ನುಗ್ಗೆಕಾಯಿ
(ತಲ ಷಟ್ಪದಿಯಲ್ಲಿ)
********
ನುಗ್ಗೆ ಕಾಯಿ
ಜಗ್ಗಿ ಬಿಟ್ಟು
ಸುಗ್ಗಿ ದಿನದ ಹಬ್ಬಕೆ!
ಸಗ್ಗ ಸಿರಿಯು
ಬಗ್ಗಿ ಧರೆಗೆ
ಲಗ್ಗೆಯಿಟ್ಟು ಮರದಲಿ!!
ಹೊಸತು ವರುಷ
ಬೆಸೆದು ಹರುಷ
ಪಸಿರ ನೀಳಕಾಯಿಯು!
ಹೊಸೆದು ಪಾಡ್ಯ
ರಸಕವಳದಿ
ಬಸಿದ ಶಾವಿಗೆಯಜೊತೆ!!
ಬೇವು ಬೆಲ್ಲ
ಮಾವು ತಿಳಿಯ
ನಾವು ಸವಿದು ನಲಿಯಲು!
ದೇವರನ್ನು
ಜಾವನೆನೆದು
ಭಾವಿ ದಿನದ ಹರುಷಕೆ!!
ತಳಿರು ಹಾರ
ಬೆಳೆದ ಹೂವು
ಬಳಿದು ಸುಣ್ಣ ಬಣ್ಣವ!
ಕಳೆದು ಕಷ್ಟ
ತಿಳಿದು ಬಾಳಿ
ಸೆಳೆದು ಹುರುಪು ಮನೆಯಲಿ!!
ನವವಸಂತ
ನವಿರುಭಾವ
ಕವಿದ ತಮವ ಸರಿಸುತ!
ಸವಿದು ಸೊಬಗ
ನವಯುಗಾದಿ
ದಿವಸ ಖುಷಿಯಪಡುವೆವು!!
-ಧರಣೀಪ್ರಿಯೆ
ದಾವಣಗೆರೆ