ಅನುದಿನ ಕವನ-೯೬ ಕವಿ:ಡಾ. ಅಶೋಕ ಕುಮಾರ ಎಸ್ ಮಟ್ಟಿ ಮೀನಕೇರಿ ಕವನದ ಶೀರ್ಷಿಕೆ:ಜಾತಿಯ ಜಂಜಾಟ

ಜಾತಿಯ ಜಂಜಾಟ’

ಮನುಜರಲ್ಲಿ ಜಾತಿಯ ಜಂಜಾಟ
ಸಮಾಜದಲ್ಲಿ ಅನ್ಯಾಯದ ಬಡಿದಾಟ
ಸಂಪ್ರದಾಯದಲ್ಲಿ ಅಜ್ಞಾನದ ಹೊಯ್ದಾಟ.

ಅಮಲೇರಿದ ಜಾತಿಯ ಗೀಳು
ಮನುಷ್ಯರಲ್ಲೆ ಮೇಲು ಕೀಳು
ಬಡವರ ಹೊಟ್ಟೆಗೆ ಸಿಗಲಿಲ್ಲ ಕೂಳು.

ಜಾತಿ ಜಗಳವೆಂದು ಏರಿಸುವರು ತೋಳು
ಮನಸು ಮುರಿದು ಮಾಡಿವರು ಹಾಳು
ಕೇಳುವವರಿಲ್ಲ ದುಡಿದು ತಿನ್ನುವವರ ಗೋಳು.

ನಿತ್ಯಮನಸಿನಲ್ಲಿ ಅಸಮಾನತೆ ಗೋಳು
ಸಮಾಜ ಒಡೆದು ಮಾಡುವರು ಹೋಳು
ಬದುಕುವುದೇ ಕಷ್ಟವಾಗಿದೆ ಬಡವರ ಬಾಳು.

ಮನುಷ್ಯರು ಮಾಡುವ ಜಾತಿಭೇದ
ಹೇಳತೀರದು ನೊಂದವರ ಖೇದ
ಮನದಲ್ಲೇ ನುಂಗುವರು ನೋವಿನ ಭಾದ.

ಸಮಾಜಕ್ಕೆ ಮುಸುಕಿದೆ ಮೋಹದ ಮಾಯ
ಮನಸಿನಿಂದ ಮರೆಯಾಗುತ್ತಿದೆ ನ್ಯಾಯ
ಮೋಸ ಮಾಡುವ ಮನಸುಗಳು ಹೇಯ.

ಜನರ ಮನಸಿನಲ್ಲಿ ಹೆಚ್ಚುತ್ತಿದೆ ಅನ್ಯಾಯ
ಹಾಕುತ್ತಿದ್ದಾರೆ ಅಧರ್ಮಕ್ಕೆ ಅಡಿಪಾಯ
ಬಡವರಿಗೆ ಸಮಾಜದಲ್ಲಿ ಸಿಗುವುದೆಂದು ನ್ಯಾಯ.

ಪಾಪಹೆಚ್ಚಾಗಿ ಬರಲಿಲ್ಲ ಭೂಮಿಗೆ ಮಳೆ
ಹೊಲದಲ್ಲಿ ಬೆಳೆಯಲಿಲ್ಲ ಸಮೃದ್ಧವಾಗಿ ಬೆಳೆ
ಜಾತಿಗಂಜಿ ಊರಜನ ಹೋದರು ಗುಳೆ.

ಹೆಜ್ಜೆ ಹೆಜ್ಜೆಗೂ ಕೀಳೆನ್ನುವ ಅಸಮಾನತೆ
ಮೂಡುವುದೆಂದು ಮನುಜರಲ್ಲಿ ಐಕ್ಯತೆ
ಸಮಾಜದಲ್ಲಿ ಬರುವುದೆಂದು ಸಮಾನತೆ.

-ಡಾ. ಅಶೋಕ ಕುಮಾರ ಎಸ್ ಮಟ್ಟಿ ಮೀನಕೇರಿ. ಪ್ರಾಧ್ಯಾಪಕರು, ಸರಕಾರಿ ಪದವಿ ಕಾಲೇಜು, ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ಕೇಂದ್ರ ಯಾದಗಿರಿ.
ಜಿಲ್ಲಾಧ್ಯಕ್ಷರು, ಸಿರಿಗನ್ನಡ ವೇದಿಕೆ ಯಾದಗಿರಿ ಜಿಲ್ಲಾ ಘಟಕ ಯಾದಗಿರಿ.
*****