ಬಳ್ಳಾರಿ ಜಿಪಂ ಸಿಇಒ ಅವರನ್ನು ಬುಡಾ ಸಾಮಾನ್ಯ ಸಭೆಯ ಕಾಯಂ ಸದಸ್ಯರನ್ನಾಗಿಸಲು ಮನವಿ

ಬಳ್ಳಾರಿ: ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರವು 18 ಗ್ರಾಮಗಳನ್ನು ಒಳಗೊಂಡಿದ್ದು ಈಗ ಮತ್ತೆ 12 ಗ್ರಾಮಗಳು ಪ್ರಾಧಿಕಾರದ ವ್ಯಾಪ್ತಿಗೆ ತೆಗೆದುಕೊಳ್ಳಲು ತೀರ್ಮಾನಿಸಲಾಗಿದೆ.
ಈ ಎಲ್ಲ ಗ್ರಾಮಗಳು ಬಳ್ಳಾರಿ ಜಿಪಂ ಸಿಇಒ ಅವರ ವ್ಯಾಪ್ತಿಗೆ ಬರುವುದರಿಂದ ಇವರನ್ನು ಬುಡಾ ಸಾಮಾನ್ಯ ಸಭೆಯ ಕಾಯಂ ಸದಸ್ಯರಾಗಿ ಮಾಡಿದರೆ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲು ಅನುಕೂಲವಾಗುತ್ತದೆ.ಈ ಹಿನ್ನಲೆಯಲ್ಲಿ ಜಿಪಂ ಸಿಇಒ ಅವರನ್ನು ಸಾಮಾನ್ಯ ಸಭೆಯ ಕಾಯಂ ಸದಸ್ಯರನ್ನಾಗಿ ಮಾಡುವಂತೆ ಬುಡಾ ಅಧ್ಯಕ್ಷ ದಮ್ಮೂರು ಶೇಖರ್ ಅವರು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಅವರಿಗೆ ಶುಕ್ರವಾರ ಬೆಂಗಳೂರಿನಲ್ಲಿ ಭೇಟಿಯಾಗಿ ಮನವಿ ಮಾಡಿದ್ದಾರೆ.
ಮನವಿ ಪತ್ರ ಸ್ವೀಕರಿಸಿ ಅಹವಾಲು ಆಲಿಸಿದ ಸಚಿವ ಭೈರತಿ ಬಸವರಾಜು ಅವರು ಪರಿಶೀಲನೆ ಮಾಡಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಾಗಿ ತಿಳಿಸಿದರು.
ಇದೇ ವೇಳೆ ಸಚಿವರೊಂದಿಗೆ ನಗರಾಭಿವೃದ್ಧಿ ಪ್ರಾಧಿಕಾರದ ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚಿಸಿ, ಅವರ ಮಾರ್ಗದರ್ಶನ ಪಡೆದುಕೊಳ್ಳಲಾಯಿತು.
*****