ಬಳ್ಳಾರಿ: ಬಳ್ಳಾರಿ ಮಹಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ಕಾಂಗ್ರೆಸ್ ಪಕ್ಷ ಮತ್ತೇ ಹಿಡಿಯುವಲ್ಲಿ ಯಶಸ್ವಿಯಾಗಿದೆ.
ಪಾಲಿಕೆಯ 39 ವಾರ್ಡ್‍ಗಳಲ್ಲಿ ಕಾಂಗ್ರೆಸ್ ಪಕ್ಷದ 21 ಜನರು ವಿಜಯಶಾಲಿಗಳಾಗುವ ಮೂಲಕ ನಗೆ ಬೀರಿದರೆ, ಬಿಜೆಪಿ 13 ಸ್ಥಾನಗಳನ್ನು ಪಡೆದು ಸೋಲು ಒಪ್ಪಿಕೊಂಡಿದೆ. 5 ಜನ ಪಕ್ಷೇತರರು ಗೆಲುವು ಪಡೆದು ತಮ್ಮ ಸಾಮರ್ಥ್ಯವನ್ನು ಸಾಬೀತು ಪಡಿಸಿದ್ದಾರೆ. ವಿಶೇಷವೆಂದರೆ ಈ ಐವರು ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿಯಲು ಪ್ರಯತ್ನಿಸಿ ವಿಫಲರಾಗಿ ಪಕ್ಷೇತರರಾಗಿ ಸ್ಪರ್ಧಿಸಿ ಯಶಸ್ವಿಯಾಗಿದ್ದಾರೆ.
18 ನೇ ವಾರ್ಡಿನಿಂದ ಸ್ಪರ್ಧಿಸಿದ್ದ ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಅವರ ಪುತ್ರ
ಜಿ.ಶ್ರವಣಕುಮಾರ ರೆಡ್ಡಿ ಅವರು ಕಾಂಗ್ರೆಸ್ ಪಕ್ಷದ ಎಂ. ನಂದೀಶ್ ಅವರಿಂದ 136 ಮತಗಳ ಅಂತರದಿಂದ ಪರಾಭವಗೊಂಡಿದ್ದಾರೆ.
ರಾಯಚೂರು ಮಾಜಿ ಸಂಸದ, ಬಿಜೆಪಿ ಮುಖಂಡ .ಸಣ್ಣ ಫಕ್ಕೀರಪ್ಪ ಅವರ ಪುತ್ರಿ ಉಮಾದೇವಿ ಅವರನ್ನು ಕಾಂಗ್ರೆಸ್ ಮುಖಂಡ ಚಿನ್ನಾಯಪ್ಪ ಅವರ ಸೊಸೆ, ಕನ್ನಡಪರ ಯುವ ಹೋರಾಟಗಾರ ಪಿ. ಜಗನ್ನಾಥ್ ಅವರ ಪತ್ನಿ ಶಶಿಕಲಾ ಅವರು 1386 ಮತಗಳ ಭಾರಿ ಅಂತರದ ಜಯ ಸಾಧಿಸಿರುವುದು ವಿಶೇಷ.
ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅವರು ಒಂದು ತಿಂಗಳಿಂದ ತಮ್ಮ ಉಸ್ತುವಾರಿಯ ಚಿತ್ರದುರ್ಗಕ್ಕೆ ತೆರಳದೇ ಬಳ್ಳಾರಿಯಲ್ಲಿ ಠಿಕಾಣಿ ಹೂಡಿ ಪ್ರಚಾರದ ಹೊಣೆಹೊತ್ತು ಬಿಜೆಯ ಅಭ್ಯರ್ಥಿಗಳನ್ನು ಗೆಲ್ಲಿಸಲು ಶ್ರಮಿಸಿದ್ದರೂ ಕೇವಲ 13 ಜನರು ಮಾತ್ರ ಪಾಲಿಕೆಯ ಮೆಟ್ಟಿಲು ಹತ್ತಲು ಸಾಧ್ಯವಾಗಿದೆ.
