ಅನುದಿನ ಕವನ-೯೪ ಕವಿ:ಗೀತೇಶ್( ವಿ. ಆರ್. ಮುರಳೀಧರ್), ಧಾರವಾಡ, ಕವನದ ಶೀರ್ಷಿಕೆ: ನನ್ನವಳು

🌹ನನ್ನವಳು🌹💃

         

ಜೊತೆಯಲಿರುವಾಗ
ಜಂಟಿಯಾಗಿಯೇ ಇರುವವಳು
ನನ್ನವಳು,
ಒಂಟಿಯಾಗಿರುವಾಗ
ನೆನಪಾಗುತಾ ಕಾಡುವವಳೂ
ನನ್ನವಳು.💃
…..

ಉಸಿರಿಗೊಮ್ಮೆ
ಹೆಸರಾಗಿ ಕಾಡುವವಳು
ನನ್ನವಳು,
ನಾನೆಲ್ಲೇ ಇರಲಿ
ಜೊತೆಯಾಗಿ ಇರುವವಳೂ
ನನ್ನವಳು.💃
……

ಮನದಿಚ್ಛೆಯ
ಅರಿತು ನಡೆವವಳು
ನನ್ನವಳು,
ಮನದಂಗಳದಿ
ಬೆಳಗುವ ನಿತ್ಯ ನಕ್ಷತ್ರವೂ
ನನ್ನವಳು.💃
……

ತಾನಂದುಕೊಂಡಿದ್ದನ್ನು
ಸಾಧಿಸೀಯೇ ತೀರುವವಳು
ನನ್ನವಳು,
ಎದುರಾಡಿದೆನೆಂದರೆ
ಕಣ್ಣಲ್ಲೇ ಕೊಲ್ಲುವವಳೂ
ನನ್ನವಳು.💃
……

ಸಹಧರ್ಮಿಣಿಯಾಗಿ
ಸಪ್ತಪದಿ ತುಳಿದಳವಳು
ನನ್ನವಳು,
ನೋವಲ್ಲೂ ನಲಿವಲ್ಲೂ
ಸಹಭಾಗಿ ಅನ್ನುವವಳೂ
ನನ್ನವಳು.💃
……

-ಗೀತೇಶ್✍️
(ವಿ. ಆರ್. ಮುರಲೀಧರ್)