ಇಂದು ನೇಕಾರ ಸಂತ, ಆದ್ಯ ವಚನಕಾರ ಶ್ರೀ ದೇವರ ದಾಸಿಮಯ್ಯರವರ ಜಯಂತಿ. ಸಮಸ್ತ ನೇಕಾರ ಬಂಧುಗಳಿಗೆ ದಾಸಿಮಯ್ಯ ಜಯಂತಿಯ ಹಾರ್ದಿಕ ಶುಭಾಶಯಗಳು. ಈ ಪ್ರಯುಕ್ತ ‘ಮಾನವಕುಲದ ಮಾದರಿ ದೇವರ ದಾಸಿಮಯ್ಯ’ ಎಂಬ ನನ್ನ ಲೇಖನವು ‘ಉದಯಕಾಲ’ ಕನ್ನಡ ದಿನಪತ್ರಿಕೆಯಲ್ಲಿ ಪ್ರಕಟವಾಗಿದೆ. ಪ್ರಕಟಿಸಿದ ಸಂಪಾದಕ ಬಳಗಕ್ಕೆ ಕೃತಜ್ಞತೆಗಳು. ಪ್ರೀತಿಯಿಂದ ನಿಮ್ಮ ಓದಿಗಾಗಿ…..
‘ಮಾನಸಗಂಗೆ’ ಕಾವ್ಯನಾಮದಲ್ಲಿ ಅರ್ಥಪೂರ್ಣ ಹನಿಗವನ ರಚಿಸುತ್ತಿರುವ ಶ್ರೀಮತಿ
ಶಶಿರೇಖಾ ನಾಗೇಶ್ ಅವರು ತಿಪಟೂರಿನವರು.
ಮಗ್ಗಗಳನ್ನೇ ನಂಬಿ ಬದುಕನ್ನು ಕಟ್ಟಿಕೊಳ್ಳುತ್ತಿರುವ ಮಾನಸ ಗಂಗೆ ಅವರು ಸಾವಿರಾರು ಶ್ರಮಿಕ ಮಹಿಳೆಯರಿಗೆ,ಯುವ ಸಮೂಹಕ್ಕೆ ಸ್ಫೂರ್ತಿಯಾಗಿದ್ದಾರೆ.
ಇಂದು ನೇಕಾರ ಸಂತ, ಆದ್ಯ ವಚನಕಾರ ಶ್ರೀ ದೇವರ ದಾಸಿಮಯ್ಯನವರ ಜಯಂತಿ. ಸಮಸ್ತ ನೇಕಾರ ಬಂಧುಗಳಿಗೆ ದಾಸಿಮಯ್ಯ ಜಯಂತಿಯ ಹಾರ್ದಿಕ ಶುಭಾಶಯಗಳು.
ಸಂತ ದೇವರ ದಾಸಿಮಯ್ಯ ಅವರ ಜಯಂತಿಯ ಈ ಶುಭ ಸಂದರ್ಭದಲ್ಲಿ ನೇಕಾರ, ನೇಕಾರಿಕೆಯ ಕುರಿತು ಮಾನಸಗಂಗೆ ಅವರು ರಚಿಸಿರುವ ಹನಿಗವನಗಳು ಇಂದಿನ “ಅನುದಿನ ಕವನ”ದ ಗೌರವಕ್ಕೆ ಪಾತ್ರವಾಗಿವೆ.👇
ನೇಕಾರನ
ಬೆವರ ಹನಿಯೇ
ನೇಯ್ಗೆ ಮನೆಯ
ಸುಗಂಧ ದ್ರವ್ಯ …
***
ದೇವರೂ
ಸರತಿಸಾಲಿನಲ್ಲಿ
ನಿಲ್ಲುತ್ತಾನೇ
ನೇಕಾರನ ಮನೆಯ ಮುಂದೆ …
***
ಬೆಸೆವ ನೂಲು
ಸವೆದು ಹೋಗಬಾರದೆಂದು
ಗಂಟು ಬಿಗಿಯುತ್ತಾನೆ
ತುಂಡಾದ ಎಳೆಗೆ…
***
ಒಪ್ಪ ಓರಣವಿಲ್ಲ
ಹಸಿರು ತೋರಣವಿಲ್ಲ
ನೇಕಾರನ ಮನೆಯಲ್ಲಿ
ದಿನವು ಹಬ್ಬ…
***
ಮಾನಸ ಗಂಗೆ
ದೇವರ ದಾಸಿಮಯ್ಯ ಜಯಂತಿಯ ಶುಭಾಶಯಗಳೊಂದಿಗೆ…..
*****