ಬಳ್ಳಾರಿ: ಕೊಪ್ಪಳ ಜಿಲ್ಲೆಯ ಕನಕಗಿರಿಯ ಕನಕಾಚಲಪತಿ ಬ್ರಹ್ಮೋತ್ಸವ ಅಂಗವಾಗಿ ಹಮ್ಮಿ ಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಗರದ ತುಂಗಾ ಗಂಗಾ ಸಾಂಸ್ಕೃತಿಕ ಕಲಾ ಸಂಘದ ಕಲಾವಿದರು ಪ್ರಸ್ತುತಪಡಿಸಿದ ನೃತ್ಯ ಅಭಿಷೇಕ ನಾಟ್ಯಪ್ರಿಯರ ಮನ ರಂಜಿಸಿತು .
ಸಂಘದ ವೈಷ್ಣವಿ ಮುಂತಾದ ಕಲಾವಿದರ ನೃತ್ಯ ಪ್ರತಿಭೆಗೆ ಸಭಿಕರು ಚಪ್ಪಾಳೆ ತಟ್ಟಿ ಪ್ರಶಂಸಿಸಿದರು.
ತಿರುಮಲ ತಿರುಪತಿ ದಾಸ ಸಾಹಿತ್ಯ ಪ್ರಾಜೆಕ್ಟ್, ಮಂತ್ರಾಲಯ ಗುರು ರಾಘವೇಂದ್ರ ಸಾಹಿತ್ಯ ಪ್ರಾಜೆಕ್ಟ್, ಶ್ರೀ ಗುರು ಶಿಷ್ಯ ವಿಠ್ಠಲ ಸೇವಾ ಟ್ರಸ್ಟ್ ಕನಕಗಿರಿ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಎಲ್ಲಾ ಕಲಾವಿದರಿಗೆ ನೆನಪಿನ ಕಾಣಿಕೆ, ಪ್ರಶಂಸನಾ ಪತ್ರಗಳನ್ನು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಗುರುರಾಜ ಭೀಮರಾವ್, ವೈಷ್ಣವಿ ರಂಗ ಕಲಾವಿದ ನಾಗಭೂಷಣ್, ಪ್ರೀತಿ, ವಿಜಯಲಕ್ಷ್ಮಿ ಶ್ವೇತಾ, ಅರ್ಚನಾ, ಸಾತ್ವಿಕ, ದಿಶಾ, ಅವಂತಿಕ ಮುಂತಾದವರಿದ್ದರು
*****