ಬಳ್ಳಾರಿ: ಹಗರಿಬೊಮ್ಮನಹಳ್ಳಿ ತಾಲೂಕಿನ ಹಂಪಾಪಟ್ಟಣ ಜಿಲ್ಲಾ ಪಂಚಾಯಿತಿ, ತಾಪಂ ಕ್ಷೇತ್ರವನ್ನು ಈಗಿರುವಂತೆ ಮುಂದುವರೆಸಬೇಕು ಗ್ರಾಮಸ್ಥರು ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದರು.
ಜಿಲ್ಲಾ ಕೇಂದ್ರದಿಂದ 90 ಕಿ ಮೀ ಅಂತರವಿರುವ ಹಂಪಾಪಟ್ಟಣ ಗ್ರಾಮದಿಂದ ಪಕ್ಷಾತೀತವಾಗಿ ನೂರಕ್ಕೂ ಹೆಚ್ಚು ಗ್ರಾಮಸ್ಥರು ಮಂಗಳವಾರ ಸಂಜೆ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಲು ಆಗಮಿಸಿದ್ದರು.
ಹೆಚ್ಚುವರಿ ಜಿಲ್ಲಾಧಿಕಾರಿ ಪಿ ಎಸ್ ಮಂಜುನಾಥ್ ಅವರಿಗೆ ಮನವಿ ಪತ್ರ ಸಲ್ಲಿಸಿದ ಗ್ರಾಮಸ್ಥರು ಯಾವುದೇ ಕಾರಣಕ್ಕೂ ಹಂಪಾಪಟ್ಟಣ ಜಿಪಂ ಮತ್ತು ತಾಪಂ ರದ್ದು ಪಡಿಸಬಾರದು. ಒಂದೊಮ್ಮೆ ಕ್ಷೇತ್ರಗಳು ರದ್ದಾದರೆ ಇದೇ ಮಾ.29 ರಂದು ನಡೆಯುವ ಗ್ರಾಮ ಪಂಚಾಯಿತಿ ಚುನಾವಣೆಯನ್ನು ಬಹಿಷ್ಕರಿಸಿ ಪ್ರತಿಭಟಿಸಲಾಗುವುದು ಎಂದು ಮುಖಂಡರು ಎಚ್ಚರಿಸಿದರು.
ಗ್ರಾಮದಲ್ಲಿ ಐದು ಸಾವಿರಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದಾರೆ. ರೈಲುನಿಲ್ದಾಣ, ಅಂಗನವಾಡಿ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆ, ಗ್ರಾಮೀಣ ಬ್ಯಾಂಕ್, ಕೃಷಿ ಪತ್ತಿನ ಸಹಕಾರ ಬ್ಯಾಂಕ್, ಹಾಲು ಉತ್ಪಾದಕರ ಸಂಘ. ಗ್ರಾಪಂ ಇದೆ. ಹೀಗಾಗಿ ಹಂಪಾಪಟ್ಟಣ ಜಿಪಂ, ತಾಪಂ ಕ್ಷೇತ್ರದ ಕೇಂದ್ರವನ್ನು ರದ್ದು ಪಡಿಸಬಾರದು ಎಂದು ಒತ್ತಾಯಿಸಿದರು.
ಹಗರಿ ಬೊಮ್ಮನಹಳ್ಳಿ ತಾಪಂ ಸದಸ್ಯ ಬುಡ್ಡಿ ಬಸವರಾಜ್, ಬಿಜೆಪಿ ಜಿಲ್ಲಾ ಎಸ್.ಟಿ
ಮೋರ್ಚದ ಕಾರ್ಯದರ್ಶಿ ಟಿ. ಮಹೇಂದ್ರ, ಮಾಜಿ ಜಿಪಂ ಸದಸ್ಯ ಎಚ್. ಭೀಮಪ್ಪ, ಗ್ರಾಮದ ಮುಖಂಡರಾದ ಎಸ್. ಬಾಳಪ್ಪ, ಬುಳ್ಳನಗೌಡ ಮತ್ತಿತರರು ಗ್ರಾಮಸ್ಥರ ಪರವಾಗಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಯುವ ಮುಖಂಡರಾದ ಬಂಟ್ರ ಕುಬೇರ, ಅಂಬಳಿ ಕೇಶವಮೂರ್ತಿ, ಗ್ರಾಪಂ ಮಾಜಿ ಅಧ್ಯಕ್ಷ ಬಲ್ಲಾಹುಣ್ಸಿ ನಾಗರಾಜ್, ಸಿ. ಎಲ್ ಕುಮಾರ್, ಹೆಚ್.ಗಾಳೆಪ್ಪ, ಹೆಚ್. ಅಶೋಕ್ ಕಲಾಲ ಪರಶುರಾಮ, ಟಿ.ಮಂಜುನಾಥ್, ಹೆಚ್. ಶಿವಾನಂದ, ಗೋವಿಂದ್, ಜಿ. ಶ್ರೀನಿವಾಸ್ ಶೆಟ್ಟಿ, ಓ. ರಾಘವೇಂದ್ರ, ಹನುಮಂತಪ್ಪ ಮತ್ತಿತರರು ಉಪಸ್ಥಿತರಿದ್ದರು.
*****