ರಕ್ತ ಪರೀಕ್ಷಕ
*****
(ಭಾಮಿನಿ ಷಟ್ಪದಿಯಲ್ಲಿ)
***************************
ನಮಗೆ ತಿಳಿಯದ ದೇಹದೊಳಗಿನ
ಗಮನವರಿಸಲು ಸೂಕ್ಷ್ಮದರ್ಶಕ
ತಮಗೆ ತಿಳಿಯಲು ಯಂತ್ರ ಬಳಸಲು ರಕ್ತ ವೀಕ್ಷಿಸಲು!
ಶಮನಗೊಳಿಸಲು ವೈದ್ಯ ವೃಂದಕೆ
ತಮಗೆ ಮದ್ದನು ಕೊಡಲು ಸುಲಭವು
ನಮಗೆ ಚುಚ್ಚುತ ರಕ್ತ ತೆಗೆದರು ರೋಗ ತಿಳಿವುದಕೆ!!
ಜನರ ಮೂತ್ರವು ಮಲವ ರಕ್ತವ
ದಿನವು ತಮ್ಮಯ ವೃತ್ತಿಮಾಡುತ
ಮನನಮಾಡುತ ತಾವು ತಮ್ಮಯ ಮೂಗು ಬಾಯಿಯನು!
ದಿನವು ಮುಚ್ಚುತ ತಾಸುಗಟ್ಟಲೆ
ಜನರು ಕೆಲಸದಿ ತುಂಬ ಕಷ್ಟವು
ಜನರ ದೇಹದಿ ಹೊಕ್ಕರೋಗದ ಹೆಸರು ಹೇಳುವರು!!
ಕಲಿತವಿದ್ಯೆಯ ಮಾಡಿ ಮೆರೆದರು
ಬಲಿತ ರೋಗವ ಪತ್ತೆಹಚ್ಚುತ
ಸುಲಭವಲ್ಲವು ರಕ್ತ ವೀಕ್ಷಣೆ ಕಾರ್ಯವೈಖರಿಯು!
ಒಳಿತು ಬಯಸಲು ಬಂದ ಮಂದಿಯು
ಕಳೆದುಸಮಯವ ಕೆಲಸ ಮಾಡುತ
ಮಿಳತವೈದ್ಯರ ಸಲಹೆ ಮೇರೆಗೆ ಗುಣವ ಹೊಂದುವರು!!
👆👆👆👆👆
ಇಂಥಹ ರಕ್ತಪರೀಕ್ಷಕರಾಗಿ ವೃತ್ತಿನಿರ್ವಹಿಸುತ್ತಿರುವವರಿಗೆಲ್ಲಾ ಇಂದು ನನ್ನ ಕವನದ ಮೂಲಕ ಹೃನ್ಮನದ ಧನ್ಯವಾದಗಳೊಂದಿಗೆ ನಮನಗಳು!
🙏🙏🙏🙏🙏🙏🙏🙏🙏
🌸🌸🌸🌸🌸🌸🌸🌸🌸🌸🌸
*ರಕ್ತ ಪರೀಕ್ಷಕರ ದಿನದ ಶುಭಾಶಯಗಳೊಂದಿಗೆ’
🌸🌸🌸🌸🌸🌸🌸🌸🌸🌸🌸
*****************************
-ಧರಣೀಪ್ರಿಯೆ
ದಾವಣಗೆರೆ
*****