ಅನುದಿನ ಕವನ-೭೬ ಕವಿ:ಬೋರೇಗೌಡ ಅರಸೀಕೆರೆ, (ಕವನದ ಶೀರ್ಷಿಕೆ: ರಾಗಿರೊಟ್ಟಿ ದೇಹಕೆ ಗಟ್ಟಿ)

ಕವಿ ಬೋರೇಗೌಡ ಅರಸೀಕೆರೆ ಕಿರುಪರಿಚಯ:
*****
ಹೆಸರು : ಬೋರೇಗೌಡ. ಎ.ಹೆಚ್.
ಹುದ್ದೆ : ರಿ||ಸೀ|| ಹೆಲ್ತ್ ಇನ್ಸ್ಪೆಕ್ಟರ್
ಹು.ದಿನಾಂಕ: 20-7-1958
ತಂದೆ : ಲೇ||ಹುಚ್ಚೇಗೌಡ
ತಾಯಿ : ಲೇ||ಪುಟ್ಟಮ್ಮ
ವಿದ್ಯಾಭ್ಯಾಸ: ಬಿ.ಎ.
ಪ್ರಾಥಮಿಕ ವಿದ್ಯಾಭ್ಯಾಸ ಅಂಕಪುರ.
ಹೈಸ್ಕೂಲ್ ವಿದ್ಯಾಭ್ಯಾಸ ಸಿ.ಕೆ.ಎಸ್.ಹೈಸ್ಕೂಲ್ ಬೂವನಹಳ್ಳಿ ಹಾಸನ ತಾ.& ಜಿಲ್ಲೆ.
ಕಾಲೇಜುವಿದ್ಯಾಭ್ಯಾಸ ಸರ್ಕಾರಿ ಕಾಲೇಜು ಹಾಸನ
16-5-1985 ರಲ್ಲಿ ಸರ್ಕಾರಿ ಸೇವೆಗೆ ಸೇರ್ಪಡೆ.
ಆರೋಗ್ಯ ಮತ್ತುಕುಟುಂಬಕಲ್ಯಾಣ ಇಲಾಖೆ ಹಾಗು ಪೌರಾಡಳಿತ ಇಲಾಖೆ ಎರಡು ಇಲಾಖೆಗಳಲ್ಲಿ 33 ವರ್ಷಗಳಸೇವೆಸಲ್ಲಿಸಿ ದಿನಾಂಕ 31-7-2018ರಲ್ಲಿ ಸೇವೆಯಿಂದ ನಿವೃತ್ತಿ.
ಹುಟ್ಟಿದ ಊರು ಹಾಸನ ಸಮೀಪ ಅಂಕಪುರ
ಹಾಲಿವಾಸ:ಅರಸೀಕೆರೆ .ಹಾಸನ ಜಿಲ್ಲೆ
*****
ಇಂದಿನ ‘ಅನುದಿನ ಕವನ’ದ ಗೌರವಕ್ಕೆ ಬೋರೇಗೌಡರ
‘ರಾಗಿರೊಟ್ಟಿ ದೇಹಕೆ ಗಟ್ಟಿ’ ಕವಿತೆ ಪಾತ್ರವಾಗಿದೆ👇

‘ರಾಗಿರೊಟ್ಟಿ ದೇಹಕೆ ಗಟ್ಟಿ’

ಅಮ್ಮನು ಮಾಡಿದ ರಾಗಿರೊಟ್ಟಿ
ತಟ್ಟಿದಳು ನನಗೆ ಪುಟ್ಟರೊಟ್ಟಿ
ತಿಂದು ನಾನಾದೆನು ಬಲುಗಟ್ಟಿ
ಅದ ತಿಂದವರೆಲ್ಲರು ಜಗಜಟ್ಟಿ

ತಂದಿದೆ ನನಗದು ಬಹಳ ಶಕ್ತಿ
ಬಳಲಿಕೆ ಎಂಬುದ ಕಾಣಲಿಲ್ಲ
ಸುಸ್ತು ಎಂಬುದು ಬಂದೇ ಇಲ್ಲ
ಕಾಯಿಲೆ ನನಗಂತು ಬರಲಿಲ್ಲ

ರೋಗರುಜಿನ ಏನೂ ಇಲ್ಲ
ಕ್ಯಾಲ್ಸಿಯಂನ ಕೊರತೆಯಿಲ್ಲ
ಸುಸ್ತು ಸಂಕಟ ಮೊದಲೇಯಿಲ್ಲ
ರಕ್ತಹೀನತೆ ಸುಳಿಯಲೇಯಿಲ್ಲ

ನೀವು ತಿನ್ನಿರಿ ರಾಗಿಯರೊಟ್ಟಿ
ತಿಂದವರೆಲ್ಲರು ಸಧೃಡ ಗಟ್ಟಿ
ರಕ್ತದಲ್ಲಿ ಸಕ್ಕರೆ ಹೆಚ್ಚಾಗಿದ್ದರೆ
ಇಳಿಯುತ್ತದೆ ಅದರ ಮಟ್ಟವು

ರಾಗಿಯರೊಟ್ಟಿ ರಾಗಿಮುದ್ದೆ
ತಿಂದ ನಮ್ಮಪೂರ್ವಜರೆಲ್ಲರು
ಖಾಯಿಲೆ ಕಸಾಲು ಏನುಇಲ್ಲದೆ
ನೂರು ವರುಷ ಬಾಳಿದ್ದರೆಲ್ಲರು

-ಬೋರೇಗೌಡ, ಅರಸೀಕೆರೆ
*****