ಡಾ.ಅಂಬೇಡ್ಕರ್ ಜಯಂತಿ ಪ್ರಯುಕ್ತ ಬಿಡಿಎಫ್ ಪ್ರಬಂಧ ಸ್ಪರ್ಧೆ ಆಯೋಜನೆ

ಬೆಂಗಳೂರು: ವಿಶ್ವಜ್ಞಾನಿ, ಭಾರತರತ್ನ, ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ 130ನೇ ಜನ್ಮದಿನದ ಪ್ರಯುಕ್ತ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಸ್ಪರ್ಧೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಮತ್ತು ಸಂಶೋಧಕರು, “ಅಂಬೇಡ್ಕರ್ ಜೀವನ-ಸಾಧನೆಯಿಂದ ನಾವು ಕಲಿಯಬೇಕಾದುದೇನು?” ಎಂಬ ವಿಷಯದ ಕುರಿತು ಪ್ರಬಂಧವನ್ನು ಬರೆಯಬೇಕು.
ಆಯ್ಕೆಯಾದವರಿಗೆ, ಪ್ರಮಾಣ ಪತ್ರ ಮತ್ತು ಪ್ರಥಮ ಬಹುಮಾನ ರೂ. 3000, ದ್ವಿತೀಯ ಬಹುಮಾನ ರೂ. 2000, ತೃತೀಯ ಬಹುಮಾನ ರೂ.1000 ಮತ್ತು ಉತ್ತೇಜನ ಬಹುಮಾನ ರೂ. 500 ನೀಡಲಾಗುವುದು ಎಂದು ಬೆಂಗಳೂರು ದಲಿತ್ ಫೋರಂ ಪ್ರಕಟಣೆಯಲ್ಲಿ ತಿಳಿಸಿದೆ.
ಬೆಂಗಳೂರು ದಲಿತ್ ಫೋರಮ್ (ಬಿಡಿಎಫ್) ಎಂಬುದು ನಮ್ಮ ಸಂಸ್ಥೆ, ವಿಶ್ವಜ್ಞಾನಿ, ಭಾರತರತ್ನ, ಬಾಬಾಸಾಹೇಬ್ ಡಾ. ಬಿ.ಆರ್.ಅಂಬೇಡ್ಕರ್ ಅವರ ಚಿಂತನೆ ಮತ್ತು ಬೋಧನೆಯಿಂದ ನಮ್ಮ ಸಂಸ್ಥೆ ಸ್ಫೂರ್ತಿ ಪಡೆದುಕೊಂಡಿದೆ. ಈ ಚಿಂತನೆಯನ್ನು ವಿಶೇಷವಾಗಿ ವಿದ್ಯಾರ್ಥಿ-ಯುವಜನರಿಗೆ ತಲುಪಿಸುವುದಕ್ಕೆ ನಮ್ಮ ಸಂಸ್ಥೆ ತನ್ನನ್ನು ಅರ್ಪಿಸಿಕೊಂಡಿದೆ, ಹಾಗೆಯೆ, ದಲಿತ ಸಮುದಾಯಕ್ಕೆ ಸಂಬಂಧಿಸಿದ ವಿಭಿನ್ನ ವಿಷಯಗಳನ್ನು ಅರಿತುಕೊಳ್ಳಲು, ಅಧ್ಯಯನ ಮಾಡಲು ಮತ್ತು ವಿಶ್ಲೇಷಣೆ ಮಾಡಲು 5 ವರ್ಷಗಳಿಂದ ನಮ್ಮ ಸಂಸ್ಥೆ ಕೆಲಸ ಮಾಡುತ್ತಿದೆ.
ವಿದ್ಯಾರ್ಥಿ-ಯುವಜನರೊಂದಿಗೆ ಸಂವಾದ, ವಿಚಾರ ವಿನಿಮಯ, ಪ್ರಶ್ನೋತ್ತರದಂಥ ಅನೇಕ ಕಾರ್ಯಕ್ರಮಗಳನ್ನು ಬಿಡಿಎಫ್ ಇದುವರೆಗೆ ಹಮ್ಮಿಕೊಂಡು ಬಂದಿದೆ.
ಬಿಡಿಎಫ್ ಇದುವರೆಗೆ ಅನೇಕ ಕಿರುಪುಸ್ತಕಗಳನ್ನು ವಿದ್ಯಾರ್ಥಿ ಯುವಜನರಿಗೆ ಉಚಿತವಾಗಿ ನೀಡಿದೆ. ಡಾ. ಅಂಬೇಡ್ಕರ್ ಅವರು ಸಂವಿಧಾನದ ಕರಡು ಪ್ರತಿಯನ್ನು ಸಂವಿಧಾನ ರಚನಾ ಸಭೆಗೆ ಸಲ್ಲಿಸಿದ ನಂತರ ಮಾಡಿದ ಭಾಷಣದ ಕನ್ನಡ ಅನುವಾದದ 2000 ಪ್ರತಿಗಳನ್ನು ಕೂಡ ವಿದ್ಯಾರ್ಥಿಗಳಿಗೆ ಮತ್ತು ಯುವಜನರಿಗೆ ತಲುಪಿಸಿದೆ.
