ಅನುದಿನ ಕವನ-೧೧೨, ಕವಿ: ಮಹೇಂದ್ರ ಕುರ್ಡಿ, ಕವನದ ಶೀರ್ಷಿಕೆ:ಹೃದಯ ಸ್ಪರ್ಶಿ

ಹೃದಯ ಸ್ಪರ್ಶಿ                                                   

ಸಾರ್ಥಕವಾಗಲಿ ನಿನ್ನ ಬಾಳು
ಮಾನವತೆಯ ಬಿತ್ತಿ ನೋಡು
ಇದು ಮೂರು ದಿನದ ಬಾಳು
ಸ್ವಾರ್ಥ ತೊರೆದು ಸೇವೆ ಮಾಡು.

ಬಿಸಿಲು ತಿಂದು ನೆರಳು ನೀಡುವ
ಮರಗಿಡಗಳಂತೆ ನೀನಾಗು
ಕೀಟ ತಿಂದು ಬೆಳೆ ಕಾಯುವ
ರೈತ ಮಿತ್ರ ಹಕ್ಕಿಯಂತಾಗು.

ಹೃದಯ ಸೃರ್ಶಿ ನೀನಾಗಿ
ಇತರರ ನೋವು ಕೇಳು
ತಿಳಿದೂ ಕಟುಕನಂತೆ ಸಾಗಿ
ಆಗದಿರು ಮೃಗ ಕ್ಕಿಂತಲೂ ಕೀಳು.

ಅನ್ಯರ ಬಾಳಿಗೆ ಹಾಕಿ ಉಪ್ಪು ಖಾರ
ತೋರದಿರು ನಿನ್ನ ಚಮತ್ಕಾರ
ಕೈಲಾಗದಿರೆ ಬಿಡು ಉಪಕಾರ
ತೆಪ್ಪಗಿರುವುದೇ ಮಹಾ ಪರೋಪಕಾರ.

✍🏻 ಮಹೇಂದ್ರ ಕುರ್ಡಿ
*****