ಸಾರ್ಥಕ. ಸೇವೆಯ ಕೊನೆಯಲ್ಲಿ ನೋವಲ್ಲಿ ವಿದಾಯ ಹೇಳಿದ ಪ.ಪೂ.ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ ಆರ್ ನಾಗರಾಜಪ್ಪ

ಬಳ್ಳಾರಿ: ಸರ್ಕಾರಿ ಅಧಿಕಾರಿಯಾಗುವುದು ಸೇವೆ ಮಾಡಲು ದೇವರು ನೀಡಿದ ಅವಕಾಶ ವೆಂದೇ ಭಾವಿಸಿ ತಮ್ಮ ವೃತ್ತಿ ಬದುಕಿನ ಅತ್ಯಂತ ದಕ್ಷ ಆಡಳಿತಗಾರರಾಗಿ ,ಪ್ರಾಮಾಣಿಕವಾಗಿ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸಿದ ಬಳ್ಳಾರಿ ಜಿಲ್ಲಾ ಪ.ಪೂ.ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ ಆರ್ ನಾಗರಾಜಪ್ಪ ಅವರು ಶನಿವಾರ ನಿವೃತ್ತರಾದರು.
ಇಲಾಖೆಯ ಭೋದಕ ಮತ್ತು ಭೋಧಕರೇತರ ಸಿಬ್ಬಂದಿಗಳ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದುತ್ತಿರುವ ಉಪನಿರ್ದೇಶಕ ಬಿ ಆರ್ ನಾಗರಾಜಪ್ಪ ಅವರು ತುಮಕೂರು ಜಿಲ್ಲೆಯ ಪಾವಗಡದಲ್ಲಿ ತಮ್ಮ ಉಪನ್ಯಾಸ ಕ ವೃತ್ತಿ ಜೀವನ ವನ್ನು ಆರಂಭಿಸಿದರು.
ಚಿತ್ರದುರ್ಗದಲ್ಲಿ ಸೇವೆ ಮುಂದುವರಿಸಿ, ಬಳಿಕ‍ ಪ್ರಾಂಶುಪಾಲರಾಗಿ ಬಡ್ತಿ ಹೊಂದಿ ಬಳ್ಳಾರಿ,ಹಚ್ಚೊಳ್ಳಿ,ಕೂಡ್ಲಿಗಿ ಹಲವೆಡೆ ಕರ್ತವ್ಯ ನಿರ್ವಹಿಸಿದ ಶ್ರೀಯುತರು, ಬಳ್ಳಾರಿ ಜಿಲ್ಲಾ ಉಪನಿರ್ದೇಶಕರಾಗಿ ಕಾರ್ಯನಿರ್ವಹಿಸಿದರು.
ಅಧ್ಯಾಪಕ ಸ್ನೇಹಜೀವಿ,ತಾಳ್ಮೆಯ ನಿಧಿ,ಕಲಿಕಾ ತಪಸ್ವಿ ಆಗಿರಬೇಕು ಎಂದು ನಂಬಿಕೊಂಡು ಬಂದ ನಾಗರಾಜಪ್ಪ ಅವರು ಅದೇ ರೀತಿ ನಡೆದುಕೊಂಡರು. ವೃತ್ತಿ ಬದುಕಿನುದ್ದಕ್ಕೂ ಕರ್ತವ್ಯಕ್ಕೆ ಮೊದಲ ಪ್ರಾಶಸ್ತ್ಯ ಕೊಟ್ಟವರು ನಾಗರಾಜಪ್ಪನವರು. ಅದಕ್ಕೆ ಸಾಕ್ಷಿಯೆಂಬಂತೆ ನಿವೃತ್ತಿಯ ಮೂರುದಿನಗಳ ಮುಂಚೆ ಅವರು ತಮ್ಮ ಧರ್ಮ ಪತ್ನಿ ಯನ್ನು ಕಳೆದುಕೊಂಡದ್ದು ಶೋಚನೀಯ ಸಂಗತಿ.
ಆರೋಗ್ಯ ಸರಿ ಇಲ್ಲದ ಅವರ ಪತ್ನಿ ಯನ್ನು ಚಿತ್ರದುರ್ಗದಿಂದ ಬಳ್ಳಾರಿಯ ಆಸ್ಪತ್ರೆಯಲ್ಲಿ ದಾಖಲು ಮಾಡಿದರು.ದುರದೃಷ್ಟವಶಾತ್ ನಿವೃತ್ತಿಯ ಮೂರುದಿನಗಳ ಮುಂಚೆ ಅವರು ತಮ್ಮ ಧರ್ಮ ಪತ್ನಿ ಯನ್ನು ಕಳೆದುಕೊಂಡರು.
ಉಪನಿರ್ದೇಶಕರಾಗಿ ಇದ್ದರೂ ಕಾಲೇಜಿಗೆ ತಪಾಸಣೆಗೆ ಹೋದಾಗ ಪ್ರಾಂಶುಪಾಲರು,ಉಪನ್ಯಾಸಕರ ಬದಲಿಗೆ ಹೆಚ್ಚಾಗಿ ವಿದ್ಯಾರ್ಥಿಗಳ ಬಳಿ ಹೋಗಿ ಸಮಸ್ಯೆಗಳನ್ನಾಲಿಸಿ ಪರಿಹಾರ ನೀಡುತ್ತಿದ್ದರು ಮಾತ್ರವಲ್ಲ ಅರ್ಥಶಾಸ್ತ್ರದ ಪಾಠವನ್ನು ಮಾಡುತ್ತಿದ್ದರು.
ವಿದ್ಯಾರ್ಥಿಗಳ ಹಿತವನ್ನೇ ಬಯಸುತ್ತಿದ್ದ ಇವರು ಸದಾ ಕ್ರಿಯಾಶೀಲರಾಗಿ,ಹಸನ್ಮುಖಿಗಳಾಗಿ ,ಮಾನವತೆ ಮೈವೆತ್ತಂತೆ ತಮ್ಮ ವೃತ್ತಿ ಜೀವನ ವನ್ನು ಸಾರ್ಥಕವಾಗಿ ಪೂರೈಸಿದರು.
ನಾಗರಾಜಪ್ಪ ಅವರ ವಿಶ್ರಾಂತ ಜೀವನ‌ ಸುಖಕರವಾಗಿರಲಿ ಎಂದು ಅವಿಭಜಿತ ಬಳ್ಳಾರಿ ಜಿಲ್ಲೆಯ ಪ್ರಾಂಶುಪಾಲರು,ಉಪನ್ಯಾಸಕರು,ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳ ವೃಂದ ಹ್ರತ್ಪೂರ್ವಕ ವಾಗಿ ಹಾರೈಸಿದೆ.

-ಡಾ. ಶ್ರೀನಿವಾಸ ಮೂರ್ತಿ ಯು
ಉಪನ್ಯಾಸಕರು
ಸರಕಾರಿ ಹೆಣ್ಣುಮಕ್ಕಳ ಪಿಯು ಕಾಲೇಜ್
ಬಳ್ಳಾರಿ