ಹೊಸಪೇಟೆ: ಇತ್ತೇಚೆಗೆ ಅಕಾಲಿಕವಾಗಿ ವಿಧಿವಶರಾದ ಅಂತಾರಾಷ್ಟ್ರೀಯ ವೇಟ್ ಲಿಫ್ಟರ್ ತರಬೇತುದಾರ, ಕ್ರೀಡಾಪಟು ಕೆ. ದಯಾನಂದ ಅವರಿಗೆ ಭಾನುವಾರ ಕಾಲೇಜ್ ಸಹಪಾಠಿಗಳು ನುಡಿ ನಮನ ಸಲ್ಲಿಸಿದರು.
ಹೊಸಪೇಟೆ ವಿಜಯನಗರ ಕಾಲೇಜಿನಲ್ಲಿ 1984 ರಿಂದ 1989ರವರೆಗೆ ಪಿಯುಸಿ-ಬಿಕಾಂ ವಿದ್ಯಾಭ್ಯಾಸ ಮಾಡಿದ ಸಹಪಾಠಿಗಳು ದಯಾನಂದ ಅವರಿಗೆ ಗೂಗಲ್ ಮೀಟ್ ಮೂಲಕ ಶ್ರದ್ಧಾಂಜಲಿ ಅರ್ಪಿಸಿದರು.
ಬಡ ಕುಟುಂಬದಲ್ಲಿ ಜನಿಸಿದ ದಯಾನಂದ್ ತಮ್ಮ ನಿರಂತರ ಪರಿಶ್ರಮದಿಂದ ರಾಷ್ಟ್ರಮಟ್ಟದ ದೇಹಾದಾರ್ಡ್ಯ ಪಟುವಾಗಿ ಗಮನ ಸೆಳೆಯುವ ಮೂಲಕ ಕನ್ನಡ ನಾಡಿಗೆ ಕೀರ್ತಿ ತಂದರು ಎಂದು ಗುಣಗಾನಮಾಡಿದರು.
ಜಮ್ಮು ಮತ್ತು ಕಾಶ್ಮೀರದ ಉದಮಪುರದಲ್ಲಿ ಏ. ೧೦ ರಿಂದ ೧೨ ರವರೆಗೆ ನಡೆದ ರಾಷ್ಟ್ರೀಯ ಬಾಡಿ ಲಿಪ್ಟಿಂಗ್ ಚಾಂಪಿಯನ್ ಶಿಪ್ ಸ್ಪರ್ಧೆಯ ನಿಣಾ೯ಯಕರಾಗಿ ಹಾಗೂ ಕನಾ೯ಟಕದ ಕ್ರೀಡಾಪಟುವಾಗಿ ದಯಾನಂದ್ ಸ್ಪಧೆ೯ಯಲ್ಲಿ ಭಾಗವಹಿಸಿದ್ದರು. ಈ ಪ್ರವಾಸದ ಸಂದರ್ಭದಲ್ಲಿ ಕೋವಿಡ್ 19 ಸೋಂಕು ತಗುಲಿರಬಹುದು ಎಂದು ಸಹಪಾಠಿಗಳು ಸಂಶಯ ವ್ಯಕ್ತಪಡಿಸಿ ದುಃಖಿಸಿದರು.
ದೇಶದ ಕೀರ್ತಿ ಪತಾಕೆ ಹಾರಿಸಿದ ಕ್ರಿಡಾಪಟು ಕೋವಿಡ್ ಗೆ ಬಲಿಯಾಗಿದ್ದು ದುರ್ಧೈವ ಸಂಗತಿ ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.
ನುಡಿ ನಮನ ಕಾರ್ಯಕ್ರಮದಲ್ಲಿ ಕರ್ನಾಟಕ ಮಾಧ್ಯಮಅಕಾಡೆಮಿ ಪ್ರಶಸ್ತಿ ಪುರಸ್ಕೃತ, ಹಿರಿಯ ಪತ್ರಕರ್ತ ಸಿ.ಮಂಜುನಾಥ್, ಜಿಂದಾಲ್ ಕಾರ್ಖಾನೆಯ ಮ್ಯಾನೇಜರ್ ರಮೇಶ್ ಕಂಟ್ಲಿ, ಎಲ್ ಐ ಸಿ ಶಾಖಾಧಿಕಾರಿಗಳಾದ ಪ್ರಕಾಶ್ ಆಚಾರ್ಯ, ಜಿ.ತಳವಾರ್, ಎಲ್ ಐ ಸಿ ಹಿರಿಯ ಸಿಬ್ಬಂದಿಗಳಾದ ಪದ್ಮಜಾ, ಚಂದ್ರಿಕಾ ಮುರಳೀಧರ್, ವೈಶ್ಯ ಕೆರೂರು ಬ್ಯಾಂಕಿ ವ್ಯವಸ್ಥಾಪಕ ಮಲ್ಲಿಕಾರ್ಜುನ ಬಿ ಎಂ, ಉಪನ್ಯಾಸಕಿ ಟಿ ಆರ್ ಸುಮಾ, ಖಾಸಗಿ ಸಂಸ್ಥೆಯೊಂದರ ಮುಖ್ಯಸ್ಥ ಚಂದ್ರಶೇಖರ ಮಣ್ಣೂರು, ತೋಟಗಾರಿಕೆ ಕಾಲೇಜಿನ ಅಧಿಕಾರಿ ಜಾಲಿ ಪ್ರಭುದೇವ್, ಎಂ. ಶ್ರೀನಿವಾಸ್, ದಿಲ್ ಶಾದ್ ಬೇಗಂ, ಸುರೇಶ್ ಕುಮಾರ್(ಕೆಂಚಪ್ಪ), ಆಶಾ ಗೀತಾ, ಮಂಜುನಾಥ ಗುಪ್ತಾ, ಪಿ. ಸಂಪತ್ ಕುಮಾರ್ ಮತ್ತಿತರು ನುಡಿ ನಮನ ಸಲ್ಲಿಸಿದರು.
