ನಾಡಿನ ಸೂಕ್ಷ್ಮ ಸಂವೇದನೆಯ ಕವಯತ್ರಿಯರಲ್ಲಿ ಒಬ್ಬರಾಗಿರುವ, ವಿದ್ಯಾರ್ಥಿ ಮೆಚ್ಚಿನ ಅಧ್ಯಾಪಕಿ ರಂಗಮ್ಮ ಹೋದೆಕಲ್ ಅವರ “ಒಳಗಿನ ‘ಬಣ್ಣ’ ಕ್ಕೆ ಮಸಿ ಹಚ್ಚಲಾಗದು” ಚೆಂದದ ಕವಿತೆ ಇಂದಿನ ‘ಅನುದಿನ ಕವನ’ ದ ಗೌರವಕ್ಕೆ ಪಾತ್ರವಾಗಿದೆ….👇
ಒಳಗಿನ ‘ಬಣ್ಣ’ ಕ್ಕೆ ಮಸಿ ಹಚ್ಚಲಾಗದು!!
*****
ದಾರಿಗಳು ನಮ್ಮನ್ನು ಪ್ರಭಾವಿಸಬಹುದು
ಯಾರ ದಾರಿಯೂ ನಮ್ಮ ದಾರಿಯಾಗುವುದಿಲ್ಲ!
ಯಾರೋ ಎಸೆದ ಮುಳ್ಳುಗಳು ಚಲನೆಗೆ ತೊಡಕಾಗಬಹುದಷ್ಟೆ
ನಡಿಗೆಯನ್ನು ಮುಳ್ಳು ಕತ್ತರಿಸುವುದಿಲ್ಲ!
ಸುಟ್ಟೇ ಹೋಗಲಂತ ಬೆಂಕಿ ಹಚ್ಚಬಹುದು
ಅಗ್ನಿದಿವ್ಯ ಹಾದು ಬರುವುದು ಅಸಾಧ್ಯವಲ್ಲ!
ನಾಲಗೆ ಸಲೀಸಾಗಿ ತಿರುಚಿಕೊಳ್ಳಬಹುದು
ಸುಳ್ಳೇ ಸತ್ಯವಾಗಿ ಮೆರೆಯಲಾಗದು!
ನಿಜದ ‘ಬಣ್ಣ’ಕ್ಕೆ ಕಪ್ಪು ಹಚ್ಚುವವರಿರುತ್ತಾರೆ
ಪುಟ್ಟಿ ಒಳಗಿನ ಬಣ್ಣಕ್ಕೆ ಮಸಿ ಹಚ್ಚಲಾಗದು!!
~ರಂಹೊ
*****
ಚೆಂದದ ಕವಿತೆ ಮೇಡಂ ಅಭಿನಂದನೆಗಳು t