ಬಮಪಾ ಚುನಾವಣೆಯ ಮತ ಎಣಿಕೆ ಶುಕ್ರವಾರ ನಗರದ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಜರುಗಿತು.
39 ವಾರ್ಡ್‍ಗಳ ಮತ ಎಣಿಕೆಯು 8 ಕೋಣೆಗಳಲ್ಲಿ 5 ಸುತ್ತುಗಳಲ್ಲಿ ನಡೆಯಿತು.
ವಿಜೇತ ಅಭ್ಯರ್ಥಿಗಳ ವಿವರ ಇಂತಿದೆ:
1ನೇ ವಾರ್ಡ್: ಬಿಜೆಪಿಯ ಹನುಮಂತ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ನ ಕೆ. ವೀರೇಂದ್ರ ಕುಮಾರ್ ಅವರನ್ನು 892 ಮತಗಳ ಅಂತರದಿಂದ ಪರಾಭವ ಗೊಳಿಸಿದರು.
ಹನುಮಂತ ಅವರು ಪಡೆದ ಮತಗಳು:2606, ಕೆ.ವೀರೇಂದ್ರ ಕುಮಾರ್(ಕಾಂಗ್ರೆಸ್)ಪಡೆದ ಮತಗಳು 1714.
2ನೇ ವಾರ್ಡ್: ವಿಜೇತ ಅಭ್ಯರ್ಥಿ ಕೆ.ಈರಮ್ಮ ಸೂರಿ(ಬಿಜೆಪಿ) ಪಡೆದ ಮತಗಳು: 1446, ಸಮೀಪ ಅಭ್ಯರ್ಥಿ ಜವೇರಿಯಾ ಸಾಬ್ (ಕಾಂಗ್ರೆಸ್) ಪಡೆದ ಮತಗಳು:1300. ಈರಮ್ಮ ಅವರು
146 ಮತಗಳ ಅಂತರದಿಂದ ಜಯಿಸಿದ್ದಾರೆ.
3ನೇ ವಾರ್ಡ್ : ಪಕ್ಷೇತರ ಅಭ್ಯರ್ಥಿ ಎಂ.ಪ್ರಭಂಜನ ಕುಮಾರ್ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಪಾಲಿಕೆಯ ಮಾಜಿ ಉಪಮೇಯರ್, ಕಾಂಗ್ರೆಸ್ ನ ಬೆಣಕಲ್ಲು ಬಸವರಾಜ ಗೌಡ ಅವರನ್ನು 2802 ಮತಗಳ ಭಾರಿ ಅಂತರದಿಂದ ಪರಾಭವಗೊಳಿಸಿದ್ದಾರೆ.
ಪ್ರಭಂಜನ ಅವರು ಪಡೆದ ಮತಗಳು:4110, ಬಸವರಾಜ ಗೌಡ ಬಿ(ಕಾಂಗ್ರೆಸ್) ಪಡೆದ ಮತಗಳು ಕೇವಲ 1308,
4ನೇ ವಾರ್ಡ್: ವಿಜೇತ ಅಭ್ಯರ್ಥಿ ಡಿ.ತ್ರಿವೇಣಿ(ಕಾಂಗ್ರೆಸ್) ಪಡೆದ ಮತಗಳು:1791, ಸಮೀಪದ ಪ್ರತಿಸ್ಪರ್ಧಿ ವನಿತಾ ಷ(ಬಿಜೆಪಿ) ಪಡೆದ ಮತಗಳು:1290 ಡಿ. ತ್ರಿವೇಣಿ ಅವರು 501 ಮತಗಳ ಅಂತರದ ಜಯ ಪಡೆದರು.
ತ್ರಿವೇಣಿ ಮಹಾನಗರ ಪಾಲಿಕೆಯ ಮಾಜಿ ಮೇಯರ್ ಸುಶೀಲಾ ಭಾಯಿ ಡಿ ಸೂರಿ ಅವರ ಪುತ್ರಿ. ವಿಶೇಷವೆಂದರೆ ಪಾಲಿಕೆಯ ವಿಜೇತ ಅಭ್ಯರ್ಥಿಗಳಲ್ಲಿ ಕಿರಿಯ ಸದಸ್ಯೆ.