ಬಿ ಎಂ ಮಲ್ಲಿಕಾರ್ಜುನ , ಪದ್ಮಜಾ, ರಮೇಶ ಕಂಟ್ಲಿ ಮತ್ತು ಸಿ.ಮಂಜುನಾಥ್ ಕಾರ್ಯಕ್ರಮ ನಿರ್ವಹಿಸಿದರು.
ಚಂದ್ರಿಕಾ ಅವರು ತಮ್ಮ ಪತಿ ಎಲ್ ಐ ಸಿ ಹಿರಿಯ ಅಧಿಕಾರಿ ಮುರಳೀಧರ್ ಅವರು ದಯಾನಂದ್ ಕುರಿತು ರಚಿಸಿದ ಕವಿತೆ ವಾಚಿಸಿ ಗಮನ ಸೆಳೆದರು.👇
*🌹🙏🌹ಶ್ರೀ ಕಿಚಿಡಿ ದಯಾನಂದ🌹🙏🌹*
ಓ ಗೆಳೆಯ ದಯಾನಂದ
ನಿನ್ನ ನೆನಪದಷ್ಟೇ
ಉಳಿದಿದೆ ಇಂದಿನಿಂದ,
ನಿನ್ನಿರುವಿಕೆಯು
ನಮಗೆ ನೀಡಿತ್ತು
ಮಹದಾನಂದ,
ಕಾಲೇಜು ದಿನಗಳಲ್ಲಿ
ನಮ್ಮೆಲ್ಲರಿಗೂ
ಆತ್ಮೀಯ ನೀನು,
ನಿನ್ನ ಸಾಧನೆಯಿಂದಲೇ
ಹೊಸಪೇಟೆಯ ಗಡಿದಾಟಿದ
ಹೆಸರುವಾಸಿ ನೀನು,
ವೇಟ್ ಲಿಫ್ಟಿಂಗಿನಲ್ಲಿ
ಪ್ರಶಸ್ತಿ ಸರಮಾಲೆಗಳ
ಧರಿಸಿದವ ನೀನು,
ರಾಷ್ಟ್ರೀಯ,
ಅಂತಾರಾಷ್ಟ್ರೀಯ ಮಟ್ಟದ
ಕ್ರೀಡಾಪಟು ನೀನು,
ಕರುಣೆಯಿಲ್ಲದ ಕ್ರೂರಿ
ಕೊರೋನಾ ಹೆಮ್ಮಾರಿಗೆ
ಬಲಿಯಾದೆ ನೀನು,
ಕುಟುಂಬಕ್ಕೆ ಅಕಾಲಿಕ
ಆಘಾತವ ನೀಡಿ
ಹೋಗಿರುವೆ ನೀನು,
ನಿನ್ನ ಆತ್ಮಕೆ ಶಾಂತಿ ಕೋರುತ
ನಿನ್ನ ಕುಟುಂಬಕ್ಕೆ ಸಾಂತ್ವನವ
ತಿಳಿಸುತಲಿರುವೆವು ನಾವು,
ಎಲ್ಲೇ ಇರು, ಹೇಗೇ ಇರು
ಓ ಗೆಳೆಯ
ದಯಾನಂದ,
ನೆನಪಲೂ ನೀಡುತಲಿರು
ನೀನೆಮಗೆಂದೂ
ಮನಕಾನಂದ.
*(🌹🙏🌹ಅಕಾಲಿಕವಾಗಿ ನಮ್ಮೆಲ್ಲರನ್ನು ಅಗಲಿದ ಗೆಳೆಯನಿಗೊಂದು ಭಾವಪೂರ್ಣ ಅಕ್ಷರ ನಮನ🌹🙏🌹)*
✍️ಗೀತೇಶ್
(ವಿ. ಆರ್. ಮುರಲೀಧರ್)
*****
ಎರಡು ನಿಮಿಷ ಮೌನಾಚರಣೆ: ಕೀರ್ತಿಶೇಷ ಕೆ. ದಯಾನಂದ ಅವರ ಗೌರವಾರ್ಥ ಸಹಪಾಠಿಗಳು ಎರಡು ನಿಮಿಷ ಮೌನಾಚರಣೆ ಮೂಲಕ ಗೌರವ ಸಲ್ಲಿಸಿದರು.
*****