ಅನುದಿನ ಕವನ-೯೫ ಕವಯತ್ರಿ:ವಿನುತಾ. ಎಸ್, ಕವನದ ಶೀರ್ಷಿಕೆ: ಬುದ್ಧನೆಂದರೆ

ಬುದ್ಧನೆಂದರೆ❤️

ಎಲ್ಲ ಕಾಲದಲ್ಲೂ ಅರಳುವ
ಹೂವು;
ಹೃದಯಕ್ಕಂಟಿದ ಹೂ ಗಂಧ!!❤️
*****
ಬುದ್ಧ;
ಬೆಳಕು!!
ಪ್ರೀತಿ..❤️
*****
ಬುದ್ಧನೆಂದರೆ,
ನಟ್ಟ ನಡುರಾತ್ರಿಯಲ್ಲಿ
ಉದಯಿಸಿದ;
ಎಂದೂ ಮುಳುಗದ ಸೂರ್ಯ!!❤️
*****
ಬುದ್ಧ, ಪ್ರಬುದ್ಧ
ಆಗುವ ಇರಾದೆಯೇನೂ ಇಲ್ಲ,
ಮುಗ್ಧತೆ ಕಳೆದುಕೊಳ್ಳದಿದ್ದರೆ
ಎಲ್ಲವನ್ನೂ ಗೆದ್ದಂತೆಯೇ..!!
*****
ನೀವು ಎಷ್ಟೇ ಟೀಕಿಸಿದರೂ,
ಹಂಗಿಸಿದರೂ, ಹಲ್ಲು ಮಸೆದರೂ
ಶಸ್ತ್ರ ಸಾಣೆ ಹಿಡಿದು ರಣರಂಗದಲ್ಲಿ
ಕಾದು ಕುಂತರೂ,
ಬುದ್ಧ ಎಂದಿಗೂ
ಯುದ್ಧ ಸಾರುವುದೇ ಇಲ್ಲ…

– ವಿನುತಾ.ಎಸ್, ಬೆಂಗಳೂರು