5ನೇ ವಾರ್ಡ್: ಕಾಂಗ್ರೆಸ್ ನ ಹೆಚ್.ರಾಜಶೇಖರ ಅವರು 2699, ಪಡೆದು ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ವೆಂಕಟೇಶ್ (2602 ಮತಗಳು) ಅವರನ್ನು ಕೇವಲ 97 ಮತಗಳ ಅಂತರದಿಂದ ಪರಾಭವ ಗೊಳಿಸಿದರು.
6ನೇ ವಾರ್ಡ್: ವಿಜೇತ ಅಭ್ಯರ್ಥಿ ಎಂ.ಕೆ.ಪದ್ಮರೋಜ(ಕಾಂಗ್ರೆಸ್) ಪಡೆದ ಮತಗಳು:2853, ಸಮೀಪ ಪ್ರತಿಸ್ಪರ್ಧಿ ಹುಂಡೇಕರ್ ಶ್ರೀವರ್ಧಿನಿ(ಬಿಜೆಪಿ),ಪಡೆದ ಮತಗಳು:1871,
ಪದ್ಮರೋಜ ಅವರು 982 ಮತಗಳ ಅಂತರದ ಜಯಶೀಲರಾದರು.
7ನೇ ವಾರ್ಡ್ ವಿವರ:* ವಿಜೇತ ಅಭ್ಯರ್ಥಿ ಉಮಾದೇವಿ ಶಿವರಾಜ(ಕಾಂಗ್ರೆಸ್) ಪಡೆದ ಮತಗಳು:3859, ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಲಕ್ಷ್ಮಿ ಹೊನ್ನೂರಪ್ಪ ಅವರನ್ನು 1985 ಮತಗಳ ಭಾರಿ ಅಂತರದಿಂದ ಪರಾಭವಗೊಳಿಸಿ ಗೆಲುವಿನ ನಗೆ ಬೀರಿದರು.
8ನೇ ವಾರ್ಡ್:ಕಾಂಗ್ರೆಸ್ ಪಕ್ಷದ ಎಂ.ರಾಮಾಂಜನೇಯುಲು ಅವರು 2794 ಮತಗಳನ್ನು ಪಡೆದು ತಮ್ಮ ಸಮೀಪದ ಪ್ರತಿಸ್ಪರ್ಧಿ ಪಾಲಿಕೆಯ ಮಾಜಿ ಸದಸ್ಯ ಬಿಜೆಪಿಯ ವೈ.ಬಿ.ಸೀತಾರಾಮ್ (ಪಡೆದ ಮತಗಳು:2152) ಅವರನ್ನು 642 ಮತಗಳ ಅಂತರದ ಸೋಲಿಸಿ ಪಾಲಿಕೆಯನ್ನ ಪ್ರವೇಶಿಸಿದ್ದಾರೆ.
9ನೇ ವಾರ್ಡ್: ಕಾಂಗ್ರೆಸ್ ನ ಜಬ್ಬರ್ ಸಾಬ್ ಅವರು 2626 ಮತಗಳನ್ನು ಪಡೆದು ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಎಸ್.ಶರ್ಮಾಸ್ (ಪಡೆದ ಮತಗಳು:1480) ಅವರನ್ನು 1146 ಮತಗಳ ಅಂತರದಿಂದ ಸೋಲಿನ ಕಹಿ ಉಣಿಸಿದರು.
