“
ಸತ್ಯ, ಮಿಥ್ಯ, ವರ್ತಮಾನ ಎಂಬ ಮೂರು ಚುಟುಕುಗಳು.. ಚುಟುಕುಗಳೆಂದರೆ ನಾಲ್ಕು ಸಾಲುಗಳಲ್ಲಿ ಅನಂತ ಅರ್ಥಗಳನ್ನು ಅನಾವರಣಗೊಳಿಸುವ ಕಾವ್ಯದ ಗುಟುಕುಗಳು. ಥಟ್ಟನೆ ಮನವನ್ನು ಮುಟ್ಟುವ, ತಟ್ಟುವ ಭಾವದ ಕುಟುಕುಗಳು. ಏನಂತೀರಾ.?”
– ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ👇
1. ಸತ್ಯ.!
ಸತ್ಯಕೆ ಎಂದೂ ಎಂದೆಂದೂ
ಸತ್ಯವೇ ಸ್ವಯಂ ಸಾಂಗತ್ಯ
ಸದಾ ಏಕಮೇವ ಅಧಿಪತ್ಯ
ಸತ್ಯಕೆಂದು ಸತ್ಯವೇ ಸಾರಥ್ಯ.!
**********
2. ಮಿಥ್ಯ.!
ಸುಳ್ಳಿಗೆ ಬೇಕೇಬೇಕಿದೆ ನಿತ್ಯ
ಸಾಕ್ಷಿ ಪುರಾವೆಗಳ ಸಾಂಗತ್ಯ
ನಿಮಿಷಕ್ಕೊಂದು ನಿರಂತರ
ಹುಸಿನೆಪಗಳ ಸಹಸಾರಥ್ಯ.!
***********
3. ವರ್ತಮಾನ.!
ಇಂದು ಅಸಲಿಗಳಿಗಿಂತಲೂ
ನಕಲಿಗಳಿಗೇ ಕಾಲ.!
ಈಗ ಬಂಡವಾಳಕಿಂತಲೂ
ಬಾಯಿದ್ದವರೇ ಪ್ರಬಲ.!
-ಎ.ಎನ್.ರಮೇಶ್. ಗುಬ್ಬಿ.
*****