2019, ಜ. 26ರಂದು ಬೆಂಗಳೂರಿನ ಹತ್ತು ಮೆಟ್ರೋ ರೇಲ್ವೆ ನಿಲ್ದಾಣಗಳಲ್ಲಿ ಒಂದು ಗಂಟೆ ಕಾಲ ‘ಎಕ್ಸಿಟ್’ ಗೇಟ್ ಬಳಿ ನಿಂತು, ಮೆಟ್ರೋ ಪ್ರಯಾಣ ಮುಗಿಸಿಕೊಂಡು ತೆರಳುತ್ತಿದ್ದ 8000 ಮಂದಿ ಪ್ರಯಾಣಿಕರಿಗೆ ‘ಸಂವಿಧಾನದ ಪೀಠಿಕೆ’ ಕಾರ್ಡ್ ಗಳನ್ನು ನೀಡಲಾಗಿದೆ.
ನಗರ ಮತ್ತು ಗ್ರಾಮೀಣ ಪ್ರದೇಶದ ನೂರಾರು ಕಾಲೇಜು ಗಳಿಗೆ ಈ ಕಾರ್ಡ್ಗಳನ್ನು ವಿತರಿಸಲಾಗಿದೆ. ಒಂದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿ (ಶಾಲೆ/ಕಾಲೇಜು)ಗಳ ಜೊತೆ ಸಂವಾದ ನಡೆಸಲಾಗಿದೆ.
ಈಗ, ಡಾ. ಅಂಬೇಡ್ಕರ್ ಅವರ ಜನ್ಮ ದಿನಾಚರಣೆ ಪ್ರಯುಕ್ತ, ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಲ್ಲಿನ ವಿವಿಧ ವಿಭಾಗಗಳ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಲು ಬಿಡಿಎಫ್ ಆಶಿಸಿದೆ. ಇದರಲ್ಲಿ ಹೆಚ್ಚಿನ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಭಾಗವಹಿಸಬೇಕೆಂದು ಕೋರಲಾಗಿದೆ.
ನಿಬಂಧನೆಗಳು
1. ಪ್ರಬಂಧವು ಕನ್ನಡ ಅಥವಾ ಇಂಗ್ಲೀಷ್ ಭಾಷೆಯಲ್ಲಿ 2000 – 3000 ಪದಗಳ ಒಳಗೆ ಇರಬೇಕು. ಕನ್ನಡ ಪ್ರಬಂಧವನ್ನು ಸಾಫ್ಟ್ ಕಾಪಿ ಕಳಿಸುವುದಾದರೆ, ಪ್ರಬಂಧವು ನುಡಿ ತಂತ್ರಾಂಶದಲ್ಲಿ ಇರಬೇಕು
2. ಪ್ರಬಂಧವನ್ನು ಈಮೇಲ್ ಮೂಲಕ ಅಥವಾ ರಿಜಿಸ್ಟರ್ಡ್ ಅಂಚೆ ಮೂಲಕ ಕಳಿಸಬಹುದು.
3. ಪ್ರಬಂಧದಲ್ಲಿ ಉಲ್ಲೇಖಗಳಿಗೆ, ಉದೃ ಭಾಗಗಳಿಗೆ ಅವಕಾಶ ಇದೆ; ಆದರೆ, ಕೃತಿಚೌರ್ಯಕ್ಕೆ ಅವಕಾಶ ಇಲ್ಲ.
4. ಪ್ರಬಂಧಕ್ಕೆ ಪುಟಸಂಖ್ಯೆಗಳನ್ನು ಹಾಕಿರಬೇಕು.
5. ಸ್ನಾತಕೋತ್ತರ ಅಥವಾ ಸಂಶೋಧನಾ ವಿದ್ಯಾರ್ಥಿ-ವಿದ್ಯಾರ್ಥಿನಿ ಆಗಿರುವ ಬಗ್ಗೆ ವಿಭಾಗ ಮುಖ್ಯಸ್ಥರಿಂದ/ಮಾರ್ಗದರ್ಶಕ ಪ್ರಾಧ್ಯಾಪಕರಿಂದ ಧೃಡೀಕರಣ ಪ್ರಮಾಣಪತ್ರವನ್ನು ಲಗತ್ತಿಸಿರಬೇಕು.
6. ಸ್ವೀಕರಿಸಿದ ಪ್ರಬಂಧಗಳನ್ನು ಹಿಂತಿರುಗಿಸಲಾಗುವುದಿಲ್ಲ.
7. ಈ ಎಲ್ಲಾ ಪ್ರಬಂಧಗಳನ್ನು ಪುಸ್ತಕದ ರೂಪದಲ್ಲಿ ಪ್ರಕಟಿಸುವ ಹಕ್ಕು ಬಿಡಿಎಫ್ ಬಳಿ ಇರುತ್ತದೆ.
8. ಪ್ರಬಂಧಗಳನ್ನು ಸ್ವೀಕರಿಸಲು ಕಡೇ ದಿನಾಂಕ 13 ಏಪ್ರಿಲ್ 2021 ರಾತ್ರಿ 8ಗಂಟೆವರೆಗೆ
ಪ್ರಬಂಧ ಕಳಿಸಬೇಕಾದ ವಿಳಾಸ: ಬೆಂಗಳೂರು ದಲಿತ್ ಫೋರಮ್, ಫ್ಲಾಟ್ ನಂಬರ್ 229, ರೇಡಿಯಂಟ್ ಕರೇಲ್ ಅಪಾರ್ಟ್ಮೆಂಟ್, ನಾಯಂಡಹಳ್ಳಿ, ಬೆಂಗಳೂರು-560 069

ಹೆಚ್ಚಿನ ಮಾಹಿತಿಗೆ ಮೊಬೈಲ್ ನಂಬರ್ 9880412233, ಇಮೇಯ್ಲ್: bdftim@gmail.com
ಸಂಪರ್ಕಿಸ ಬಹುದು.
*****