10ನೇ ವಾರ್ಡ್ :ಬಿಜೆಪಿಯ ಕೋನಂಕಿ ತಿಲಕ್ ಕುಮಾರ್ ಅವರು ಮಾಜಿ ಕಾರ್ಪೋರೇಟರ್, ಕಾಂಗ್ರೆಸ್ ಪಕ್ಷದ ವಿ ಎಸ್ ಮರಿದೇವಯ್ಯ ಅವರನ್ನು 1986 ಮತಗಳ ಭಾರಿ ಅಂತರದಿಂದ ಪರಾಭವಗೊಳಿಸಿ ಗೆಲುವಿನ ನಗೆ ಬೀರಿದರು. ತಿಲಕ್ ಕುಮಾರ್ ಅವರು ಪಡೆದ ಮತಗಳು:4050, ವಿ.ಎಸ್.ಮರಿದೇವಯ್ಯ(ಕಾಂಗ್ರೆಸ್)ಪಡೆದ ಮತಗಳು:2064,
11ನೇ ವಾರ್ಡ್: ವಿಜೇತ ಅಭ್ಯರ್ಥಿ ಎನ್.ಗೋವೀದರಾಜುಲು(ಬಿಜೆಪಿ)ಪಡೆದ ಮತಗಳು 2383, ತಮ್ಮ ಸಮೀಪದ ಪ್ರತಿಸ್ಪರ್ಧಿ ಟಿ.ಲೋಕೇಶ್(ಕಾಂಗ್ರೆಸ್)ಪಡೆದ ಮತಗಳು:1865,
ಗೋವಿಂದರಾಜುಲು ಅವರು 518 ಮತಗಳ ಅಂತರದ ಜಯ ಸಾಧಿಸಿದರು.
12ನೇ ವಾರ್ಡ್: ವಿಜೇತ ಬಿಜೆಪಿ ಅಭ್ಯರ್ಥಿ ಕೆ.ಎ.ಚೇತನ ವೇಮಣ್ಣ ಅವರು :1422 ಮತಗಳನ್ನು ಪಡೆದು ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ಪಕ್ಷದ ಕೆ.ಜ್ಯೋತಿ( ಪಡೆದ ಮತಗಳು:1375) ಅವರನ್ನು ಕೇವಲ 47 ಮತಗಳ ಅಂತರದಿಂದ ಪರಾಭವಗೊಳಿಸಿದರು.
13ನೇ ವಾರ್ಡ್ : ಪಾಲಿಕೆಯ ಮಾಜಿ ಮೇಯರ್ ಬಿಜೆಪಿಯ ಸಿ.ಇಬ್ರಾಹಿಂ ಅವರು ತಮ್ಮ ಸಮೀಪದ ಪ್ರತಿ ಸ್ಪರ್ಧಿ ಕಾಂಗ್ರೆಸ್ ಪಕ್ಷದ ಕೆ.ಮಾರುತಿ ಅವರನ್ನು ಬರೀ 44 ಮತಗಳಿಂದ ಸೋಲುಣಿಸಿ ಎರಡನೇ ಬಾರಿ ಪಾಲಿಕೆ ಪ್ರವೇಶಿಸಿದರು.
ಇಬ್ರಾಹೀಂ ಅವರು 3203 ಮತ ಪಡೆದರೆ ಸಮೀಪದ ಪ್ರತಿಸ್ಪರ್ಧಿ ಕೆ.ಮಾರುತಿ ಅವರು 3159 ಮತ ಗಳಿಸಿದ್ದಾರೆ.
14ನೇ ವಾರ್ಡ್ :ವಿಜೇತ ಅಭ್ಯರ್ಥಿ ಕಾಂಗ್ರೆಸ್ ಪಕ್ಷದ ಬಿ.ರತ್ನಮ್ಮ ಅವರು 2709 ಮತ ಪಡೆದು ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಜಿ.ಎಂ.ಕವಿತ (ಪಡೆದ ಮತಗಳು1223) ಅವರನ್ನು 1486 ಮತಗಳ ಭಾರಿ ಅಂತರದಿಂದ ಪರಾಭವಗೊಳಿಸಿದರು.
