ಸಾಹಿತಿ ನೂರ್ ಜಹಾನ್ ಸಶಕ್ತ ಕತೆಗಾರ್ತಿ -ಸಾಹಿತಿ ಎನ್ ಡಿ ವೆಂಕಮ್ಮ ಪ್ರಶಂಸೆ

ಹೊಸಪೇಟೆ: ಸಾಹಿತಿ ನೂರ್ ಜಹಾನ್ ಅವರಿಗೆ ಸುತ್ತಮುತ್ತಲಿನ‌ ಪರಿಸರದಲ್ಲಿ ನಡೆಯುವ ಘಟನೆಗಳನ್ನು ಸಶಕ್ತವಾಗಿ ತಮ್ಮ‌ ಕತೆಗಳಲ್ಲಿ ಕಟ್ಟಿಕೊಡುವ ಕಲೆ ಸಿದ್ಧಿಸಿದೆ ಎಂದು ಹಿರಿಯ ಸಾಹಿತಿ ಬಳ್ಳಾರಿಯ ಎನ್ ಡಿ ವೆಂಕಮ್ಮ ಅವರು ತಿಳಿಸಿದರು.
ನಗರದಲ್ಲಿ ಭಾನುವಾರ ಆಯೋಜಿಸಿದ್ದ ನೂರ್ ಜಹಾನ್ ಅವರ ಅನಾಥೆ ಕಥಾ ಸಂಕಲನ, ವಿನೋದ ಕರ್ಣಂ ಅವರ “ಚಿನ್ಮಯಿ” ಮಕ್ಕಳ ಕವನ ಸಂಕಲನ, “ಬಾಳ ನೌಕೆಯ ಅಂಬಿಗ” ಲೇಖನಗಳ ಸಂಗ್ರಹ ಮತ್ತು ವೆಂಕಟೇಶ ಬಡಿಗೇರ ಅವರ “ಕಲ್ಲು ತೇರಿನ ಕುಸುರಿ” ಸಂಪಾದಿತ ಕವನ ಸಂಕಲನಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಮಹಿಳೆಯರ ನೋವು ನಲಿವುಗಳನ್ನು ಕತೆಗಾರ್ತಿ ಮನಮುಟ್ಟುವಂತೆ ಚಿತ್ರಿಸಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಪನ್ಯಾಸಕ, ಸಾಹಿತಿ ಡಾ.ದಯಾನಂದ ಕಿನ್ನಾಳ್ ಅವರು ವಹಿಸಿದ್ದರು.
ನೂರ್ ಜಹಾನ್ ಅವರು ಮಾತನಾಡಿ, ಅನಾಥೆ ನನ್ನ ನಾಲ್ಕನೆಯ ಕೃತಿಯಾಗಿದೆ. ಪ್ರೀತಿಯ ಹಾದಿಯಲ್ಲಿ ಕಥಾಸಂಕಲನ ಉರ್ದುವಿನಿಂದ ಕನ್ನಡಕ್ಕೆ ಅನುವಾದಿಸಿ ಪ್ರಕಟಿಸಲಾಗಿದೆ. ಎರಡನೆಯದು ಮುಡಿಯಿಂದ ಬಿದ್ದ ಹೂವು ಕವನಸಂಕಲನ, ಮೂರನೆಯದು ಮುಂತಾಜ್ ಮತ್ತು ಇತರೆ ಕಥೆಗಳು. ಪ್ರಸಿದ್ಧ ಸಾಹಿತಿ
ಸಾರಾ ಅಬೂಬಕ್ಕರ್ ಅವರಿಂದ ಪ್ರೇರಿತಳಾಗಿ ಮುಂತಾಜ್ ಮತ್ತು ಇತರೆ ಕಥೆಗಳು ಕಥಾಸಂಕಲನವನ್ನು ಬರಿಯ ಮುಸ್ಲಿಂ ಮಹಿಳೆಯರ ಜೀವನ, ಅವರ ಮೇಲೆ ನಡೆಯುವ ದೌರ್ಜನ್ಯ, ಶೋಷಣೆ, ಹಾಗೂ ಅವರ ಸಮಸ್ಯೆ ಗಳನ್ನು ಕುರಿತು ನಡೆದ ಸತ್ಯಘಟನೆಗಳನ್ನು ಆಧರಿಸಿ ಬರೆದಿದ್ದೇನೆ ಎಂದು ವಿವರಿಸಿದರು.
ಅನಾಥೆ ಕಥಾಸಂಕಲನದಲ್ಲಿ ಎಲ್ಲಾ ವರ್ಗದ ವಿಶೇಷವಾಗಿ ಕೊಳಚೆ ಪ್ರದೇಶದ ಮಹಿಳೆಯರ ಜೀವನದಲ್ಲಿ ನಡೆಯುವ ಘಟನೆಗಳು ಮತ್ತು ಕೆಲವು ಕಾಲ್ಪನಿಕ ಕಥೆಗಳಿವೆ ಎಂದು ತಿಳಿಸಿದರು.
ನುಡಿ ನಮನ: ಇತ್ತೇಚೆಗೆ ನಿಧನರಾದ ಹಿರಿಯ ಸಾಹಿತಿ ಡಾ. ಎನ್, ಎಸ್ ಲಕ್ಷ್ಮಿ ನಾರಾಯಣ ಭಟ್ಟರವರ ಕುರಿತು ಶ್ರೀ ಶಂಕರ ಆನಂದ ಸಿಂಗ್ ಪ್ರಥಮ‌ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ.ಬಿ ಜಿ ಕನಕೇಶ ಮೂರ್ತಿ ಅವರು ಮಾತನಾಡಿದರು,
ಸಾಧಕರಿಗೆ ಸನ್ಮಾನ: ಇದೇ ಸಂದರ್ಭದಲ್ಲಿ ನಾಟಕ ಅಕಾಡಮಿ ಪ್ರಶಸ್ತಿ ಪುರಸ್ಕೃತ ಮ,ಬ, ಸೋಮಣ್ಣರವರು, ಸಾಹಿತ್ಯ ಶ್ರೀ ಪ್ರಶಸ್ತಿ ಪುರಸ್ಕೃತ ಡಾ.ಮೃತ್ಯುಂಜಯ ರುಮಾಲೆ, ಶಿವನಂದಿ ಪ್ರಶಸ್ತಿ ಪುರಸ್ಕೃತೆ ಡಾ, ಎಸ್, ಡಿ ಸುಲೋಚನಾ, ಮುಖ್ಯಮಂತ್ರಿ ಪದಕ ಪುರಸ್ಕೃತ ಟಿ, ಕೊಟ್ರಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕವಿಗೋಷ್ಠಿ: ಡಾ.ಎನ್, ಎಸ್, ಲಕ್ಷ್ಮಿನಾರಾಯಣ ಭಟ್ಟರ ಕುರಿತ ಕವಿಗೋಷ್ಠಿ ಜರುಗಿತು.
*****