಸ್ಟೂರು
So proud of you sir