15ನೇ ವಾರ್ಡ್ ವಿವರ:ವಿಜೇತ ಅಭ್ಯರ್ಥಿ ನೂರ್ ಮೊಹಮ್ಮದ್ (ಪಕ್ಷೇತರ) ಪಡೆದ ಮತಗಳು: 1801, ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಬಿ.ಕವಿತಾ ನಾಗಭೂಷಣ ಪಡೆದ ಮತಗಳು:1013,
ನೂರ್ ಮೊಹಮ್ಮದ್ ಅವರು ಕವಿತಾ ಅವರನ್ನು 788 ಮತಗಳ ಅಂತರದಿಂದ ಪರಾಭವ ಗೊಳಿಸಿದರು.
16ನೇ ವಾರ್ಡ್ : ಬಿಜೆಪಿಯ ನಾಗರತ್ನ ಅವರು :2661 ಮತಗಳನ್ನು ಪಡೆದು ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರಸ್ ನ ಕೌಶಲ್ಯ.ವಿ (2363) ಅವರನ್ನು 298 ಮತಗಳ ಅಂತರದಿಂದ ಸೋಲುಣಿಸಿದರು.
17ನೇ ವಾರ್ಡ್: ಪಕ್ಷೇತರ ಅಭ್ಯರ್ಥಿ ಕವಿತಾ ಕೆ.ಹೊನ್ನಪ್ಪ ಅವರು 2116ಮತಗಳನ್ನು ಪಡೆದು ತಮ್ಮ ಸಮೀಪದ
ಪ್ರತಿಸ್ಪರ್ಧಿ ಅರುಣಾ ಬಿ.ಕೆ ಅವರನ್ನು .65 ಮತಗಳಿಂದ ಪರಾಭವಗೊಳಿಸಿದರು. ಅರುಣಾ ಅವರು :2051 ಮತ ಗಳಿಸಿದ್ದಾರೆ.
18ನೇ ವಾರ್ಡ್: ನಗರದಾದ್ಯಂತ ಭಾರಿ ಗಮನಸೆಳೆದಿದ್ದ 18 ವಾರ್ಡಿನಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಮುಲ್ಲಂಗಿ ರವೀಂದ್ರಬಾಬು ಅವರ ಪುತ್ರ ಎಂ.ನಂದೀಶ್(ಕಾಂಗ್ರೆಸ್) ಅವರು 2509, ಮತಗಳನ್ನು ಪಡೆದು ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಗಾಲಿ ಶ್ರವಣ್ ಕುಮಾರ್ ರೆಡ್ಡಿ(ಪಡೆದ ಮತಗಳು 2376) ಅವರನ್ನು 133 ಮತಗಳ ಅಂತರದ ಪರಾಭವಗೊಳಿಸಿದ್ದಾರೆ.
19ನೇ ವಾರ್ಡ್: ಬಿಜೆಪಿಯ ಕೆ.ಎಸ್.ಆಶೋಕ್ ಕುಮಾರ್ ಅವರು 3725 ಮತ ಪಡೆದು ತಮ್ಮ ಸಮೀಪದ ಪ್ರತಿ ಸ್ಪರ್ಧಿ ಕಾಂಗ್ರೆಸ್ ನ ಮುರುಳಿ (ಪಡೆದ ಮತಗಳು 702) ಅವರನ್ನು 3023 ಮತಗಳ ಭಾರಿ ಅಂತರದ ಪರಾಭವಗೊಳಿಸಿದ್ದಾರೆ.
20ನೇ ವಾರ್ಡ್ :ಕಾಂಗ್ರೆಸ್ ಪಕ್ಷದ ಪಿ.ವಿವೇಕ್(ವಿಕ್ಕಿ) ಅವರು 2825 ಮತಗಳನ್ನು ಪಡೆದು ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಕೆ.ಕೃಷ್ಣಾ(ಪಡೆದ ಮತಗಳು:2232)ಅವರನ್ನು 593 ಮತಗಳ ಅಂತರದಿಂದ ಮಣಿಸಿ ಜಯಶೀಲರಾಗಿದ್ದಾರೆ.
