ಬೆಂಗಳೂರು: ಬೆಂಗಳೂರಿನ ಜೆಕ್ ರಿಪಬ್ಲಿಕ್ ಕಾನ್ಸುಲೇಟ್ ಕಚೇರಿ ರಾಜ್ಯಕ್ಕೆ 70 ಕೊರೊವೆಂಟ್ ವೆಂಟಿಲೇಟರ್ ಗಳನ್ನು ಕೊಡುಗೆಯಾಗಿ ನೀಡಲು ಮುಂದಾಗಿದೆ.
ಈ ಕುರಿತಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಸೋಮವಾರ ಭೇಟಿ ಮಾಡಿದ ಜೆಕ್ ರಿಪಬ್ಲಿಕ್ ನ ಕಾನ್ಸಲ್ ಸಿ.ಎಸ್.ಪ್ರಾಕಾಶ್ ಅವರು ಮೈಕೋ ಮೆಡಿಕಲ್ ಎಸ್.ಆರ್.ಒ ಸಂಸ್ಥೆಯು ಈ ವೆಂಟಿಲೇಟರ್ ಗಳನ್ನು ರಾಜ್ಯದಲ್ಲಿ ಕೋವಿಡ್ 19 ಸೋಂಕಿತರ ನೆರವಿಗೆಂದು ಕೊಡುಗೆಯಾಗಿ ನೀಡಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಪೆರು ಕಾನ್ಸುಲೇಟ್ ಕಚೇರಿಯ ವಿಕ್ರಂ ವಿಶ್ವನಾಥ್, ರುವಾಂಡಾ ಹಾನರರಿ ಕೌನ್ಸಿಲ್ ಮೋಹನ್ ಸುರೇಶ್ ಉಪಸ್ಥಿತರಿದ್ದರು.
*****