ಅನುದಿನ‌ ಕವನ-೮೩. ಕವಿ:ಕುಮಾರ ಚಲವಾದಿ, ಕವನದ ಶೀರ್ಷಿಕೆ:ಮಹಿಳೆಯೆಂದರೆ:

ಮಹಿಳೆಯೆಂದರೆ!

ಮಹಿಳೆಯೆಂದರೆ ಶಕ್ತಿ
ಮಹಿಳೆಯೆಂದರೆ ಭಕ್ತಿ
ಮಹಿಳೆಯೆಂದರೆ ಬಾಳಿಗೊಂದು ಮುಕ್ತಿ!

ಮಹಿಳೆಯಿಂದಲೆ ಬಲವು
ಮಹಿಳೆಯಿಂದಲೆ ಗೆಲುವು
ಮಹಿಳೆಯೇ ಈ ಧರೆಗೆ ಚೆಲುವು!

ಮಹಿಳೆಯೆಂದರೆ ಕಾವ್ಯ
ಮಹಿಳೆಯೆಂದರೆ ದಿವ್ಯ
ಮಹಿಳೆಯೆಂದರೆ ದಿನ ದಿನವೂ ನವ್ಯ!

ಮಹಿಳೆಯಿಂದಲೆ ಬಾಳು
ಮಹಿಳೆಯಿಂದಲೆ‌ ಕೂಳು
ಮಹಿಳೆಯಿಲ್ಲದಿರೆ ಧರೆಯೆಲ್ಲ ಗೋಳು!!

-ಕುಮಾರ ಚಲವಾದಿ, ಹಾಸನ