21ನೇ ವಾರ್ಡ್: ನಗರಸಭೆಯ ಮಾಜಿ ಸದಸ್ಯೆ, ಬಿಜೆಪಿಯ ಸುರೇಖಾ ಮಲ್ಲನಗೌಡ ಅವರು 2559 ಮತಗಳನ್ನು ಪಡೆದು ತಮ್ಮ ಸಮೀಪದ ಪ್ರತಿಸ್ಪರ್ಧಿ ಲತಾ ಚಾನಾಳ್ ಶೇಖರ್( ಪಡೆದ ಮತಗಳು:1500,) ಅವರನ್ನು 1059 ಮತಗಳ ಅಂತರದಿಂದ ಪರಾಭವ ಗೊಳಿಸಿದರು.
22ನೇ ವಾರ್ಡ್: ವಿಜೇತ ಅಭ್ಯರ್ಥಿ ಹನುಮಂತಪ್ಪ ಕೆ.(ಬಿಜೆಪಿ) ಪಡೆದ ಮತಗಳು:2370, ಸಮೀಪದ ಪ್ರತಿಸ್ಪರ್ಧಿ ಚಂದ್ರಶೇಖರ್(ಪಕ್ಷೇತರ) ಪಡೆದ ಮತಗಳು:846, ಹನುಮಂತಪ್ಪ ಅವರು 1524 ಮತಗಳ ಅಂತರದ ಜಯಶೀಲರಾಗಿದ್ದಾರೆ.
23ನೇ ವಾರ್ಡ್ :ಕಾಂಗ್ರೆಸ್ ಮುಖಂಡ ಪಿ.ಗಾದೆಪ್ಪ ಅವರು 2663 ಗಳನ್ನು ಪಡೆದು ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಜಿ.ಶ್ರೀನಿವಾಸ್ (ಪಡೆದ ಮತಗಳು 1928) ಅವರನ್ನು 735 ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ.
24ನೇ ವಾರ್ಡ್ ವಿವರ: ವಿಜೇತ ಅಭ್ಯರ್ಥಿ ಶ್ರೀನಿವಾಸ್ ಮೋತ್ಕರ್(ಬಿಜೆಪಿ) ಪಡೆದ ಮತಗಳು:1705, ಸಮೀಪದ ಪ್ರತಿಸ್ಪರ್ಧಿ ನಾರಾ ವಿನಯ್ ಕುಮಾರ್ ರೆಡ್ಡಿ(ಕಾಂಗ್ರೆಸ್) ಪಡೆದ ಮತಗಳು:1333,
ಮೋತ್ಕರ್ ಅವರು 372 ಮತಗಳ ಅಂತರದಿಂದ ರೆಡ್ಡಿ ಅವರನ್ನು ಪರಾಭವಗೊಳಿಸಿದ್ದಾರೆ.
25ನೇ ವಾರ್ಡ್: ಮಾಜಿ ಉಪ ಮೇಯರ್, ಬಿಜೆಪಿಯ ಎಂ.ಗೋವಿಂದರಾಜುಲು ಅವರು 2178 ಮತ ಪಡೆದು ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ಪಕ್ಷದ ಅಕ್ಬರ್ (ಪಡೆದ ಮತಗಳು 1917) ಅವರನ್ನು 261 ಮತಗಳ ಅಂತರದಿಂದ ಪರಾಭವಗೊಳಿಸಿ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ.
26ನೇ ವಾರ್ಡ್ ವಿವರ: ಕಾಂಗ್ರೆಸ್ ಪಕ್ಷದ ಡಿ.ಸುಕುಂ ಅವರು 3677, ಮತ ಪಡೆದು ತಮ್ಮ ಸಮೀಪದ ಪ್ರತಿಸ್ಪರ್ಧಿಬಿಜೆಪಿಯ ಜಿ.ಮಂಜುಳಾ(ಪಡೆದ ಮತಗಳು1772,) ಅವರನ್ನು 1905 ಮತಗಳ ಭಾರಿ ಅಂತರದಿಂದ ಪರಾಭವಗೊಳಿಸಿದರು.
