ದರೋಜಿ ಡಾ.ಅಶ್ವ ರಾಮುಗೆ ಪಿಎಚ್.ಡಿ ಪದವಿ ಪ್ರದಾನ

ಕಂಪ್ಲಿ:ಸಮೀಪದ ಹಳೇ ದರೋಜಿ ಗ್ರಾಮದ ಬುಡ್ಗಜಂಗಮ‌(ಹಗಲು ವೇಷಗಾರರ) ಕಾಲೋನಿಯ ಗ್ರಾಮೀಣ ಪ್ರತಿಭೆ ಡಾ. ವೇಷ್ಗಾರು ರಾಮಾಂಜನೇಯ(ಅಶ್ವ ರಾಮು) ಅವರಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯ ಪಿಎಚ್.ಡಿ ಪದವಿ ನೀಡಿ ಗೌರವಿಸಿತು.
ವಿವಿಯ ೨೯ನೇ ನುಡಿಹಬ್ಬ ಘಟಿಕೋತ್ಸವ ಸಮಾರಂಭದಲ್ಲಿ ವಿವಿಯ ಕುಲಪತಿ ಡಾ. ಸ ಚಿ ರಮೇಶ್ ಅವರು ಪಿಎಚ್ ಡಿ ಡಾಕ್ಟರೇಟ್ ಪದವಿ ಪ್ರದಾನ ಮಾಡಿದರು.
ಉತ್ತರ ಕರ್ನಾಟಕದಲ್ಲಿ ಮೊದಲ‌ ಪಿಎಚ್.ಡಿ ಪದವಿ ಪಡೆದ ಅಲೆಮಾರಿ ಹಗಲು ವೇಷಗಾರ ಸಮುದಾಯದ ಯುವಕ ಎಂಬ ಕೀರ್ತಿಗೆ ಡಾ. ಅಶ್ವರಾಮು ಪಾತ್ರರಾಗಿದ್ದಾರೆ.
ಸಮಾರಂಭದಲ್ಲಿ ಡಾ. ರಾಮು ಅವರ ತಂದೆ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಅಶ್ವ ರಾಮಣ್ಣ, ತಾಯಿ ಶ್ರೀಮತಿ ಅಶ್ವರಾಮಣ್ಣ, ಕುಟುಂಬದ ಸದಸ್ಯರು, ಮಿತ್ರರು ಪಾಲ್ಗೊಂಡು ಸಂಭ್ರಮಿಸಿದರು.
ಅಭಿನಂದನೆ: ಡಾಕ್ಟರೇಟ್ ಆಫ್ ಫಿಲಾಸಫಿ(ಪಿಎಚ್.ಡಿ) ಪದವಿಗೆ ಪಾತ್ರರಾದ ಡಾ.ಅಶ್ವರಾಮು ಅವರನ್ನು ಡಾ.ಸುಭಾಷ್ ಭರಣಿ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಸಿ.ಮಂಜುನಾಥ್ ಅಭಿನಂದಿಸಿದ್ದಾರೆ.