ಬಿ ಟಿ ಲಲಿತಾನಾಯಕ, ಡಾ. ಶಿವರಾಜಕುಮಾರ್ ಗೆ ಜೀವ ಬೆದರಿಕೆ: ಸೂಕ್ತ ಭದ್ರತೆಗೆ ಕರ್ನಾಟಕ ಸಮರ ಸೇನೆ ಬಳ್ಳಾರಿ ಜಿಲ್ಲಾ ಘಟಕ ಒತ್ತಾಯ

ಬಳ್ಳಾರಿ: ಮಾಜಿಸಚಿವೆ, ಸಾಹಿತಿ ಬಿ.ಟಿ. ಲಲಿತಾ ನಾಯಕ್ ಮತ್ತು ಖ್ಯಾತ ಚಲಚಿತ್ರ ನಟ ಡಾIIಶಿವರಾಜ್ ಕುಮಾರ್ ಅವರಿಗೆ ಸಮಾಜ ಘಾತುಕ ವ್ಯಕ್ತಿಗಳಿಂದ ಕೊಲೆ ಬೆದರಿಕೆ ಕರೆ, ಪತ್ರಗಳು ಬಂದಿರುವ ಹಿನ್ನಲೆಯಲ್ಲಿ ರಾಜ್ಯ ಸರಕಾರ ಕೂಡಲೇ ಅಗತ್ಯ ಪೊಲೀಸ್ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿ ಕರ್ನಾಟಕ ಸಮರ ಸೇನೆ ಜಿಲ್ಲಾ ಘಟಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿತು.
ಕರ್ನಾಟಕ ಸಮರ ಸೇನೆಯ ಮಹಿಳಾ ಘಟಕದ ರಾಜ್ಯಾಧ್ಯಕ್ಷರೂ ಆಗಿರುವ ಲಲಿತಾ ನಾಯಕ ಅವರಿಗೆ ಬೆದರಿಕೆ ಹಾಕಿರುವ ಕಿಡಿಗೇಡಿಗಳನ್ನು ತಕ್ಷಣ ಪತ್ತೆ ಹಚ್ಚಿ ಬಂಧಿಸಬೇಕು. ಇವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಜಿಲ್ಲಾ ಮುಖಂಡರು ಒತ್ತಾಯಿಸಿದರು.
ಸೇನೆಯ ಜಿಲ್ಲಾ ಗೌರವಾಧ್ಯಕ್ಷ.ಎಸ್. ಸುಧೀರ್ ಮತ್ತು ಜಿಲ್ಲಾಧ್ಯಕ್ಷ ಕೋಳೂರು ಶ್ರೀನಿವಾಸ್ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ಪದಾಧಿಕಾರಿಗಳು, ಸದಸ್ಯರು ಅಪರ ಜಿಲ್ಲಾಧಿಕಾರಿ ಪಿ ಎಸ್ ಮಂಜುನಾಥ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಕರ್ನಾಟಕ ಕಹಳೆ ಡಾಟ್ ಕಾಮ್ ಪ್ರತಿನಿಧಿ ಜತೆ ಮಾತನಾಡಿದ ಕೋಳುರು ಶ್ರೀನಿವಾಸ್ ಅವರು ಸಾಂಸ್ಕೃತಿಕ ಕ್ಷೇತ್ರದ ಗಣ್ಯರಿಗೆ ಬೆದರಿಕೆ ಹಾಕುವುದನ್ನು ಸ್ವಾಭಿಮಾನಿ ಕನ್ನಡಿಗರು ಸಹಿಸುವುದಿಲ್ಲ. ಈ ಪ್ರಕರಣವನ್ನು ಸರಕಾರ ಗಂಭೀರವಾಗಿ ಪರಿಗಣಿಸಿ ಸೂಕ್ತ ಪೊಲೀಸ್ ರಕ್ಷಣೆ ಮತ್ತು ಭದ್ರತೆಯನ್ನು ನೀಡಬೇಕೆಂದು ಎಂದು ಒತ್ತಾಯಿಸಿದರು.
ಬೆದರಿಕೆ ಹಾಕಿದ ಕಿಡಿಗೇಡಿಗಳ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಿ ಶಿಕ್ಷೆಗೆ ಒಳಪಡಿಸಬೇಕು ಎಂದು ಹೇಳಿದರು.
ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸದ ಸಂದರ್ಭದಲ್ಲಿ ಕರ್ನಾಟಕ ಸಮಾರಾ ಸೇನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ. ಮಧುರಾಜ್ , ಜಿಲ್ಲಾ ಉಪಾದ್ಯಕ್ಷ .ಶರಣ ಬಸಪ್ಪ, ಈಶ್ವರ ಗೌಡ, ಕಾರ್ಯದರ್ಶಿ ಗಂಗಾಧರ, ಸಹಕಾರ್ಯದರ್ಶಿ ಶಿವಕುಮಾರ ಮತ್ತು ಮೋಕಾ ಗ್ರಾಮ ಘಟಕದ ಅಧ್ಯಕ್ಷ ಶಶಿಕುಮಾರ್ , ಉತ್ತನೂರು ಗ್ರಾಮ ಘಟಕದ ಅಧ್ಯಕ್ಷ ದೊಡ್ಡನಗೌಡ, ನಗರ ಕಾರ್ಯದರ್ಶಿ ಎರಿಸ್ವಾಮಿ, ಸದಸ್ಯರುಗಳಾದ ರಾಜು,ತಿಪ್ಪಯ್ಯ, ವೀರಾಂಜಿನೇಯ , ಆರ್.ನಾಗೇಶ್, ನರಸಿಂಹ, ಮಲ್ಲಪ್ಪ, ಶಾಂತಲಿಂಗ, ಮಲ್ಲಿಕಾರ್ಜುನ,ರಮೇಶ್ , ಶೇಖರ್, ಹೊನ್ನಪ್ಪ ಮತ್ತು ವಿಸ್ಮಯವಾಣಿ ಜಿಲ್ಲಾವರದಿಗಾರ ಕೆ.ಪಕ್ಕೀರಯ್ಯ ಮತ್ತಿತರರು ಉಪಸ್ಥಿತರಿದ್ದರು.
*****