27ನೇ ವಾರ್ಡ್ :ವಿಜೇತ ಅಭ್ಯರ್ಥಿ ಕಾಂಗ್ರೆಸ್ ನ ನಿಯಾಜ್ ಅಹ್ಮದ್ ಟಿ ಅವರು 3255 ಮತಗಳನ್ನು ಪಡೆದು ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಎಸ್ ಮಹಮ್ಮದ್ ( ಪಡೆದ ಮತಗಳು 1013) ಅವರನ್ನು 2242 ಮತಗಳ ಭಾರಿ ಅಂತರದಿಂದ ಪರಾಭವಗೊಳಿಸಿದರು.
28ನೇ ವಾರ್ಡ್: ವಿಜೇತ ಅಭ್ಯರ್ಥಿ ಕಾಂಗ್ರೆಸ್ ಪಕ್ಷದ ಮುಬೀನಾ ಬಿ ಅವರು 3019 ಮತಗಳನ್ನು ಪಡೆದು ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಸಾಹೇರಾಬಿ (ಪಡೆದ ಮತಗಳು:1221,) ಅವರನ್ನು 1898 ಮತಗಳ ಭಾರಿ ಅಂತರದಿಂದ ಸೋಲುಣಿಸಿದ್ದಾರೆ.
29ನೇ ವಾರ್ಡ್: ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಜಿ.ಶಿಲ್ಪಾ ಅವರು 4557 ಪಡೆದು ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಗಂಗಮ್ಮ ಚೌದರಿ(ಪಡೆದ ಮತಗಳು2097) ಅವರನ್ನು 2460 ಮತಗಳ ಭಾರಿ ಅಂತರದ ಜಯ. ಪರಾಭವಗೊಳಿಸಿದ್ದಾರೆ.
30ನೇ ವಾರ್ಡ್ : ಕಾಂಗ್ರೆಸ್ ಪಕ್ಷದ ವಿಜೇತ ಅಭ್ಯರ್ಥಿ ಎನ್.ಎಂ.ಡಿ.ಆಸೀಫ್ ಭಾಷಾ ಅವರು :4055 ಮತಗಳನ್ನು ಪಡೆದುತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ವಿ.ನಾಗರಾಜ (ಪಡೆದ ಮತಗಳು:1519) ಅವರನ್ನು 2536 ಮತಗಳ ಭಾರಿ ಅಂತರದಿಂದ ಪರಾಭವಗೊಳಿಸಿದ್ದಾರೆ.
31ನೇ ವಾರ್ಡ್: ಕಾಂಗ್ರೆಸ್ ಪಕ್ಷದ ವಿಜೇತ ಅಭ್ಯರ್ಥಿ ಶ್ವೇತಾ ಬಿ (ಪಡೆದ ಮತಗಳು:2269) ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಜೆ.ಉಮಾದೇವಿ (ಪಡೆದ ಮತಗಳು:1050, ಅವರನ್ನು 1219 ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ
32ನೇ ವಾರ್ಡ್ ವಿವರ: ಸ್ವತಂತ್ರ ಅಭ್ಯರ್ಥಿ ಕೆ.ಮಂಜುಳಾ( ಪಡೆದ ಮತಗಳು:3442) ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಕೆ.ಎಂ.ಗಂಗಮ್ಮ( ಪಡೆದ ಮತಗಳು:2313,) ಅವರನ್ನು 1129 ಮತಗಳ ಅಂತರದ ಪರಾಭವಗೊಳಿಸಿದರು.
33ನೇ ವಾರ್ಡ್: ಕಾಂಗ್ರೆಸ್ ಪಕ್ಷದ ಬಿ.ಜಾನಕಿ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಬಿ.ಸುನೀತಾ ಅವರನ್ನು 262 ಮತಗಳ ಅಂತರದಿಂದ ಸೋಲುಣಿಸಿದ್ದಾರೆ.
ಜಾನಕಿ ಅವರು ಪಡೆದ ಮತಗಳು:2046, ಬಿ.ಸುನಿತಾ ಪಡೆದ ಮತಗಳು:1784.
34ನೇ ವಾರ್ಡ್: ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಂ.ರಾಜೇಶ್ವರಿ ಅವರು ) 2762 ಮತಗಳನ್ನು ಪಡೆದು ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಪಿ.ಉಜ್ವಲ( ಪಡೆದ ಮತಗಳು:1425) ಅವರನ್ನು 1337 ಮತಗಳ ಅಂತರದಿಂದ ಪರಾಭವಗೊಳಿಸಿದರು.
35ನೇ ವಾರ್ಡ್: ಪಕ್ಷೇತರ ವಿಜೇತ ಅಭ್ಯರ್ಥಿ ವಿ.ಶ್ರೀನಿವಾಸುಲು ಅವರು ತಮ್ಮಸಮೀಪದ ಪ್ರತಿಸ್ಪರ್ಧಿ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ಪಕ್ಷದ ಹೆಚ್.ಸಿದ್ದೇಶ್ ಅವರನ್ನು 1737 ಮತಗಳ ಅಂತರದ ಪರಾಭವಗೊಳಿಸಿ ವಿಜಯದ ನಗೆ ಬೀರಿದರು.
36ನೇ ವಾರ್ಡ್: ಬಿಜೆಪಿ ಪಕ್ಚದ ಅಭ್ಯರ್ಥಿ ಪಿ.ಕಲ್ಪನಾ ಅವರು 2640 ಮತಗಳನ್ನು ಪಡೆದು ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ಪಕ್ಷದ ಟಿ.ಸಂಜೀವಮ್ಮ(ಪಡೆದ ಮತಗಳು:2189,) ಅವರನ್ನು 451 ಮತಗಳ ಅಂತರದಿಂದ ಪರಾಭವಗೊಳಿಸಿದರು.
37ನೇ ವಾರ್ಡ್: ವಿಜೇತ ಅಭ್ಯರ್ಥಿಕಾಂಗ್ರೆಸ್ ಪಕ್ಷದ ಮಾಲನ್ ಬೀ :2005 ಮತ ಪಡೆದು ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಹೇಮಾವತಿ(ಪಡೆದ ಮತಗಳು 1992) ಅವರನ್ನು ಕೇವಲ 13 ಮತಗಳ ಅಂತರದಿಂದ ಪರಾಭವಗೊಳಿಸಿ ಪಾಲಿಕೆಯನ್ನು ಪ್ರವೇಶಿಸಿದರು.
38ನೇ ವಾರ್ಡ್: ಕಾಂಗ್ರೆಸ್ ಪಕ್ಷದ ವಿ.ಕುಬೇರ ಅವರು 3660 ಮತ ಪಡೆದು ತಮ್ಮ ಸಮೀಪದ ಪ್ರತಿಸ್ಪರ್ಧಿ ಪತ್ರಕರ್ತ, ಬಿಜೆಪಿಯ ವಿ.ಅನೂಪ್ ಕುಮಾರ್ (ಪಡೆದ ಮತಗಳು:2151) ಅವರನ್ನು 1509 ಮತಗಳ ಭಾರಿ ಅಂತರದಿಂದ ಪರಾಭವಗೊಳಿಸಿದರು.
39ನೇ ವಾರ್ಡ್: ಕಾಂಗ್ರೆಸ್ ಪಕ್ಷದ ಪಿ.ಶಶಿಕಲಾ ಅವರು 3006 ಮತ ಪಡೆದು ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಕೆ.ಉಮಾದೇವಿ (ಪಡೆದ ಮತಗಳು1620) ಅವರನ್ನು ,1386 ಮತಗಳ ಅಂತರದಿಂದ ಪರಾಭವಗೊಳಿಸಿ ವಿಜಯದ ನಗೆ ಬೀರಿದರು.
*****